ಜ್ಞಾನವ್ಯಾಪಿಯ ಎರಡನೇ ದಿನದ ಪರಿಶೀಲನೆ ಪೂರ್ಣ

ಇಂದು ಉಳಿದಿರುವ ೨೦ ಶೇಕಡ ಪರಿಶೀಲನೆ ಪೂರ್ಣವಾಗುವುದು.

ವಾರಾಣಸಿ (ಉತ್ತರ ಪ್ರದೇಶ) : ಸ್ಥಳೀಯ ಜ್ಞಾನವ್ಯಾಪಿ ಮಸೀದಿಯ ಎರಡನೇ ದಿನದ ಪರಿಶೀಲನೆಯ ಕೆಲಸ ಪೂರ್ಣವಾಗಿದೆ. ಎರಡು ದಿನದಲ್ಲಿ ಶೇಕಡ ೮೦ ಪರಿಶೀಲನೆ ಮತ್ತು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಮೇ ೧೬ ರಂದು ಒಂದರಿಂದ ಒಂದುವರೆ ಗಂಟೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಯುವುದು. ಮೇ ೧೭ ರಂದು ಸಂಪೂರ್ಣ ಪರಿಶೀಲನೆ ಮತ್ತು ಚಿತ್ರೀಕರಣ ಇದರ ವರದಿ ದಿವಾನಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು.

೧. ಮಸೀದಿಯ ೪ ನೆಲಮಾಳಿಗೆ ಮತ್ತು ಪರಿಸರದಲ್ಲಿ ಕಸದ ರಾಶಿ ಮತ್ತು ದೊಡ್ಡ ಪ್ರಮಾಣದ ಧೂಳು ಇರುವುದರಿಂದ ಸ್ವಚ್ಛತೆ ನಡೆಸಿ ಚಿತ್ರೀಕರಣ ಮಾಡುವುದರಲ್ಲಿ ಅಡಚಣೆ ನಿರ್ಮಾಣವಾಗಿರುವುದರಿಂದ ಚಿತ್ರೀಕರಣ ಪೂರ್ಣ ಮಾಡಲು ಸಾಧ್ಯವಾಗಲಿಲ್ಲ. ಸ್ವಚ್ಛತೆಗಾಗಿ ೧೦ ಸ್ವಚ್ಛತಾ ಕಾರ್ಮಿಕರನ್ನು ನಿರ್ಮಿಸಲಾಗಿದ್ದರೂ ಅಲ್ಲಿ ವಿದ್ಯುತ್ ಇಲ್ಲದೇ ಇರುವುದರಿಂದ ಬ್ಯಾಟರಿಯ ಸಹಾಯದಿಂದ ಕೆಲಸ ಮಾಡಲಾಗುತ್ತಿತ್ತು.

೨. ಮೇ ೧೫ ರಂದು ನಡೆದಿರುವ ಪರಿಶೀಲನೆಯಲ್ಲಿ ಡ್ರೋನ್ ಸಹಾಯದಿಂದ ಜ್ಞಾನವ್ಯಾಪಿಯ ಕೆತ್ತನೆಗಳಿರುವ ಗುಮ್ಮಟಗಳ ಚಿತ್ರೀಕರಣ ಮಾಡಲಾಯಿತು. ನೀರಿನ ಕೊಳದ ಸುತ್ತಮುತ್ತಲಿನ ಛಾವಣಿ, ನಾಲ್ಕು ನೆಲಮನೆ, ಹೊರಗಿನ ಗೋಡೆಗಳು ಮತ್ತು ಜಗುಲಿಯ ಪರಿಶೀಲನೆ ಮತ್ತು ಚಿತ್ರೀಕರಣ ನಡೆದಿದೆ.

೩. ಮೇ ೧೫ ರಂದು ಪರಿಶೀಲನೆಯ ಸಮಯದಲ್ಲಿ ಮೇ ೧೪ ರ ತುಲನೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಪೊಲೀಸರು ಪಥಸಂಚಲನ ನಡೆಸಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜನರಿಗೆ ತಿಳಿಹೇಳಿದರು.

ನಮ್ಮ ದಾವೆ ಇನ್ನಷ್ಟು ಹೆಚ್ಚು ಬಲಶಾಲಿಯಾಗಿದೆ ! – ಪೂ.(ನ್ಯಾಯವಾದಿ) ಹರಿಶಂಕರ ಜೈನ

ಪೂ.(ನ್ಯಾಯವಾದಿ) ಹರಿಶಂಕರ ಜೈನ

ಈ ಮೊಕದ್ದಮೆಯಲ್ಲಿ ಹಿಂದೂಪರ ನ್ಯಾಯವಾದಿ ಪೂ. ಹರಿಶಂಕರ ಜೈನ ಇವರು ಪರಿಶೀಲನೆಯ ನಂತರ ನಮ್ಮ ದಾವೆ ಇನ್ನಷ್ಟು ಹೆಚ್ಚು ಬಲಶಾಲಿಯಾಗಿದೆ. ಪರಿಶೀಲೆನೆಯ ಇಘ ಪೂರ್ಣಗೊಂಡಿಲ್ಲ, ಅದು ನಾಳೆಯೂ ನಡೆಯುವುದು ಎಂದು ಹೇಳಿದರು.

ಹಿಂದೂ ಪಕ್ಷದ ಅನ್ಯ ನ್ಯಾಯವಾದಿಗಳು ಪರಿಶೀಲೆನೆ ಶೇಕಡ ೮೦ ರಷ್ಟು ಮುಗಿದಿದೆ. ಉಳಿದಿರುವ ಪರಿಶೀಲೆನೆ ನಾಳೆ ಒಂದರಿಂದ ಒಂದುವರೆ ಗಂಟೆಯಲ್ಲಿ ಪೂರ್ಣವಾಗುವುದು. ಚಿತ್ರೀಕರಣ ಮತ್ತು ಛಾಯಾಚಿತ್ರಗಳು ಮೆಮರಿ ಕಾರ್ಡ್ ಸಂರಕ್ಷಿಸಲಾಗಿದೆ. ಎರಡು ದಿನ ಹೊಸ ಮೆಮರಿ ಕಾರ್ಡ್ ಉಪಯೋಗಿಸಲಾಗಿದೆ. ಪರಿಶೀಲೆನೆಯ ವಿಷಯದಲ್ಲಿ ಎರಡೂ ಪಕ್ಷಗಳು ಸಂತುಷ್ಟರಾಗಿದ್ದಾರೆ. ನ್ಯಾಯಾಲಯದ ಆದೇಶದಿಂದ ಈ ವಿಷಯದಲ್ಲಿ ನಾವು ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ. ಎಂದು ಸ್ಪಷ್ಟಪಡಿಸಿದರು.