ಶ್ರೀವೈಷ್ಣೋ ದೇವಿಗೆ ತೆರಳಿದ ಶ್ರದ್ಧಾಳುಗಳ ಬಸ್ಸಿಗೆ ಬೆಂಕಿ : ಭಯೋತ್ಪಾದಕ ದಾಳಿಯ ಸಾಧ್ಯತೆ !

ಜಮ್ಮು – ಇಲ್ಲಿಯ ಶ್ರೀವೈಷ್ಣೋ ದೇವಿಯ ದರ್ಶನಕ್ಕೆ ತೆರಳಿದ ಶ್ರದ್ಧಾಳುಗಳ ಬಸ್ಸಿಗೆ ಮೇ ೨೩ ರಂದು ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡಿತು. ಈ ಬಸ್ಸು ಕಟರಾದಿಂದ ಜಮ್ಮು ಕಡೆಗೆ ಹೋಗುತ್ತಿತ್ತು. ಅಗ್ನಿ ಅನಾಹುತದಲ್ಲಿ ೪ ಜನರ ಮೃತಪಟ್ಟಿದ್ದಾರೆ. ಹಾಗೂ ೨೦ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಸಾಧ್ಯತೆಯ ಬಗ್ಗೆ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಈ ಬಸ್ಸಿಗೆ ಸ್ಟಿಕಿ ಬಾಂಬ್ (ಈ ಬಾಂಬು ಯಾವುದಾದರೊಂದು ಸ್ಥಳದಲ್ಲಿ ಅಂಟಿಸಲಾಗುತ್ತದೆ) ಸಹಾಯದಿಂದ ಭಯೋತ್ಪಾದಕರು ಬೆಂಕಿ ಹಚ್ಚಿರಬಹುದೆಂದು ಹೇಳಲಾಗುತ್ತಿದೆ. ಈ ಘಟನೆಯ ಹೊಣೆಯನ್ನು ಜಮ್ಮು ಕಾಶ್ಮೀರ ಫ್ರೀಡಂ ಫೈಟರ್ ಈ ಸಂಘಟನೆ ವಹಿಸಿದೆ.

ಈ ವಿಷಯದಲ್ಲಿ ಜಮ್ಮು-ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾ ಸಂಚಾಲಕರು ಮುಕೇಶ ಸಿಂಹ ‘ನಮಗೆ ಪ್ರಾಥಮಿಕ ವಿಚಾರಣೆಯಲ್ಲಿ ಸ್ಫೋಟಕದ ರೀತಿ ಏನು ಸಿಕ್ಕಿಲ್ಲ. ಆದರೆ ಬಸ್ಸಿನಲ್ಲಿನ ಜನರು ಮತ್ತು ಘಟನಾ ಸ್ಥಳದ ಹತ್ತಿರದ ಜನರು ಇವರು ಅಲ್ಲಿ ಸ್ಫೋಟದ ಧ್ವನಿ ಕೇಳಿದ್ದಾರೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಇದು ಏನಾದರೂ ಭಯೋತ್ಪಾದಕರ ದಾಳಿ ಆಗಿದ್ದರೆ, ಈಗ ಜಮ್ಮುವಿನಲ್ಲಿಯೂ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಹೇಳಬೇಕಾಗುತ್ತದೆ. ಮುಂದಿನ ತಿಂಗಳು ಪ್ರಾರಂಭವಾಗುವ ಅಮರನಾಥ ಯಾತ್ರೆಗೆ ದೊಡ್ಡ ಅಪಾಯ ನಿರ್ಮಾಣವಾಗಿದೆ. ಇದನ್ನು ನೋಡಿದರೆ ಹಿಂದೂಗಳು ಮತ್ತು ಹಿಂದೂ ಸಂಘಟನೆಗಳು ಒಕ್ಕೊರಳಿನಿಂದ ಸರಕಾರದ ಮೇಲೆ ಸುರಕ್ಷತೆಗಾಗಿ ಒತ್ತಡ ಹೇರಬೇಕು.