ಜೈಪುರ (ರಾಜಸ್ಥಾನ) – ರಾಜಸ್ಥಾನದ ಮಂತ್ರಿ ಮಹೇಶ ಜೋಶಿಯವರ ಮಗ ರೋಹಿತ ಜೋಶಿ ಇವನ ಮೇಲೆ ಓರ್ವ ೨೩ ವರ್ಷದ ಯುವತಿಗೆ ಮದುವೆಯ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣ ದೆಹಲಿಯಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ರೋಹಿತನನ್ನು ಬಂಧಿಸಲು ದೆಹಲಿ ಪೊಲೀಸರ ಒಂದು ತಂಡ ೧೫ ಮೇಯಂದು ಅವರ ಮನೆಗೆ ಹೋಗಿತ್ತು. ಮಹೇಶ ಜೋಶಿಯವರ ಎರಡು ಮನೆಗಳ ಮೇಲೂ ದಾಳಿ ನಡೆಸಲಾಗಿದೆ; ಆದರೆ ರೋಹಿತ ಸಿಗಲಿಲ್ಲ. ಆದ್ದರಿಂದ ಪೊಲೀಸರು ಆರೋಪಿ ರೋಹಿತ ಜೋಶಿಗೆ ಸಮನ್ಸ ಜಾರಿ ಮಾಡಿದ್ದು, ೧೮ ಮೇ ವರೆಗೆ ಠಾಣೆಯಲ್ಲಿ ಹಾಜರಾಗುವಂತೆ ಸೂಚನೆ ಕೊಡಲಾಗಿದೆ.
Rajasthan mantri’s son summoned; #Delhi cops paste notice on #Rajasthan min’s house. @ankurwadhawan joins in for more. #ITVideo pic.twitter.com/lgDWl8X0mp
— IndiaToday (@IndiaToday) May 15, 2022
ಮೊದಲನೇ ಸಲ ಭೇಟಿ ಆದ ನಂತರ ರೋಹಿತನು ನನಗೆ ಮದ್ಯಪಾನ ಮಾಡಿಸಿ ನಗ್ನ ಫೊಟೊ ತೆಗೆದಿದ್ದಾನೆ ಮತ್ತು ವೀಡಿಯೊಗಳನ್ನು ಮಾಡಿದ್ದಾನೆ. ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಬಲಾತ್ಕಾರದಿಂದಾಗಿ ಸಂತ್ರಸ್ತೆ ಗರ್ಭಿಣಿಯಾದ ಕೆಲವು ದಿವಸಗಳ ನಂತರ ರೋಹಿತನು ಆಕೆಗೆ ಗರ್ಭಪಾತ ಮಾಡುವದಕ್ಕಾಗಿ ಒತ್ತಡ ಹೇರಿದ್ದ; ಆದರೆ ಯುವತಿಯು ಹಾಗೆ ಮಾಡಲಿಲ್ಲ.
ಸಂಪಾದಕೀಯ ನಿಲುವು
ಕಾಂಗ್ರೆಸ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ವಾಡ್ರಾ ಈ ವಿಷಯದ ಬಗ್ಗೆ ಏನಾದರೂ ಹೇಳುತ್ತಾರೆಯೇ? ಆ ಸಂತ್ರಸ್ತ ಯುವತಿಗೆ ನ್ಯಾಯಕೊಡಿಸಬಹುದೇ? |