ಆಸ್ಸಾಂನಲ್ಲಿ ಜಿಹಾದಿ ಚಟುವಟಿಕೆ ನಡೆಸುತ್ತಿರುವ ೭೦೦ ಮದರಸಾಗಳು ಸ್ಥಗಿತ !

ಭಾರತಾದ್ಯಂತ ಅನೇಕ ಮದರಸಾಗಳು ಜಿಹಾದಿಗಳಿಗೆ ಅಡಗುತಾಣವಾಗಿದೆ ಎನ್ನುವುದು ಅನೇಕ ಬಾರಿ ಬಯಲಾಗಿದೆ. ಇದರಿಂದ ಇಂತಹ ಕಾನೂನು ಈಗ ಕೇವಲ ಆಸ್ಸಾಂಗಷ್ಟೇ ಸೀಮಿತವಾಗಿರದೇ ಕೇಂದ್ರಸರಕಾರವು ಅದನ್ನು ದೇಶಾದ್ಯಂತ ಮಾಡುವುದು ಅಪೇಕ್ಷಿತವಿದೆ

ಶುಕ್ರವಾರದಂದು ರಜೆ ನೀಡುವ ಶಾಲೆಗಳ ಪಟ್ಟಿ ಕೇಳಿದ ಬಿಹಾರ ಸರಕಾರ !

ಬಿಹಾರದ ೫೦೦ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ನೀಡುವ ವಿಷಯ

ವಾರಾಣಸಿಯಂತಹ ಜಾಗ ನಾನು ಜಗತ್ತಿನಲ್ಲಿ ಬೇರೆಲ್ಲೂ ನೋಡಿಲ್ಲ ! – ಜಗತ್ಪ್ರಸಿದ್ಧ ನಟ ಬ್ರಾಡ್ ಪಿಟ್

ನಾನು ಈವರೆಗೆ ಎಷ್ಟೋ ಬಾರಿ ಜಗತ್ತನ್ನು ತಿರುಗಿ ಬಂದಿದ್ದೇನೆ, ಅದರಲ್ಲಿ ಈ ನಗರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನ ಇದೆ, ಎಂದು ಜಗತ್ಪ್ರಸಿದ್ಧ ನಾಯಕ-ನಟ ಮತ್ತು ಚಲನಚಿತ್ರ ನಿರ್ಮಾಪಕ ಬ್ರಾಡ್ ಪಿಟ್ ಹೇಳಿದರು.

ರಾಮಸೇತು ಚಲನಚಿತ್ರದ ವಿವಾದ : ನಟ ಅಕ್ಷಯ ಕುಮಾರ ಬಂಧನಕ್ಕೆ ಒತ್ತಾಯಿಸಿದ ಡಾ. ಸುಬ್ರಮಣಿಯನ್ ಸ್ವಾಮಿ !

ಭಾಜಪದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ನಟ ಅಕ್ಷಯ ಕುಮಾರ ವಿರುದ್ಧ ದೂರನ್ನು ದಾಖಲಿಸಲಿದ್ದಾರೆ !

ದೆಹಲಿಯಲ್ಲಿ ಪಿ.ಎಫ್.ಐ. ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಜುಲೈ ೩೦ ರಂದು ಇಲ್ಲಿನ ಝಂಡೆವಾಲನ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು; ಆದರೆ ದೆಹಲಿ ಪೊಲೀಸರು ಇದಕ್ಕೆ ತಡೆ ಒಡ್ಡಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಮಂಗಳೂರು ಇಲ್ಲಿಯ ಅಜ್ಞಾತರಿಂದ ಮುಸಲ್ಮಾನ ಯುವಕನ ಹತ್ಯೆ !

ಇಲ್ಲಿಯ ಸೂರತ್ಕಲ್‌ನಲ್ಲಿ ೪-೫ ಅಪರಿಚಿತ ದುಶ್ಕರ್ಮಿಗಳಿಂದ ಜುಲೈ ೨೮ ರಂದು ರಾತ್ರಿ ಸುಮಾರು ೮ ಗಂಟೆಗೆ ಮಹಮ್ಮದ್ ಫಾಜೀಲನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರ ನಂತರ ಪೊಲೀಸರು ಇಲ್ಲಿ ನಿಷೇಧಾಜ್ಞೆ ಜಾರಿ ಮಾಡಿದರು, ಎಂದು ಮಂಗಳೂರು ಪೊಲೀಸ ಆಯುಕ್ತ ಎನ್. ಶಶಿ ಕುಮಾರ ಇವರು ಮಾಹಿತಿ ನೀಡಿದರು.

೧೯೨೯ರಲ್ಲಿ ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಮೂರ್ತಿ ಅಮೇರಿಕಾದಲ್ಲಿ ಪತ್ತೆ !

ತಮಿಳುನಾಡು ರಾಜ್ಯದ ನಾಗಾಪಟ್ಟಿಣಂ ದೇವಸ್ಥಾನದಿಂದ ೧೯೨೯ ರಲ್ಲಿ ರಾಣಿ ಸೆಂಬಿಯನ್ ಮಹಾದೇವಿಯ ಹಿತ್ತಾಳೆಯ ಮೂರ್ತಿ ಕಳ್ಳತನವಾಗಿತ್ತು. ಈ ಮೂರ್ತಿ ಅಮೇರಿಕಾದ ವಾಶಿಂಗಟನ್‌ನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ್’ ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ಪೊಲಿಸರು ಅದನ್ನು ಮರಳಿ ತರಲು ಪ್ರಯತ್ನ ಪ್ರಾರಂಭಿಸಿದ್ದಾರೆ.

ಅಪ್ರಾಪ್ತ ಹುಡುಗಿಯರ ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೇರಳದ ಪಾದ್ರಿಯ ಬಂಧನ

ಕೇರಳದಲ್ಲಿ ಅನ್ಯ ರಾಜ್ಯಗಳಿಂದ ಅಪ್ರಾಪ್ತ ಹುಡಗಿಯರನ್ನು ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೊಝಿಕೊಡ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಅರ್.ಪಿ.ಎಫ್) ಓರ್ವ ಚರ್ಚ್ ಪಾದ್ರಿಯನ್ನು ಬಂಧಿಸಿದ್ದಾರೆ. ಜೇಕಬ ವರ್ಗೀಸ ಆರೋಪಿಯಾಗಿದ್ದು ಅವನು ಕರುಣಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕನಾಗಿದ್ದನು.

ಸಂಭಲ ಮದರಸಾದಲ್ಲಿ ಮೌಲವಿಯಿಂದ ೬ ವರ್ಷದ ಹುಡುಗಿಯ ಮೇಲೆ ಬಲತ್ಕಾರ

ಉತ್ತರ ಪ್ರದೇಶದ ಸಂಭಲ ಜಿಲ್ಲೆಯ ಓರ್ವ ಮೌಲವಿಯು ಮದರಸಾದಲ್ಲಿ ಕಲಿಯಲು ಬರುವ ೬ ವರುಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯ ಸಂಬಂಧಿಕರು ನೀಡಿರುವ ದೂರಿನ ಮೇಲೆ ಪೊಲೀಸರು ಮೌಲವಿ ವಿರುದ್ಧ ಆರೋಪ ದಾಖಲಿಸಿಕೊಂಡಿದ್ದಾರೆ. ಅದರ ನಂತರ ಪೊಲೀಸರು ಆರೋಪಿ ಮೌಲವಿಯನ್ನು ಬಂಧಿಸಿದ್ದಾರೆ.