ಬಿಹಾರದ ೫೦೦ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ನೀಡುವ ವಿಷಯ
ಪಾಟಲಿಪುತ್ರ (ಬಿಹಾರ) – ಬಿಹಾರದಲ್ಲಿ ಮುಸಲ್ಮಾನರ ಪ್ರಾಬಲ್ಯವಿರುವ ಭಾಗದಲ್ಲಿ ೫೦೦ ಕ್ಕೂ ಹೆಚ್ಚಿನ ಸರಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿರುವುದು ಬೆಳಕಿಗೆ ಬಂದ ನಂತರ ಬಿಹಾರ ಸರಕಾರ ಈ ಶಾಲೆಗಳ ಪಟ್ಟಿ ತರಿಸಿಕೊಳ್ಳಲಿದೆ.
೧. ಬಿಹಾರದ ಒಕ್ಕೂಟ ಸರಕಾರದ ಭಾಗವಾಗಿರುವ ಭಾಜಪ ರಾಜ್ಯದ ಶಾಲೆಗಳಿಗೆ ಒಂದೇ ದಿನ ರಜೆ ಇರಬೇಕೆಂದು ಹೇಳಿದ್ದು, ಆದರೆ ಅಧಿಕಾರದಲ್ಲಿರುವ ಜನತಾದಳ (ಸಂಯುಕ್ತ) ಮತ್ತು ಹಿಂದೂಸ್ಥಾನಿ ಅವಾಮ್ ಮೋರ್ಚಾ (ಜಾತ್ಯತೀತ) ಇವರ ಪ್ರಕಾರ ಸಂಪೂರ್ಣ ಪರಂಪರೆ ಗಮನಕ್ಕೆ ಇಟ್ಟುಕೊಂಡು ಯೋಚನೆ ಮಾಡಬೇಕು.
೨. ಬಿಹಾರದ ಶಿಕ್ಷಣ ಸಚಿವರು ಮತ್ತು ಜನತಾದಳ (ಸಂಯುಕ್ತ) ಪಕ್ಷದ ನಾಯಕರಾದ ವಿಜಯಕುಮಾರ ಚೌಧರಿ ಇವರು ಈ ಶಾಲೆಗಳ ಪಟ್ಟಿ ಹಾಗೂ ಅಧಿಕಾರಿಗಳಿಂದ ಉತ್ತರ ಕೇಳಿದ್ದಾರೆ.
೩. ಜನತಾದಳ (ಸಂಯುಕ್ತ) ಪಕ್ಷದ ನಾಯಕ ಉಪೇಂದ್ರ ಕುಶವಾಹಹಾ ಇವರ ಅಭಿಪ್ರಾಯದ ಪ್ರಕಾರ ವಿನಾಕಾರಣ ವಾದ ಸೃಷ್ಟಿಸಲಾಗುತ್ತಿದೆ. (ಕಾನೂನಿನ ಉಲ್ಲಂಘನೆ ಆಗುತ್ತಿದ್ದರೆ ಅದನ್ನು ವಿನಾಕಾರಣ ವಿವಾದ ಎನ್ನುವವರಿಗೆ ಈ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದನಿಸುತ್ತಿಲ್ಲ, ಇದೇ ಸ್ಪಷ್ಟವಾಗುತ್ತದೆ! – ಸಂಪಾದಕರು)
ಕಾಮೇಶ್ವರ ಸಿಂಹ ದರಭಂಗಾ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರತಿ ತಿಂಗಳು ಪ್ರತಿಪದೆಗೆ ಮತ್ತು ಅಷ್ಟಮಿಗೆ ರಜೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
೪. ಯಾವುದೇ ವಿದ್ಯಾರ್ಥಿ ಮತ್ತು ಪೋಷಕರಿಗೆ ಅಡಚಣೆ ಇರದೇ ಇರುವಾಗ, ಕೆಲವು ಜನರ ಹೇಳಿಕೆಯ ಮೇಲೆ ಈ ವಿವಾದ ಏಕೆ ? ಎಂದು ಜಾತ್ಯತೀತ ಪಕ್ಷದ ವಕ್ತಾರರು ದಾನಿಶ ರಿಜವಾನ ಕೇಳಿದರು. (ಇವು ಸರಕಾರಿ ಶಾಲೆಗಳು. ಇದರ ಖರ್ಚು ಪೋಷಕರು ಮತ್ತು ವಿದ್ಯಾರ್ಥಿಗಳು ವಹಿಸುವುದಿಲ್ಲ, ಸರಕಾರ ವಹಿಸುತ್ತದೆ. ಸರಕಾರ ಇದಕ್ಕಾಗಿ ಕೆಲವು ನಿಯಮಗಳನ್ನು ಮಾಡಿದೆ, ಅದರ ಉಲ್ಲಂಘನೆ ಆಗುತ್ತಿದ್ದರೆ, ಆಗ ಸರಕಾರ ಅದರ ಮೇಲೆ ಕ್ರಮ ಕೈಗೊಳ್ಳಬೇಕು. ಯಾರಿಗೆ ಅದು ಮಾನ್ಯವಿಲ್ಲ, ಅವರು ಶಾಲೆಯಿಂದ ಹೆಸರು ತೆಗೆಯಬೇಕು ! – ಸಂಪಾದಕರು)
ಸಂಪಾದಕೀಯ ನಿಲುವು
|