ಮಂಗಳೂರು ಇಲ್ಲಿಯ ಅಜ್ಞಾತರಿಂದ ಮುಸಲ್ಮಾನ ಯುವಕನ ಹತ್ಯೆ !

  • ಸೂರತ್ಕಲ್‌ನಲ್ಲಿ ನಿಷೇಧಾಜ್ಞೆ

  • ಮನೆಯಲ್ಲಿಯೆ ನಮಾಜ್ ಮಾಡುವಂತೆ ಪೊಲೀಸರಿಂದ ಮುಸಲ್ಮಾನರಿಗೆ ಮನವಿ

ಮಂಗಳೂರು – ಇಲ್ಲಿಯ ಸೂರತ್ಕಲ್‌ನಲ್ಲಿ ೪-೫ ಅಪರಿಚಿತ ದುಶ್ಕರ್ಮಿಗಳಿಂದ ಜುಲೈ ೨೮ ರಂದು ರಾತ್ರಿ ಸುಮಾರು ೮ ಗಂಟೆಗೆ ಮಹಮ್ಮದ್ ಫಾಜೀಲನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರ ನಂತರ ಪೊಲೀಸರು ಇಲ್ಲಿ ನಿಷೇಧಾಜ್ಞೆ ಜಾರಿ ಮಾಡಿದರು, ಎಂದು ಮಂಗಳೂರು ಪೊಲೀಸ ಆಯುಕ್ತ ಎನ್. ಶಶಿ ಕುಮಾರ ಇವರು ಮಾಹಿತಿ ನೀಡಿದರು. ಈ ಘಟನೆಯ ನಂತರ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ಮುಸಲ್ಮಾನರಿಗೆ ಮನೆಯಲ್ಲಿಯೇ ನಮಾಜ ಮಾಡಲು ವಿನಂತಿಸಿದರು. ‘ಈ ಪ್ರಕರಣದಲ್ಲಿ ಆದಷ್ಟು ಬೇಗನೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಯಾವುದೇ ಗಾಳಿ ಸುದ್ದಿಗಳ ಮೇಲೆ ವಿಶ್ವಾಸ ಇಡಬಾರದು’, ಎಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಳೆದ ೩ ದಿನದಲ್ಲಿ ೨ ಮುಸಲ್ಮಾನ್ ಹಾಗೂ ಒಬ್ಬ ಹಿಂದೂವಿನ ಹತ್ಯೆಯಾಗಿದೆ.

ಹಂತಕರು ಹತ್ಯೆ ಮಾಡುವಾಗ ಮುಖದ ಮೇಲೆ ಮಾಸ್ಕ ಹಾಕಿಕೊಂಡಿದ್ದರು. ಹಂತಕರು ಒಂದು ಚತುಶ್ಚಕ್ರದ ವಾಹನದಿಂದ ಬಂದಿದ್ದರು. ಫಾಜೀಲ ಇಲ್ಲಿ ಬಟ್ಟೆ ಅಂಗಡಿಯ ಹೊರಗೆ ಪರಿಚಿತ ವ್ಯಕ್ತಿ ಜೊತೆಗೆ ಮಾತನಾಡುತ್ತಿರುವಾಗ ಈ ದಾಳಿ ನಡೆದಿದೆ. ಇದರಲ್ಲಿ ಅವನು ಗಾಯಗೊಂಡ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾ ಮಾರ್ಗದಲ್ಲೇ ಸಾವನ್ನಪ್ಪಿದನು. ‘ಫಾಜಿಲ ಇವನು ಪೊಲೀಸರ ಖಬರಿ (ಪೊಲೀಸರಿಗೆ ಮಾಹಿತಿ ನೀಡುವವನು) ಆಗಿದ್ದನು’, ಎಂದು ಹೇಳಲಾಗುತ್ತಿದೆ.