ಇದುವರೆಗೆ ದರ್ಶನಕ್ಕಾಗಿ ಶ್ರೀರಾಮ ಮಂದಿರಕ್ಕೆ ಹೋಗದ ಅಖಿಲೇಶ್ ಯಾದವ್ ಅವರು ಅಯೋಧ್ಯೆಯನ್ನು ರಾಮನಗರಿಯನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ!

ಭಾಜಪ ಶಾಸಕ ಅನಿಲ್ ಸಿಂಹ ಅವರಿಂದ ಅಖಿಲೇಶ್ ಯಾದವ್ ವಿರುದ್ಧ ಟೀಕೆ!

ಉನ್ನಾವ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ತಮ್ಮ ಸರಕಾರ ಬಂದರೆ ಅಯೋಧ್ಯೆಯನ್ನು ರಾಮನಗರಿಯನ್ನಾಗಿ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಇದುವರೆಗೆ ಶ್ರೀರಾಮ ಮಂದಿರಕ್ಕೆ ದರ್ಶನಕ್ಕಾಗಿ ಹೋಗದ ವ್ಯಕ್ತಿಯೊಬ್ಬರು ತಾವು ರಾಮನಗರಿಯನ್ನು ನಿರ್ಮಿಸುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಖಿಲೇಶ್ ಯಾದವ್ ಅವರಿಗೆ ಶ್ರೀರಾಮ ಮಂದಿರದ ವಿಷಯದ ಕುರಿತು ಮಾತನಾಡಲು ನಾಚಿಕೆಯಾಗಬೇಕು. ಅವರ ಕುಟುಂಬದ ಸದಸ್ಯರ ವಿರುದ್ಧ ಕೇಂದ್ರೀಯ ತನಿಖಾ ದಳದಿಂದ (CBI) ತನಿಖೆ ನಡೆಯುತ್ತಿದೆ. ಒಂದು ಕಾಲವಿತ್ತು, ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಹ ಯಾದವ್ ಅವರ ಸರಕಾರವು ರಾಮಭಕ್ತರ ಮೇಲೆ ಗುಂಡಿನ ದಾಳಿ ನಡೆಸಿತ್ತು ಮತ್ತು ಇಂದು ಈ ಜನರು ರಾಮನಗರಿಯನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಜನರಿಗೆ 2027 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಾರ್ವಜನಿಕರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಭಾಜಪ ಶಾಸಕ ಅನಿಲ್ ಸಿಂಹ ಟೀಕಿಸಿದ್ದಾರೆ.

ದೇವಸ್ಥಾನದಲ್ಲಿ ಕಳ್ಳತನ ಮಾಡುವವರಿಗೆ ಕ್ಯಾನ್ಸರ್ ಬರುತ್ತದೆ!

ಶ್ರೀರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದ ಕುರಿತು ಶಾಸಕ ಅನಿಲ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು, ದೇವಸ್ಥಾನದಲ್ಲಿ ಕಳ್ಳತನ ಮಾಡುವವರಿಗೆ ಕ್ಯಾನ್ಸರ್ ಬರುತ್ತದೆ ಮತ್ತು ಅವರಿಗೆ ದೇವರ ಮನೆಯಿಂದಲೇ ಮರಣದಂಡನೆ ಶಿಕ್ಷೆಯಾಗಲಿದೆ, ಎಂದು ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾಜಪ ಶಾಸಕ ಅನಿಲ್ ಸಿಂಹ ಅವರಿಂದ ಅಖಿಲೇಶ್ ಯಾದವ್ ವಿರುದ್ಧ ಟೀಕೆ!