'ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಅವರಿಂದ ಭಾರತಕ್ಕೆ ಬೆದರಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಸಿಂಧೂ ಜಲ ಹಂಚಿಕೆಯ ವಿವಾದವನ್ನು ಕೇವಲ ಪರಿಸರ ಅಥವಾ ರಾಜತಾಂತ್ರಿಕ ವಿಷಯವಾಗಿ ನೋಡಬಾರದು, ರಾಷ್ಟ್ರೀಯ ಭದ್ರತೆ ಮತ್ತು ಅಸ್ತಿತ್ವಕ್ಕೆ ಸಂಬಂಧಿಸಿದ ವಿಷಯವಾಗಿ ಪರಿಗಣಿಸಬೇಕು. ಪಾಕಿಸ್ತಾನದ ಅಣು ನೀತಿ ಕೆಲವು ಅತ್ಯಂತ ಕಠಿಣ ಪರಿಸ್ಥಿತಿಗಳಿಗಾಗಿದೆ. ದೇಶದ ಆರ್ಥಿಕತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ಅಥವಾ ಜಲಮಾರ್ಗಗಳನ್ನು ತಡೆಯುವ ಪ್ರಯತ್ನಗಳು ಇಂತಹ ಅಪರೂಪದ ಪರಿಸ್ಥಿತಿಗಳ ಅಡಿಯಲ್ಲಿ ಬರುತ್ತವೆ. ಒಂದು ವೇಳೆ ಪಾಕಿಸ್ತಾನದ ನೀರಿನ ಮೂಲಗಳು ತಡೆಹಿಡಿಯಲ್ಪಡುವುದರಿಂದ ಅಣು ಸಂಕಟದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ, ಪಾಕಿಸ್ತಾನವು ಇದನ್ನು ಕೇವಲ ಪರಿಸರದ ಸಮಸ್ಯೆ ಎಂದು ನೋಡಬಾರದು, ಪಾಕಿಸ್ತಾನದ ಅಸ್ತಿತ್ವದ ಮೇಲಿನ ಆಕ್ರಮಣ ಎಂದು ನೋಡಬೇಕು. ಇದಕ್ಕೆ ಒಗ್ಗಟ್ಟಾಗಿ ಸೇನೆಯ ಮೂಲಕ ಉತ್ತರ ನೀಡುವ ಅವಶ್ಯಕತೆಯಿದೆ, ಎಂದು ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಅವರು ಸಿಂಧೂ ಜಲ ಹಂಚಿಕೆ ಒಪ್ಪಂದ ಅಮಾನತುಗೊಳಿಸಿದ ಕುರಿತು ಭಾರತಕ್ಕೆ ಬೆದರಿಕೆ ಹಾಕಿದರು. ಇಸ್ಲಾಮಾಬಾದ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ಪಾಕಿಸ್ತಾನದ ಅಂದಾಜು ಶೇ. 80% ರಷ್ಟು ಕೃಷಿ ಭೂಮಿ ಮತ್ತು ಆರ್ಥಿಕತೆ ಸಿಂಧೂ ನದಿ ವ್ಯವಸ್ಥೆಯ ನೀರನ್ನು ಅವಲಂಬಿಸಿದೆ. ಸಿಂಧೂ ಜಲ ಹಂಚಿಕೆ ಒಪ್ಪಂದದ ಪ್ರಕಾರ, ಪೂರ್ವ ನದಿಗಳ (ರಾವಿ, ಬಿಯಾಸ್, ಸತಲಜ್) ನೀರು ಭಾರತದ ಬಳಿ ಇದೆ ಮತ್ತು ಪಶ್ಚಿಮ ನದಿಗಳ (ಸಿಂಧೂ, ಝೇಲಂ, ಚೆನಾಬ್) ನೀರು ಪಾಕಿಸ್ತಾನಕ್ಕೆ ಸಿಗುತ್ತದೆ. ಭಾರತ ತನ್ನ ಅಣೆಕಟ್ಟುಗಳು ಮತ್ತು ಕಾಲುವೆಗಳನ್ನು ನಿರ್ಮಿಸುವ ಮೂಲಕ ಹಾಗೂ ‘ಹೈಡ್ರೋಲಾಜಿಕಲ್ ಡೇಟಾ ಶೇರ್’ ಮಾಡದೆ ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದೆ, ಇದರಿಂದಾಗಿ ಪಾಕ್ ನ ಆರ್ಥಿಕತೆ ಮತ್ತು ಇಂಧನ ಕ್ಷೇತ್ರವು ಅಪಾಯಕ್ಕೆ ಸಿಲುಕಿದೆ.
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ