ರಾಮಸೇತು ಚಲನಚಿತ್ರದ ವಿವಾದ : ನಟ ಅಕ್ಷಯ ಕುಮಾರ ಬಂಧನಕ್ಕೆ ಒತ್ತಾಯಿಸಿದ ಡಾ. ಸುಬ್ರಮಣಿಯನ್ ಸ್ವಾಮಿ !

ನಟ ಅಕ್ಷಯ ಕುಮಾರ ಮತ್ತು ಭಾಜಪದ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ

ಹೊಸ ದೆಹಲಿ – ಭಾಜಪದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ನಟ ಅಕ್ಷಯ ಕುಮಾರ ವಿರುದ್ಧ ದೂರನ್ನು ದಾಖಲಿಸಲಿದ್ದಾರೆ ! ರಾಮಸೇತು ಎಂಬ ಹಿಂದಿ ಚಲನಚಿತ್ರದಲ್ಲಿ ‘ರಾಮಸೇತು’ ವಿಷಯವನ್ನು ತಪ್ಪಾಗಿ ಮಂಡಿಸಿದ್ದಾರೆ ಎಂದು ಡಾ. ಸ್ವಾಮಿ ಇವರು ಆರೋಪಿಸಿದ್ದಾರೆ. ‘ಅಕ್ಷಯ ಕುಮಾರ ಏನಾದರೂ ವಿದೇಶಿ ನಾಗರಿಕರಾಗಿದ್ದರೆ, ಆಗ ನಾವು ಅವರನ್ನು ಬಂಧಿಸಿ ದೇಶದಿಂದ ಹೊರ ಹಾಕಲು ಒತ್ತಾಯಿಸಬಹುದು’ ಎಂದು ಡಾ. ಸ್ವಾಮಿ ಟ್ವೀಟ್ ಮಾಡಿದ್ದಾರೆ. ಈ ಚಲನಚಿತ್ರ ಬರುವ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ.

ಡಾ. ಸುಬ್ರಮಣಿಯನ್ ಸ್ವಾಮಿ ಇವರು ಈ ಸಂದರ್ಭದಲ್ಲಿ ಟ್ವೀಟ್ ಮಾಡಿ, ‘ನಾನು ನಾಯಕ ಅಕ್ಷಯ ಕುಮಾರ ಮತ್ತು ಕರ್ಮಾ ಮೀಡಿಯಾ ಇದರ ವಿರುದ್ಧ ಅವರ ಚಲನಚಿತ್ರದಲ್ಲಿ ರಾಮಸೇತು ಬಗ್ಗೆ ತಪ್ಪಾಗಿ ಚಿತ್ರಿಸಲಾಗಿರುವುದರಿಂದ ಆಗಿರುವ ನಷ್ಟದ ಬಗ್ಗೆ ಮೊಕದ್ದಮೆ ದಾಖಲಿಸಲಿದ್ದೇನೆ. ನನ್ನ ಸಹೋದ್ಯೋಗಿ ನ್ಯಾಯವಾದಿ ಸತ್ಯ ಸಬ್ರವಾಲ ಇವರು ನಷ್ಟ ಪರಿಹಾರದ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ’ ಎಂದು ತಿಳಿಸಿದ್ದಾರೆ.