ವಾರಾಣಸಿಯಂತಹ ಜಾಗ ನಾನು ಜಗತ್ತಿನಲ್ಲಿ ಬೇರೆಲ್ಲೂ ನೋಡಿಲ್ಲ ! – ಜಗತ್ಪ್ರಸಿದ್ಧ ನಟ ಬ್ರಾಡ್ ಪಿಟ್

ಜಗತ್ಪ್ರಸಿದ್ಧ ನಟ ಬ್ರಾಡ್ ಪಿಟ್

ಮುಂಬೈ – ಭಾರತ ಒಂದು ಅದ್ಭುತ ದೇಶ. ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದ ವರೆಗೆ ಈ ದೇಶ ಸತತ ಬದಲಾಗುತ್ತಿರುತ್ತದೆ. ಜಗತ್ತಿನಲ್ಲಿ ಇಂತಹ ವೈವಿಧ್ಯಪೂರ್ಣ ದೇಶಗಳು ತುಂಬಾ ಕಡಿಮೆ ಇವೆ. ನಾನು ಉತ್ತರ ಭಾರತದಲ್ಲಿ ಕೈಗೊಂಡಿದ್ದ ಪ್ರವಾಸ ಇನ್ನೂ ನನ್ನ ಮನಸ್ಸಿನಲ್ಲಿ ಹೊಚ್ಚು ಹೊಸದಾಗಿ ಇದೆ. ಹಗಲಿನಲ್ಲಿಯೂ ಕತ್ತಲೆ ಇರುವಂತಹ ಅನೇಕ ಸ್ಥಳಗಳಲ್ಲಿವೆ. ನಾನು ಅನೇಕ ದೇವಸ್ಥಾನಗಳಲ್ಲಿ ಗಂಟೆ ಬಾರಿಸಿದ್ದೇನೆ. ವಾರಾಣಸಿಯ ಅನುಭವ ಬಹಳ ಅಲೌಕಿಕವಾಗಿದೆ. ವಾರಾಣಸಿಯಂತಹ ಜಾಗ ನಾನು ಜಗತ್ತಿನಲ್ಲಿ ಬೇರೆಲ್ಲೂ ನೋಡಿಲ್ಲ! ನಾನು ಈವರೆಗೆ ಎಷ್ಟೋ ಬಾರಿ ಜಗತ್ತನ್ನು ತಿರುಗಿ ಬಂದಿದ್ದೇನೆ, ಅದರಲ್ಲಿ ಈ ನಗರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನ ಇದೆ, ಎಂದು ಜಗತ್ಪ್ರಸಿದ್ಧ ನಾಯಕ-ನಟ ಮತ್ತು ಚಲನಚಿತ್ರ ನಿರ್ಮಾಪಕ ಬ್ರಾಡ್ ಪಿಟ್ ಹೇಳಿದರು.

ಪಿಟ್ ಇವರು ನಿರ್ಮಾಪಕರಾಗಿರುವ ‘ಬುಲೆಟ್ ಟ್ರೈನ್’ ಎಂಬ ಚಲನಚಿತ್ರ ಮುಂದಿನ ವಾರ ಜಗತ್ತಿನಾದ್ಯಂತ ಬಿಡುಗಡೆಗೊಳ್ಳಲಿದೆ. ಇದರ ಪ್ರಯುಕ್ತ ಒಂದು ಹಿಂದಿ ಸಮಾಚಾರ ಪತ್ರಿಕೆಗೆ ಪಿಟ್ ಇವರು ಸಂದರ್ಶನ ನೀಡಿದರು. ಆಗ ಅವರು ಭಾರತದ ವಿಷಯದಲ್ಲಿ ಮೇಲಿನ ವಕ್ತವ್ಯವನ್ನು ಮಾಡಿದರು. ನಾನು ಮತ್ತೊಮ್ಮೆ ಭಾರತದ ಪ್ರವಾಸಕ್ಕೆ ಉತ್ಸುಕನಾಗಿದ್ದೇನೆ ಎಂದು ಸಂದರ್ಶನದ ಕೊನೆಯಲ್ಲಿ ಹೇಳಿದರು.

ಸಂಪಾದಕೀಯ ನಿಲುವು

  • ಭಾರತದ ಎಷ್ಟು ಕಲಾವಿದರಲ್ಲಿ ಆಧ್ಯಾತ್ಮಿಕ ನಗರವಾಗಿರುವ ವಾರಾಣಸಿ ಬಗ್ಗೆ ಈ ರೀತಿಯ ಭಾವ ಇದೆ ?
  • ಎಲ್ಲಿ ದೇವಸ್ಥಾನಗಳಲ್ಲಿ ಬೂಟು ಹಾಕಿಕೊಂಡು ಚಿತ್ರೀಕರಣ ಮಾಡುವ ಮತ್ತು ಹಿಂದೂಗಳ ಶ್ರದ್ಧಾಸ್ಥಾನಗಳ ಗೆಲಿ ಮಾಡುವ ಭಾರತೀಯ ಕಲಾವಿದರು ಹಾಗೂ ಎಲ್ಲಿ ಮಂದಿರದ ಮಹತ್ವ ಅನುಭವಿಸುವ ಪಿಟ್ ಅವರಂತಹ ಪಾಶ್ಚಾತ್ಯ ಕಲಾವಿದರು !