Ram Mandir Theft Confession : ಕಳ್ಳತನದ ಹಣವನ್ನು ಶೌಚಾಲಯದಲ್ಲಿ ಅಡಗಿಸಿಡುತ್ತಿದ್ದೆವು!

  • ಶ್ರೀರಾಮಮಂದಿರದ ದೇಣಿಗೆ ಕಳ್ಳತನದ ಆರೋಪಿ ಅವಿನಾಶ್ ಶುಕ್ಲಾನ ಒಪ್ಪಿಗೆ

  • ಹಣ ಕದಿಯುವಾಗ ಎಲ್ಲಾ ಆರೋಪಿಗಳು ಪರಸ್ಪರ ಸಹಾಯ ಮಾಡುತ್ತಿದ್ದರು !

  • ಕದಿಯುವ ಸಮಯದಲ್ಲಿ ಇತರ ಆರೋಪಿಗಳು ಅವನ ಸುತ್ತಲೂ ಗುಂಪು ಕೂಡಿ ನಿಲ್ಲುತ್ತಿದ್ದರು !

ಅಯೋಧ್ಯೆ (ಉತ್ತರಪ್ರದೇಶ) – ಶ್ರೀರಾಮಮಂದಿರದ ದೇಣಿಗೆಯ ಕೋಟ್ಯಂತರ ರೂಪಾಯಿಗಳ ಕಳ್ಳತನದ ಹಣವನ್ನು ಮೊದಲು ಮಂದಿರದ ಶೌಚಾಲಯದಲ್ಲಿ ಅಡಗಿಸಿಡಲಾಗುತ್ತಿತ್ತು ಮತ್ತು ನಂತರ ಅವಕಾಶ ಸಿಕ್ಕ ತಕ್ಷಣ ಅದನ್ನು ಹೊರಗೆ ಸಾಗಿಸಲಾಗುತ್ತಿತ್ತು ಎಂದು ಆರೋಪಿ ಅವಿನಾಶ್ ಶುಕ್ಲಾ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದ ಅನುಮತಿಯ ನಂತರ ವಿಶೇಷ ತನಿಖಾ ತಂಡವು ಕಾರಾಗೃಹಕ್ಕೆ ತೆರಳಿ ಅವಿನಾಶನನ್ನು ೨ ಗಂಟೆಗಳ ಕಾಲ ವಿಚಾರಣೆ ನಡೆಸಿದಾಗ ಅವನು ಈ ವಿಷಯವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿದ್ದ ಲೋಪದೋಷಗಳ ದುರುಪಯೋಗವನ್ನು ಹೇಗೆ ಪಡೆದುಕೊಳ್ಳಲಾಯಿತು? ಎಂಬ ಸಂಪೂರ್ಣ ಮಾಹಿತಿಯನ್ನೂ ಅವನು ಪೊಲೀಸರಿಗೆ ನೀಡಿದ್ದಾನೆ.

ಈ ದೇಣಿಗೆ ಎಣಿಕೆಯ ಪ್ರಕ್ರಿಯೆಯಲ್ಲಿ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ದ ವಿಶ್ವಸ್ತರಾದ ಅನಿಲ ಮಿಶ್ರಾ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು ಎಂದು ಅವಿನಾಶ ದಾವೆ ಮಾಡಿದ್ದಾನೆ.

ಪೊಲೀಸ್ ಮೂಲಗಳು ನೀಡಿದ ಮಾಹಿತಿಯ ಪ್ರಕಾರ ಅವಿನಾಶ್, ಯಾವ ಕೋಣೆಯಲ್ಲಿ ದೇಣಿಗೆಯ ಹಣವನ್ನು ಎಣಿಸಲಾಗುತ್ತಿತ್ತೋ, ಆ ಕೋಣೆಯ ಒಂದು ಕೀಲಿ ಕೈ ಟಿನ್ನೂ ಯಾದವ ಬಳಿ ಇರುತ್ತಿತ್ತು ಮತ್ತು ಮತ್ತೊಂದು ಕೀಲಿ ಕೈ ಬ್ಯಾಂಕ್ ನೌಕರರ ಬಳಿ ಇರುತ್ತಿತ್ತು. ಈ ಸಂಪೂರ್ಣ ಕೃತ್ಯವನ್ನು ಒಂದು ದೊಡ್ಡ ಜಾಲದ ಮೂಲಕ ಮಾಡಲಾಗುತ್ತಿತ್ತು. ಹಣವನ್ನು ಕದಿಯುವಾಗ ಎಲ್ಲಾ ಆರೋಪಿಗಳು ಪರಸ್ಪರ ಸಹಾಯ ಮಾಡುತ್ತಿದ್ದರು. ಒಬ್ಬನು ಹಣ ಕದಿಯುವಾಗ ಇತರ ಆರೋಪಿಗಳು ಅವನ ಸುತ್ತಲೂ ಗುಂಪು ಕೂಡಿ ನಿಲ್ಲುತ್ತಿದ್ದರು, ಇದರಿಂದ ಯಾರಿಗೂ ಸಂಶಯ ಬರುತ್ತಿರಲಿಲ್ಲ. ಮಂದಿರದ ಆವರಣದಲ್ಲಿ ಎಲ್ಲೆಲ್ಲಿ ಮತ್ತು ಯಾವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ? ಎಂಬ ಇಂಚಿಂಚೂ ಮಾಹಿತಿ ಎಲ್ಲಾ ಆರೋಪಿಗಳಿಗೆ ಇತ್ತು. ಇದೇ ಮಾಹಿತಿಯ ದುರುಪಯೋಗವನ್ನು ಪಡೆದುಕೊಂಡು ಅವರು ಕ್ಯಾಮೆರಾಗಳ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದರು. ಕದ್ದ ಹಣವನ್ನು ಅವರು ಮೊದಲು ಶೌಚಾಲಯದಲ್ಲಿ ಬಚ್ಚಿಡುತ್ತಿದ್ದರು ಮತ್ತು ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಅಲ್ಲಿಂದ ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ನ್ಯಾಸದ ಹಿರಿಯ ಪದಾಧಿಕಾರಿಗಳೊಂದಿಗೆ ನಿಕಟ ಸಂಬಂಧವಿದ್ದಿದ್ದರಿಂದ ನಮ್ಮ ಮೇಲೆ ಯಾರೂ ಸಂಶಯ ಪಡಲಿಲ್ಲ ಮತ್ತು ನಮ್ಮ ಮೇಲೆ ಹೆಚ್ಚಿನ ಕಣ್ಗಾವಲು ಇಡಲಿಲ್ಲ ಎಂದೂ ಅವನು ಒಪ್ಪಿಕೊಂಡಿದ್ದಾನೆ.

ಕಳ್ಳತನದ ಹಣದಿಂದ ಭೂಮಿ ಮತ್ತು ಮನೆ ಖರೀದಿ!

ಕದ್ದ ಹಣದಿಂದ ಆರೋಪಿಗಳು ಭೂಮಿ ಮತ್ತು ಐಷಾರಾಮಿ ಮನೆಯನ್ನು ಖರೀದಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪೊಲೀಸರು ಈಗ ಆರೋಪಿಗಳ ಆರ್ಥಿಕ ವಹಿವಾಟು ಹಾಗೂ ಆಸ್ತಿಪಾಸ್ತಿಗಳ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತನಿಖಾ ತಂಡ ರಚನೆಯಾಗುವ ಮುನ್ನವೇ ೫೮ ಲಕ್ಷ ರೂಪಾಯಿ ವಸೂಲಿ!

ಉತ್ತರಪ್ರದೇಶ ಸರಕಾರವು ಜೂನ್ ೧೩ ರಂದು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ದೂರು ದಾಖಲಾಗುವ ಮುನ್ನ, ಅಂದರೆ ಜೂನ್ ೫ ರಂದು ನ್ಯಾಸವು ಅವಿನಾಶ ಶುಕ್ಲಾ ಅವರ ಮನೆಯಿಂದ ೫೮ ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು. ಉಳಿದ ಮೊತ್ತವನ್ನು ಜೂನ್ ೫ ರಿಂದ ೮ ರ ಅವಧಿಯಲ್ಲಿ ‘ಬ್ಯಾಂಕ್ ಟ್ರಾನ್ಸ್‌ಫರ್’ ಮೂಲಕ ಮರಳಿ ಪಡೆಯಲಾಗಿತ್ತು.