ಆಸ್ಸಾಂನಲ್ಲಿ ಜಿಹಾದಿ ಚಟುವಟಿಕೆ ನಡೆಸುತ್ತಿರುವ ೭೦೦ ಮದರಸಾಗಳು ಸ್ಥಗಿತ !

ಖಾಸಗಿ ಮದರಸಾಗಳನ್ನು ನಿಯಂತ್ರಿಸಲು ಶೀಘ್ರ ಕಾನೂನು!

ಗೌಹಾಟಿ (ಆಸ್ಸಾಂ) – ಆಸ್ಸಾಂನಲ್ಲಿರುವ ಮದರಸಾಗಳಲ್ಲಿ ಜಿಹಾದಿ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಸಿಕ್ಕ ಬಳಿಕ ರಾಜ್ಯಸರಕಾರವು ಇಂತಹ ಸುಮಾರು ೭೦೦ ಮದರಸಾಗಳನ್ನು ಮುಚ್ಚಿದೆ. ಭಯೋತ್ಪಾದಕ ಚಟುವಟಿಕೆ ಸಂಪೂರ್ಣ ನಾಶ ಮಾಡಲು ಮತ್ತು ಮಕ್ಕಳನ್ನು ಅವರಿಂದ ರಕ್ಷಿಸಲು ಆಸ್ಸಾಂನ ಭಾಜಪ ಸರಕಾರವು ಖಾಸಗಿ ಮದರಸಾಗಳ ಮೇಲೆ ನಿಯಂತ್ರಣ ಹೊಂದಲು ಕಾನೂನು ತರಲು ಸಿದ್ಧತೆಯನ್ನೂ ಪ್ರಾರಂಭಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರ ಹೇಳಿಕೆಯಂತೆ ಭಯೋತ್ಪಾದಕ ಸಂಘಟನೆ ಅಲ್-ಕಾಯದಾ ಆಸ್ಸಾಂನಲ್ಲಿ ಹಿಂಸಾಚಾರ ನಡೆಸಲು ಸಂಚು ರೂಪಿಸುತ್ತಿದೆ.

೧. ಮದರಸಾ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನು ರಚಿಸಲು ರಾಜ್ಯ ಸರಕಾರ ಕಾನೂನು ತಜ್ಞರ ಸಲಹೆಯನ್ನು ಪಡೆಯುತ್ತಿದೆ. ‘ಅಲ್ಪಸಂಖ್ಯಾತ ಸಮುದಾಯದ ಯುವ ಪೀಳಿಗೆಯ ಕಡೆಗೆ ಭಯೋತ್ಪಾದಕ ಸಂಘಟನೆಯ ಗಮನವಿದೆ. ಯುವಕರ ದಿಕ್ಕನ್ನು ತಪ್ಪಿಸಲು ಜಿಹಾದಿ ಸಾಹಿತ್ಯ ಬಂಗಾಳಿ ಭಾಷೆಯಲ್ಲಿ ಭಾಷಾಂತರ ಮಾಡಿ ಅದನ್ನು ಸಂಚಾರವಾಣಿಯ ಮಾಧ್ಯಮದಿಂದ ಅವರ ವರೆಗೆ ತಲುಪಿಸುತ್ತಿದ್ದಾರೆ’, ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಮತ್ತು ಬಂಧಿಸಲಾಗಿರುವ ಮತಾಂಧ ಮುಸಲ್ಮಾನರ ವಿಚಾರಣೆಯಿಂದ ಬಹಿರಂಗಗೊಂಡಿದೆ.

೨. ಬಂಧಿಸಲಾಗಿರುವ ಜಿಹಾದಿಗಳಲ್ಲಿ ಅನೇಕರು ‘ಇಮಾಮ’ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) ಎಂದು ಕಾರ್ಯನಿರ್ವಹಿಸಿದ್ದರು. ಭಯೋತ್ಪಾದಕ ಕೃತ್ಯ ನಡೆಸಲು ಅವರು ಅನೇಕ ಸ್ಥಳಗಳಲ್ಲಿ ಧಾರ್ಮಿಕ ಸಮ್ಮೇಳನವನ್ನು ಕೂಡ ಆಯೋಜಿಸುತ್ತಿದ್ದಾರೆ. ಇಂತಹ ಮದರಸಾಗಳಿಗೆ ಅಕ್ರಮ ನಿಧಿ ದೊರಕುತ್ತಿರುವ ಮಾಹಿತಿಯಿದೆ.

ಆಸ್ಸಾಂನಲ್ಲಿ ಕಾರ್ಯನಿರತವಾಗಿರುವ ೨೪ ಕ್ಕಿಂತ ಅಧಿಕ ಜಿಹಾದಿ ಗುಂಪಿಗೆ ಕಡಿವಾಣ

ಇಷ್ಟು ಭಯೋತ್ಪಾದಕ ಗುಂಪು ನಿರ್ಮಾಣ ಆಗುವವರೆಗೆ ಪೊಲೀಸರು ಮಲಗಿದ್ದರೇ? ಇದಕ್ಕೆ ಜವಾಬ್ದಾರರಾಗಿರುವವರ ಮೇಲೆಯೂ ಸರಕಾರ ಕ್ರಮ ಕೈಕೊಳ್ಳಬೇಕು !

ತನಿಖಾ ದಳವು ೨೪ ಕ್ಕಿಂತ ಅಧಿಕ ಜಿಹಾದಿ ಗುಂಪುಗಳನ್ನು ಬಂಧಿಸಿದೆ. ಆಸ್ಸಾಂನಲ್ಲಿರುವ ಮದರಸಾದ ಜಿಹಾದಿಗಳಿಗೆ ‘ಅನ್ಸಾರ ಉಲ್ಲಾ ಬಾಂಗಾಲಾ ಟೀಮ’ ಮತ್ತು ‘ಅಲ್-ಕಾಯದಾ’ ಇವರೊಂದಿಗೆ ನಂಟಿದೆ. ಈ ಸಂಘಟನೆಗಳ ಗುಂಪುಗಳ ವ್ಯಾಪ್ತಿ ತ್ರಿಪುರಾ, ಭೋಪಾಳ ಮತ್ತು ಬೆಂಗಳೂರು ಇಲ್ಲಿಯವರೆಗೆ ಹರಡಿದೆ.

 

ಸಂಪಾದಕೀಯ ನಿಲುವು

ಭಾರತಾದ್ಯಂತ ಅನೇಕ ಮದರಸಾಗಳು ಜಿಹಾದಿಗಳಿಗೆ ಅಡಗುತಾಣವಾಗಿದೆ ಎನ್ನುವುದು ಅನೇಕ ಬಾರಿ ಬಯಲಾಗಿದೆ. ಇದರಿಂದ ಇಂತಹ ಕಾನೂನು ಈಗ ಕೇವಲ ಆಸ್ಸಾಂಗಷ್ಟೇ ಸೀಮಿತವಾಗಿರದೇ ಕೇಂದ್ರಸರಕಾರವು ಅದನ್ನು ದೇಶಾದ್ಯಂತ ಮಾಡುವುದು ಅಪೇಕ್ಷಿತವಿದೆ

ಪಾಕಿಸ್ತಾನಿ ಮೂಲದ ಮತ್ತು ಈಗ ಇಂಗ್ಲೆಂಡ್ ನಲ್ಲಿ ವಾಸ್ತವ್ಯ ಮಾಡುವ ಪ್ರಸಿದ್ಧ ಇಸ್ಲಾಮಿ ಅಧ್ಯಯನಕಾರ ಆರಿಫ್ ಅಜಾಕಿಯಾ ಇವರ ಹೇಳಿಕೆಯಂತೆ, ‘ಭಾರತದಲಿ ಶೇ. ೮೫ ರಷ್ಟಿರುವ ಬಹುಸಂಖ್ಯಾತರ ವಿರುದ್ಧ ಮದರಸಾದಿಂದ ‘ಕಾಫಿರರನ್ನು ನಾಶಗೊಳಿಸಿರಿ’, ಎಂದು ವಿಷ ಕಾರಲಾಗುತ್ತಿದೆ.’ ಇದನ್ನು ಕೇಂದ್ರೀಯ ಗೃಹಸಚಿವಾಲಯವು ಗಾಂಭೀರ್ಯದಿಂದ ಪರಿಶೀಲಿಸಿ ಮದರಸಾಗಳ ಮೇಲೆ ಕಠಿಣವಾಗಿ ಕಡಿವಾಣ ಹಾಕುವ ಆವಶ್ಯಕತೆಯಿದೆ ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ.