ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿ ಒಂದೂವರೆ ವರ್ಷದಿಂದ ಜೈಲಿನಲ್ಲಿ

ಢಾಕಾ (ಬಾಂಗ್ಲಾದೇಶ) – ‘ಇಸ್ಕಾನ್’ ಆಧ್ಯಾತ್ಮಿಕ ಸಂಸ್ಥೆಯ ನಾಯಕ ಮತ್ತು ಬಾಂಗ್ಲಾದೇಶದ ಪ್ರಖರ ಹಿಂದುತ್ವನಿಷ್ಠ ಚಿನ್ಮಯ ಕೃಷ್ಣ ದಾಸ್ ಪ್ರಭು ಅವರ ಜೀವಕ್ಕೆ ತೀವ್ರ ಅಪಾಯ ಎದುರಾಗಿದೆ ಎಂದು ಭಾರತದ ಇಸ್ಕಾನ್ ನಾಯಕ ಶ್ರೀ ರಾಧಾರಮಣ್ ದಾಸ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಮಾಹಿತಿ ನೀಡಿದ್ದಾರೆ. ಅವರು ಮಾತನಾಡಿ, ‘‘ಕೆಲವು ದಿನಗಳ ಹಿಂದಷ್ಟೇ ನಾನು ಚಿನ್ಮಯ್ ಪ್ರಭು ಅವರ ತಾಯಿಯವರೊಂದಿಗೆ ಮಾತನಾಡಿದ್ದೆ. ತಮ್ಮ ಮಗನ ಬಗ್ಗೆ ಮಾತನಾಡುವಾಗ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಚಿನ್ಮಯ್ ದಾಸ್ ಅವರು 583 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಕೊನೆಯ ಭೇಟಿಯ ಸಮಯದಲ್ಲಿ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು ಎಂದು ಅವರ ತಾಯಿ ತಿಳಿಸಿದ್ದಾರೆ’’ ಎಂದರು.
Very sad news from Bangladesh.
Chinmoy Krishna Prabhu's mother has suffered a massive heart attack and is being rushed to the hospital. Please keep her in your prayers.
A few days ago, I spoke with her. She broke down in tears while speaking about her son. Chinmoy Krishna… pic.twitter.com/7SCymbb8qp
— Radharamn Das राधारमण दास (@RadharamnDas) July 1, 2026
ದಾಸ್ ಅವರು, ಚಿನ್ಮಯ್ ಪ್ರಭು ಅವರನ್ನು ತಕ್ಷಣ ಸುಧಾರಿತ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯದಿದ್ದರೆ, ಅವರ ಜೀವಕ್ಕೆ ತೀವ್ರ ಅಪಾಯ ಉಂಟಾಗಬಹುದು ಎಂದು ಹೇಳಿದರು. ದಾಸ್ ಅವರು ಪ್ರಧಾನಿ ಮೋದಿ ಅವರಿಗೆ ವಿನಂತಿಸಿ, ಈ ವಿಷಯದಲ್ಲಿ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು ಮತ್ತು ಚಿನ್ಮಯ್ ಪ್ರಭು ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದ್ದಾರೆ.
ಚಿ,ನ್ಮಯ್ ಪ್ರಭು ಅವರ ತಾಯಿಯವರಿಗೆ ಇತ್ತೀಚೆಗೆ ತೀವ್ರ ಹೃದಯಾಘಾತವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದು ದಾಸ್ ಕೋರಿದ್ದಾರೆ.
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ