೧೯೨೯ರಲ್ಲಿ ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಮೂರ್ತಿ ಅಮೇರಿಕಾದಲ್ಲಿ ಪತ್ತೆ !

ಮೂರ್ತಿಯನ್ನು ಭಾರತಕ್ಕೆ ತರುವ ಪ್ರಯತ್ನ !

ಚೆನ್ನೈ (ತಮಿಳುನಾಡು) – ತಮಿಳುನಾಡು ರಾಜ್ಯದ ನಾಗಾಪಟ್ಟಿಣಂ ದೇವಸ್ಥಾನದಿಂದ ೧೯೨೯ ರಲ್ಲಿ ರಾಣಿ ಸೆಂಬಿಯನ್ ಮಹಾದೇವಿಯ ಹಿತ್ತಾಳೆಯ ಮೂರ್ತಿ ಕಳ್ಳತನವಾಗಿತ್ತು. ಈ ಮೂರ್ತಿ ಅಮೇರಿಕಾದ ವಾಶಿಂಗಟನ್‌ನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ್’ ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ಪೊಲಿಸರು ಅದನ್ನು ಮರಳಿ ತರಲು ಪ್ರಯತ್ನ ಪ್ರಾರಂಭಿಸಿದ್ದಾರೆ.

೧. ಪೊಲೀಸರು, ೨೦೧೮ ರಲ್ಲಿ ರಾಜೇಂದ್ರನ್ ಹೆಸರಿನ ವ್ಯಕ್ತಿಯು ‘ಫ್ರೀಯರ ಗ್ಯಾಲರಿ ಆಫ್ ಆರ್ಟ’ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಸೆಂಬಿಯನ್ ಮಹಾದೇವಿಯ ಮೂರ್ತಿಯನ್ನು ನೋಡಿದ್ದರು. ಭಾರತಕ್ಕೆ ಹಿಂತಿರುಗಿದ ಬಳಿಕ ಅವರು ಈ ವಿಷಯದಲ್ಲಿ ವೆಲಂಕನನಿ ಪೊಲೀಸರಿಗೆ ಹಾಗೂ ಸೆಂಬಿಯನ ಮಹಾದೇವಿ ಗ್ರಾಮದ ಭಕ್ತರಿಗೂ ಮಾಹಿತಿಯನ್ನು ನೀಡಿದ್ದರು. ತದನಂತರ ಪೊಲೀಸರು ತನಿಖೆ ಪ್ರಾರಂಭಿಸಿದರು ಎಂದು ಹೇಳಿದರು.

೨. ಪೊಲೀಸರು, ನ್ಯೂಯಾರ್ಕನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ’ವು ೧೯೨೯ ರಲ್ಲಿ ಹ್ಯಾಗೋಪ ಕೆವ್ಹೊರ್ಕಿಯನ್ ಹೆಸರಿನ ವ್ಯಕ್ತಿಯಿಂದ ಈ ಮೂರ್ತಿಯನ್ನು ಖರೀದಿಸಿದ್ದರು ಎಂದು ಹೇಳಿದರು.

೩. ‘ರಾಣಿ ಸೆಂಬಿಯನ ಮಹಾದೇವಿಯು ಆ ಕಾಲದಲ್ಲಿ ರಾಜ್ಯದ ಎಲ್ಲಕ್ಕಿಂತ ಶಕ್ತಿಶಾಲಿ ರಾಣಿಯರ ಪೈಕಿ ಒಬ್ಬಳಾಗಿದ್ದಳು’, ಎಂದು ಹೇಳಲಾಗುತ್ತದೆ. ಪತಿಯ ನಿಧನದ ಬಳಿಕ ದೇವಿಯು ತನ್ನ ಜೀವನವನ್ನು ದೇವಸ್ಥಾನವನ್ನು ಸ್ಥಾಪಿಸಲು ಮುಡಿಪಾಗಿಡಲು ನಿರ್ಧರಿಸಿದಳು. ದೇವಿಯ ಆ ಕಾಲದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದಳು. ‘ಯುನೆಸ್ಕೊ ಒಪ್ಪಂದ’ ಮೂಲಕ ಸೆಂಬಿಯನ ಮಹಾದೇವಿಯ ಮೂರ್ತಿ ಮರಳಿ ತರಲಾಗುತ್ತಿದೆ.