ಸಂಭಲ ಮದರಸಾದಲ್ಲಿ ಮೌಲವಿಯಿಂದ ೬ ವರ್ಷದ ಹುಡುಗಿಯ ಮೇಲೆ ಬಲತ್ಕಾರ

(ಮೌಲವಿ ಇಸ್ಲಾಮಿನ ಧಾರ್ಮಿಕ ನಾಯಕ )

ಸಂಭಲ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಸಂಭಲ ಜಿಲ್ಲೆಯ ಓರ್ವ ಮೌಲವಿಯು ಮದರಸಾದಲ್ಲಿ ಕಲಿಯಲು ಬರುವ ೬ ವರುಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯ ಸಂಬಂಧಿಕರು ನೀಡಿರುವ ದೂರಿನ ಮೇಲೆ ಪೊಲೀಸರು ಮೌಲವಿ ವಿರುದ್ಧ ಆರೋಪ ದಾಖಲಿಸಿಕೊಂಡಿದ್ದಾರೆ. ಅದರ ನಂತರ ಪೊಲೀಸರು ಆರೋಪಿ ಮೌಲವಿಯನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ಎಂದಿನಂತೆ ಪರಿಸರದ ಮದರಸಾದಲ್ಲಿ ಧಾರ್ಮಿಕ ಶಿಕ್ಷಣ ಪಡೆಯಲು ಹೋಗಿದ್ದಳು. ಅಲ್ಲಿ ಮೌಲವಿ ಉವೆಶ ಇವನು ಆಕೆಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಹೇಗೋ ಮನೆ ತಲುಪಿ ಮನೆಯ ಸದಸ್ಯರಿಗೆ ಮಾಹಿತಿ ನೀಡಿದ್ದಾಳೆ, ಆದರೆ ಕುಟುಂಬದವರು ಅಪಕೀರ್ತಿಯ ಭಯದಿಂದ ಪ್ರಕರಣ ಮುಚ್ಚಿಟ್ಟಿದ್ದರು ಮತ್ತು ಈ ಘಟನೆಯ ಮಾಹಿತಿ ಯಾರಿಗೂ ಹೇಳಬೇಡ ಎಂದು ಹುಡುಗಿಗೆ ತಾಕಿತು ಮಾಡಿದ್ದರು. ನಂತರ ತಮ್ಮ ತಮ್ಮಲ್ಲಿ ಚರ್ಚಿಸಿ ದೂರನ್ನು ದಾಖಲಿಸಿದರು.

ಸಂಭಲದ ಮುಖ್ಯ ಅಧಿಕಾರಿ ಜಿತೇಂದ್ರ ಕುಮಾರ್ ಇವರು, ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಮೌಲವಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಕಾನೂನರೀತ್ಯ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಸಂಪಾದಕೀಯ ನಿಲುವು

ಸರಕಾರ ಇಂತಹ ಕಾಮುಕರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಇಂತಹ ಪ್ರಕರಣಗಳು ನಡೆಯುವ ಮದರಸಾಗಳ ಮೇಲೆ ನಿಷೇಧ ಹೇರಬೇಕು !