
ಅಹಿಲ್ಯಾನಗರ – ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮಾದರಿಯಲ್ಲಿಯೇ ಈಗ ಪ್ರಸಿದ್ಧ ತೀರ್ಥಕ್ಷೇತ್ರವಾದ ಶನಿಶಿಂಗಣಾಪುರದ ಶನಿ ಮೂರ್ತಿಗೆ (ಶಿಲೆಗೆ) ದೀರ್ಘಕಾಲೀನ ಸಂರಕ್ಷಣೆಗಾಗಿ ವಜ್ರಲೇಪನವನ್ನು ಮಾಡಲಾಗುವುದು ಎಂದು ವರದಿಯಾಗಿದೆ. ಪ್ರತಿದಿನ ನಡೆಯುವ ೧ ಸಾವಿರದ ೫೦೦ ಕಿಲೋ ಎಣ್ಣೆಯ ಅಭಿಷೇಕ, ಬಿಸಿಲು-ಮಳೆ ಸೇರಿದಂತೆ ಬದಲಾಗುತ್ತಿರುವ ಹವಾಮಾನ ಮತ್ತು ಹೆಚ್ಚುತ್ತಿರುವ ಭಕ್ತರ ಗಿಜಿಗುಡುವಿಕೆ, ಇವುಗಳಿಂದ ಮೂರ್ತಿಯು ಸವೆಯುತ್ತಿದೆ ಎಂದು ತಜ್ಞರು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಛತ್ರಪತಿ ಸಂಭಾಜಿನಗರದ ಪುರಾತತ್ವ ಇಲಾಖೆಯ ತಜ್ಞರ ತಂಡವನ್ನು ನಿಯೋಜಿಸಲಾಗಿದೆ.

ದೇವಸ್ಥಾನ ಆಡಳಿತ ಮಂಡಳಿಯ ಅಸ್ತವ್ಯಸ್ತ ಆಡಳಿತ ವ್ಯವಸ್ಥೆಯ ಕುರಿತಾದ ಗಂಭೀರ ಅಂಶಗಳು
೧. ಕಲಬೆರಕೆ ಎಣ್ಣೆಯ ಜಾಲ ಮತ್ತು ಆಡಳಿತ ಮಂಡಳಿಯ ಕ್ಷಮಿಸಲಾಗದ ನಿರ್ಲಕ್ಷ್ಯ !
ಶನಿಶಿಂಗಣಾಪುರ ಪರಿಸರದಲ್ಲಿ ಭಕ್ತರಿಂದ ಮೂರ್ತಿಯ ಮೇಲೆ ಪ್ರತಿದಿನ ಸಾವಿರಾರು ಲೀಟರ್ ಎಣ್ಣೆಯನ್ನು ಅರ್ಪಿಸಲಾಗುತ್ತದೆ; ಆದರೆ ಈ ಎಣ್ಣೆಯ ಗುಣಮಟ್ಟವನ್ನು ನಿಯಂತ್ರಿಸಲು ದೇವಸ್ಥಾನ ಆಡಳಿತ ಮಂಡಳಿಯ ಬಳಿ ಸದ್ಯಕ್ಕೆ ಯಾವುದೇ ಸ್ವತಂತ್ರ ಪರಿಶೀಲನಾ ವ್ಯವಸ್ಥೆ ಅಥವಾ ಪ್ರಯೋಗಾಲಯ ಲಭ್ಯವಿಲ್ಲ. ಪರಿಸರದಲ್ಲಿ ಎಲ್ಲೆಂದರಲ್ಲಿ ಕಳಪೆ ಮತ್ತು ಕಲಬೆರಕೆ ಎಣ್ಣೆಯು ಮಾರಾಟವಾಗುತ್ತಿದೆ ಎಂಬ ದೂರುಗಳು ಭಕ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ಸತತವಾಗಿ ಕೇಳಿಬರುತ್ತಿವೆ. ಈ ರಾಸಾಯನಿಕ ಕಲಬೆರಕೆಯಿಂದಾಗಿಯೇ ಶ್ರೀ ಶನಿದೇವರ ಮೂರ್ತಿಗೆ ಹಾನಿಯಾಗುತ್ತಿದ್ದು, ೨೦೨೨ ರಲ್ಲಿ ಮೂರ್ತಿಯ ಕೆಲವು ಭಾಗವು ಮುರಿದಿರುವುದು ಕೂಡ ಬೆಳಕಿಗೆ ಬಂದಿತ್ತು. ಆಹಾರ ಮತ್ತು ಔಷಧ ಆಡಳಿತವು ಇದರ ಕಡೆಗೆ ಸಂಪೂರ್ಣವಾಗಿ ಕಣ್ಣು ಮುಚ್ಚಿ ಕುಳಿತಿದ್ದು, ಭಕ್ತರ ಆರೋಗ್ಯದೊಂದಿಗೆ ಮತ್ತು ಹಿಂದೂಗಳ ಶ್ರದ್ಧಾಕೇಂದ್ರಗಳೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕಲಬೆರಕೆಕೋರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. (ಎಲ್ಲಿಯವರೆಗೆ ದೇವಸ್ಥಾನ ಆಡಳಿತ ಮಂಡಳಿಯು ಪರಿಸರದಲ್ಲಿನ ಕಲಬೆರಕೆ ಎಣ್ಣೆಯ ಮಾರಾಟವನ್ನು ತಡೆಯುವುದಿಲ್ಲವೋ ಮತ್ತು ರಾಸಾಯನಿಕ ಸಾಮಗ್ರಿಗಳನ್ನು ನಿಷೇಧಿಸುವುದಿಲ್ಲವೋ, ಅಲ್ಲಿಯವರೆಗೆ ಕೇವಲ ರಾಸಾಯನಿಕ ಪ್ರಕ್ರಿಯೆಯನ್ನು ಮಾಡುವುದರಿಂದ ಮೂರ್ತಿಯ ರಕ್ಷಣೆಯಾಗಲು ಸಾಧ್ಯವಿಲ್ಲ ! – ಸಂಪಾದಕರು)
೨. ಪೂಜಾ ಸಾಮಗ್ರಿಗಳ ಕುರಿತು ಕಠಿಣ ನಿಯಮಾವಳಿಯ ಅವಶ್ಯಕತೆ !
ಶ್ರೀ ಶನಿದೇವರ ಮೂರ್ತಿಯ ಮೇಲೆ ಎಣ್ಣೆಯೊಂದಿಗೆ ಕಪ್ಪು ಎಳ್ಳು, ರಾಸಾಯನಿಕ ಬಣ್ಣವಿರುವ ಕಪ್ಪು ಬಟ್ಟೆ, ತೆಂಗಿನಕಾಯಿ ಮತ್ತು ಕುದುರೆಯ ಕಬ್ಬಿಣದ ಲಾಳವನ್ನು ಅರ್ಪಿಸುವ ತಪ್ಪು ಪದ್ಧತಿಯು ಪ್ರಸ್ತುತ ಹೆಚ್ಚಾಗಿದೆ. ಈ ವಸ್ತುಗಳ ಘರ್ಷಣೆಯಿಂದ ಮತ್ತು ರಾಸಾಯನಿಕ ಪ್ರಕ್ರಿಯೆಯಿಂದ ಪವಿತ್ರ ಮೂರ್ತಿಯ ಮೇಲ್ಮೈ ಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ. ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಮೂರ್ತಿಯ ಪವಿತ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಭಕ್ತರ ಶ್ರದ್ಧೆಯನ್ನು ರಕ್ಷಿಸಲು ದೇವಸ್ಥಾನ ಆಡಳಿತ ಮಂಡಳಿಯು ಪೂಜೆಯ ಸಾಮಗ್ರಿಗಳ ಕುರಿತು ತಕ್ಷಣವೇ ಒಂದು ನಿರ್ದಿಷ್ಟ ನಿಯಮಾವಳಿಯನ್ನು ಜಾರಿಗೆ ತರುವುದು ಅತ್ಯಗತ್ಯವಾಗಿದೆ.
೩. ಅತಿ ಗಣ್ಯ ವ್ಯಕ್ತಿಗಳಿಗಾಗಿ ವಿಶೇಷ ದರ್ಶನ ಸೌಲಭ್ಯ !
ಕಟ್ಟೆಯ ಮೇಲೆ ಹೋಗಿ ಶ್ರೀ ಶನಿದೇವರ ದರ್ಶನ ಪಡೆಯಲು ಸಾಮಾನ್ಯ ಭಕ್ತರಿಂದ ೫೦೦ ರೂಪಾಯಿ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ, ಆದರೆ ಇನ್ನೊಂದೆಡೆ ಅತಿ ಗಣ್ಯ ವ್ಯಕ್ತಿಗಳ ದರ್ಶನಕ್ಕಾಗಿ ಆಡಳಿತ ಮಂಡಳಿಯು ಕೆಂಪುಹಾಸು(ರೆಡ್ ಕಾರ್ಪೆಟ್) ಹಾಸುತ್ತದೆ. ವಿವಿಧ ಶಿಫಾರಸುಗಳನ್ನು ತರುವ ರಾಜಕೀಯ ನಾಯಕರು ಮತ್ತು ಅಧಿಕಾರಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸದೆ ನೇರ ದರ್ಶನವನ್ನು ನೀಡಲಾಗುತ್ತದೆ.
ಶ್ರೀ ಶನಿದೇವರ ಮೂರ್ತಿಗೆ ಕಲಬೆರಕೆ ಎಣ್ಣೆಯನ್ನು ಬಳಸಬಾರದು ! – ಸೌ. ಪುಷ್ಪಾತಾಯಿ ಬಾಳಾಸಾಹೇಬ ಬಾನಕರ, ಸರಪಂಚ (ಗ್ರಾಮ ಪಂಚಾಯತ ಅಧ್ಯಕ್ಷರು), ಶನಿಶಿಂಗಣಾಪುರ
ಶ್ರೀ ಶನಿದೇವರ ಮೂರ್ತಿಗೆ ವಜ್ರಲೇಪನ ಮಾಡುವ ಪ್ರಕ್ರಿಯೆಯು ನಡೆಯುತ್ತಿದೆ ಎಂಬ ಮಾಹಿತಿ ಇದೆ. ಇಲ್ಲಿ ಹೊರಗಿನ ಅಂಗಡಿಗಳಲ್ಲಿ ಯಾವುದೇ ಎಣ್ಣೆಯು ಸಿಗುತ್ತದೆ. ಆ ಎಣ್ಣೆಯು ಕಲಬೆರಕೆಯಿಂದ ಕೂಡಿರುತ್ತದೆ. ಆ ಎಣ್ಣೆಯಿಂದಾಗಿ ಮೂರ್ತಿಯ ಮೇಲೆ ವಿಭಿನ್ನ ರೀತಿಯ ಕಲೆಗಳು ಮೂಡುತ್ತವೆ. ಆ ಎಣ್ಣೆಯಲ್ಲಿ ಕಲಬೆರಕೆ ಇರುವುದರಿಂದ ಮೂರ್ತಿಯು ಸವೆಯುವ ಸಾಧ್ಯತೆಯಿದೆ. ನಮ್ಮ ಬೇಡಿಕೆ ಏನೆಂದರೆ, ಮೂರ್ತಿಯ ಮೇಲೆ ಅರ್ಪಿಸಲು ಖಾದ್ಯ ತೈಲವನ್ನೇ ಬಳಸಬೇಕು. ಅಂದರೆ ನಾವು ಅಡುಗೆಯಲ್ಲಿ ಯಾವ ಎಣ್ಣೆಯನ್ನು ಬಳಸುತ್ತೇವೆಯೋ, ಅದೇ ಎಣ್ಣೆಯನ್ನು ಮೂರ್ತಿಗೂ ಅರ್ಪಿಸಬೇಕು, ಆಗಲೇ ಅದರಿಂದ ಲಾಭವಾಗಲು ಸಾಧ್ಯ. ಇತರ ಎಣ್ಣೆಗಳಲ್ಲಿ ಕಲಬೆರಕೆ ಇರುತ್ತದೆ, ಉದಾಹರಣೆಗೆ ಈ ಸ್ಥಳದಲ್ಲಿ ಸಾಸಿವೆ ಎಣ್ಣೆಯು ಸಿಗುತ್ತದೆ; ಆದರೆ ಅದು ಅಖಾದ್ಯ (ತಿನ್ನಲು ಯೋಗ್ಯವಲ್ಲದ) ತೈಲವಾಗಿದೆ. ಆದ್ದರಿಂದ ಅದರ ಗುಣಮಟ್ಟದ ಕುರಿತು ಏನನ್ನೂ ಹೇಳಲು ಬರುವುದಿಲ್ಲ. ಈ ಕುರಿತು ಮಾಜಿ ಸರಪಂಚ ಶ್ರೀ. ಬಾಳಾಸಾಹೇಬ ಬಾನಕರ ಅವರು ಈ ಹಿಂದೆ ಪತ್ರವ್ಯವಹಾರವನ್ನು ಮಾಡಿದ್ದರು. ಹೊರಗೆ ಸಿಗುವ ಎಣ್ಣೆಯು ಒಂದೋ ಶುದ್ಧವಾಗಿರಬೇಕು, ಇಲ್ಲದಿದ್ದರೆ ದೇವಸ್ಥಾನ ಮಂಡಳಿಯೇ ಎರಡು ಅಥವಾ ಮೂರು ‘ಬ್ರ್ಯಾಂಡ್’ಗಳ (ಉತ್ಪಾದಕರ) ಹೆಸರುಗಳನ್ನು ಘೋಷಿಸಬೇಕು. ಆಗ ಭಕ್ತರು ಅದೇ ಸಂಸ್ಥೆಯ ಎಣ್ಣೆಯನ್ನು ಖರೀದಿಸಬಹುದು, ಇದರಿಂದ ಅದು ಶುದ್ಧವಾಗಿದೆ ಎಂಬ ಖಾತ್ರಿ ಇರುತ್ತದೆ ಮತ್ತು ಮೂರ್ತಿಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!