ಅಪ್ರಾಪ್ತ ಹುಡುಗಿಯರ ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೇರಳದ ಪಾದ್ರಿಯ ಬಂಧನ

ಕೋಝಿಕೊಡ (ಕೇರಳ) – ಕೇರಳದಲ್ಲಿ ಅನ್ಯ ರಾಜ್ಯಗಳಿಂದ ಅಪ್ರಾಪ್ತ ಹುಡಗಿಯರನ್ನು ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೊಝಿಕೊಡ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಅರ್.ಪಿ.ಎಫ್) ಓರ್ವ ಚರ್ಚ್ ಪಾದ್ರಿಯನ್ನು ಬಂಧಿಸಿದ್ದಾರೆ. ಜೇಕಬ ವರ್ಗೀಸ ಆರೋಪಿಯಾಗಿದ್ದು ಅವನು ಕರುಣಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕನಾಗಿದ್ದನು. ಅವನು ಸ್ವತಂತ್ರ ಪೇಂಟೇಕೋಸ್ಟ್ ಚರ್ಚಿಗೆ ಸಂಬಂಧಪಟ್ಟವನಾಗಿದ್ದನು. ಕೊಝಿಕೊಡ ರೈಲ್ವೆ ಪೊಲೀಸರು ಸುಮಾರು ೧೨ ಹುಡುಗಿಯ ಕಳ್ಳಸಾಗಾಣಿಕೆ ಮಾಡುವ ದಲ್ಲಾಳಿಗಳನ್ನು ಬಂಧಿಸಿದ್ದರು. ಲೋಕೇಶ ಕುಮಾರ ಮತ್ತು ಶಾಮಲಾಲ ಎಂದು ಅವರ ಹೆಸರಾಗಿದ್ದು ಅವರು ರಾಜಸ್ಥಾನದ ನಿವಾಸಿಗಳು. ಈ ಹುಡುಗಿಯರನ್ನು ಮಂಗಳವಾರ ಗುಜರಾತಿನ ವಡೋದರಾ ಇಲ್ಲಿಂದ ಓಖಾ ಎಕ್ಸ್ಪ್ರೆಸ್ ನಿಂದ ಕರೆತರಲಾಯಿತು. ಅವರಿಗೆ ಕರುಣಾ ಚಾರಿಟೇಬಲ್ ಟ್ರಸ್ಟ್ ನ ಆಸ್ಪತ್ರೆಯಲ್ಲಿ ಇರಿಸುವುವರಿದ್ದರು. ಪ್ರಸ್ತುತ ಆ ಹುಡಗಿಯರು ರೈಲ್ವೇ ಪೊಲೀಸರ ಬಾಲ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಹುಡುಗಿಯರು ಬಡ ಕುಟುಂಬದವರು. ಕರುಣಾ ಚಾರಿಟೇಬಲ್ ಟ್ರಸ್ಟ್ ಆವಶ್ಯಕ ದಾಖಲೆಗಳಿಲ್ಲದೆ ಕಾರ್ಯನಿರತವಾಗಿರುವುದು ಕಂಡು ಬಂದಿದೆ. ಆರೋಪಿಗಳು ಪೊಲೀಸರಿಗೆ ತಮ್ಮ ಹೇಳಿಕೆ ನೀಡುವಾಗ ಅಲುವಾ ಪುಲುವಾಹಿಯ ಆಸ್ಪತ್ರೆಯಲ್ಲಿ ಹುಡುಗಿಯರಿಗೆ ಶಿಕ್ಷಣ ಸಿಗಲಿ ಎಂದು ಕೇರಳಕ್ಕೆ ಕರೆತರಲಾಗಿದೆ ಎಂದರು.

ಸಂಪಾದಕೀಯ ನಿಲುವು

ಇಂತಹ ಸಮಾಚಾರಗಳು ತಥಾಕಥಿತ ಜಾತ್ಯತೀತ ಪ್ರಸಾರ ಮಾಧ್ಯಮಗಳು ಪ್ರಸಾರ ಮಾಡುವುದಿಲ್ಲವೆಂದು ನೆನಪಿಟ್ಟುಕೊಳ್ಳಿ !