ಕೇರಳಮ್ ಹೈಕೋರ್ಟ್‌ನಿಂದ ಹೊಸ ಮೊಕದ್ದಮೆ ದಾಖಲಿಸಲು ಅನುಮತಿ

ಕೊಚ್ಚಿ (ಕೇರಳಮ್) – ಶಬರಿಮಲೆ ದೇವಸ್ಥಾನದ ಚಿನ್ನದ ಕಳ್ಳತನ ಪ್ರಕರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ ಅವರ ವಿರುದ್ಧ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಅವರ ಬಳಿ ಹಲವು ಅಧಿಕಾರಿಗಳು ಮತ್ತು ಮಂಡಳಿಯ ಸದಸ್ಯರ ಪಾತ್ರಕ್ಕೆ ಸಂಬಂಧಿಸಿದ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ವಿಶೇಷ ತನಿಖಾ ತಂಡವು ಕೇರಳಮ್ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ತನಿಖಾ ತಂಡಕ್ಕೆ ಅಗತ್ಯವೆನಿಸಿದರೆ 2025 ರ ಚಿನ್ನದ ಲೇಪನ ಪ್ರಕರಣದಲ್ಲಿ ಪ್ರತ್ಯೇಕವಾಗಿ ಹೊಸ ಮೊಕದ್ದಮೆ ದಾಖಲಿಸಬಹುದು ಅಥವಾ 2019 ರಲ್ಲಿ ಚಿನ್ನ ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಡೆಯುತ್ತಿರುವ ಪ್ರಕರಣದಲ್ಲಿ ತನಿಖೆಯ ಅಂಶಗಳನ್ನು ಸೇರಿಸಬಹುದು’ ಎಂದು ಹೇಳಿದೆ. ಕೆಲವು ಅಧಿಕಾರಿಗಳು ಮತ್ತು ಮಂಡಳಿಯ ಮಾಜಿ ಸದಸ್ಯರ ಪಾತ್ರದ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದೆ. ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ದೊರೆತರೆ, ತಂಡವು ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬಹುದು. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 20 ರಂದು ನಡೆಯಲಿದೆ.
ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅವರು, 2025 ರ ಚಿನ್ನದ ಲೇಪನ ಪ್ರಕರಣದಲ್ಲಿ ನನ್ನ ವಿರುದ್ಧ ಯಾವುದೇ ನೇರ ಆರೋಪವಿಲ್ಲ. ಕೇವಲ ನ್ಯಾಯಾಲಯದ ಅನುಮತಿ ಪಡೆಯಲಿಲ್ಲ ಎನ್ನುವ ಆರೋಪವಷ್ಟೇ ಇದೆ. ಮೂರ್ತಿಗಳಿಗೆ ಮರುಲೇಪನಕ್ಕಾಗಿ ಕಳುಹಿಸುವಾಗ ಎಲ್ಲಾ ನಿಯಮಗಳನ್ನು ಪಾಲಿಸಲಾಗಿತ್ತು. ಮಂಡಳಿಗೆ 2019 ರ ಚಿನ್ನದ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದರು.
ದೇವಸ್ಥಾನದ 500 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳತನವಾಗಿದೆ ಎಂದು ಕಾಂಗ್ರೆಸ್ ಮುಖಂಡರ ಆರೋಪ
ಈ ಪ್ರಕರಣದಲ್ಲಿ ತನಿಖಾ ತಂಡಕ್ಕೆ ಮಹತ್ವದ ಮಾಹಿತಿ ನೀಡಿದ್ದ ಕಾಂಗ್ರೆಸ್ ನಾಯಕ ರಮೇಶ ಚೆನ್ನಿತ್ತಲ ಅವರು, ದೇವಸ್ಥಾನದ ಚಿನ್ನದ ಕಳ್ಳತನದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಹಳೆಯ ಅಧಿಕಾರಿಗಳು ಶಾಮೀಲಾಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ನನ್ನ ಅಂದಾಜಿನ ಪ್ರಕಾರ ನಾಪತ್ತೆಯಾಗಿರುವ ಆಸ್ತಿಯ ಮೌಲ್ಯ ಸುಮಾರು 500 ಕೋಟಿ ರೂಪಾಯಿ ಇರಬಹುದು’, ಎಂದು ದಾವೆ ಮಾಡಿದ್ದಾರೆ.
ಈ ಪ್ರಕರಣ ಏನು?
1. ಉದ್ಯಮಿ ವಿಜಯ್ ಮಲ್ಯ ಅವರು ದೇವಸ್ಥಾನಕ್ಕೆ 31 ಕೆಜಿ ಚಿನ್ನವನ್ನು ದಾನವಾಗಿ ನೀಡಿದ್ದರು. ಈ ದಾನದಿಂದ ದೇವಸ್ಥಾನದ ವಿವಿಧ ಸ್ಥಳಗಳಲ್ಲಿ ಚಿನ್ನದ ಲೇಪನವನ್ನು ಮಾಡಲಾಗಿದೆ.
2. ಶಬರಿಮಲೆ ದೇವಸ್ಥಾನದ ಗರ್ಭಗುಡಿ ಮತ್ತು ದ್ವಾರಪಾಲಕ ವಿಗ್ರಹಗಳ ಮೇಲೆ ಅಳವಡಿಸಲಾಗಿದ್ದ ಚಿನ್ನದ ಲೇಪಿತ ತಾಮ್ರದ ತಗಡುಗಳಿಂದ ಚಿನ್ನವನ್ನು ತೆಗೆದು ಕಳ್ಳತನ ಮಾಡಲಾಗಿದೆ.
3. ಈ ಪ್ರಕರಣದ ತನಿಖೆಗಾಗಿ ರಚಿಸಲಾದ ಕೇರಳಮ್ ಸರಕಾರದ ವಿಶೇಷ ತನಿಖಾ ತಂಡಕ್ಕೆ, ದೇವಸ್ವಂ ಮಂಡಳಿಯ ಅಧಿಕಾರಿಗಳು ಸೂಕ್ತ ಅನುಮತಿಯಿಲ್ಲದೆ ಈ ತಗಡುಗಳನ್ನು ಹೊರಗೆ ನೀಡಿದ್ದರು ಮತ್ತು ಇದರಲ್ಲಿ ಉದ್ಯಮಿಗಳು ಹಾಗೂ ಇತರರು ಶಾಮೀಲಾಗಿದ್ದರು ಎಂಬುದು ಪತ್ತೆಯಾಗಿದೆ.
4. ಚೆನ್ನೈನಲ್ಲಿ ಮೂರ್ತಿಗಳ ಮೇಲಿನ ಹಳೆಯ ಚಿನ್ನದ ಪದರವನ್ನು ತೆಗೆಯಲಾಗಿತ್ತು. ಹೊಸ ಪದರವನ್ನು ಹಾಕಲು ಅತ್ಯಂತ ಕಡಿಮೆ ಚಿನ್ನದ ಅಗತ್ಯವಿತ್ತು; ಆದರೆ ಉಳಿದ ಚಿನ್ನವನ್ನು ನಾಪತ್ತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
5. ಕೆಲಸವು ಸರಿಯಾಗಿ ನಡೆಯದಿದ್ದರೂ ಮೂರ್ತಿಗಳಿಗಾಗಿ 40 ವರ್ಷಗಳ ವಾರೆಂಟಿ ಪ್ರಮಾಣಪತ್ರವನ್ನು ನೀಡಲಾಗಿತ್ತು. ಆದರೂ ಕೆಲವು ತಿಂಗಳುಗಳಲ್ಲೇ ಚಿನ್ನದ ಪದರವು ಹಾಳಾಗಿ ಅದರ ಕೆಳಗಿನ ತಾಮ್ರದ ಮೇಲ್ಮೈ ಕಾಣಿಸತೊಡಗಿತು.
6. 2019 ರಲ್ಲಿ ನಡೆದಿದ್ದ ಚಿನ್ನದ ಅಕ್ರಮವನ್ನು ಮುಚ್ಚಿಹಾಕಲು 2025 ರಲ್ಲಿ ವಿಗ್ರಹಗಳನ್ನು ಮತ್ತೆ ಚೆನ್ನೈಗೆ ಕಳುಹಿಸುವ ಯೋಜನೆ ರೂಪಿಸಲಾಯಿತು. ನವೆಂಬರ್ 2023 ರಲ್ಲಿ ಪಿ.ಎಸ್. ಪ್ರಶಾಂತ ಮಂಡಳಿಯ ಅಧ್ಯಕ್ಷರಾದ ನಂತರ, ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರ ವಿಶ್ವಾಸ ಗಳಿಸಿ ಮತ್ತೆ ಲೇಪನ ಮಾಡುವ ಪ್ರಸ್ತಾಪವನ್ನು ಮುಂದಿಟ್ಟರು. 2019 ರಲ್ಲಿ ಉಳಿದಿದ್ದ ಚಿನ್ನವು ಇನ್ನು ಕೂಡ ಉನ್ನಿಕೃಷ್ಣನ್ ಪೊಟ್ಟಿ ಬಳಿಯೇ ಇದೆ ಎಂಬುದು ಮಂಡಳಿಯ ಕೆಲವು ಸದಸ್ಯರಿಗೆ ತಿಳಿದಿತ್ತು. ಆದರೂ ಈ ಬಗ್ಗೆ ಕ್ರಮ ಕೈಗೊಳ್ಳುವ ಬದಲು ಅವರು ಪ್ರಕರಣವನ್ನು ಮುಚ್ಚಿಹಾಕಲು ಸಹಾಯ ಮಾಡಿದರು ಎಂದು ಆರೋಪಿಸಲಾಗಿದೆ.
7. ಈ ಪ್ರಕರಣದಲ್ಲಿ ದೇವಸ್ಥಾನದ ಮಾಜಿ ಅರ್ಚಕ ನಂಬೂದರಿ ಉನ್ನಿಕೃಷ್ಣನ್ ಪೊಟ್ಟಿ, ಚಿನ್ನದ ವ್ಯಾಪಾರಿ ಡಿ. ಮಣಿ ಮತ್ತು ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ ಎಂಬ ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಇತರ 9 ಜನರನ್ನು ಕೂಡ ಬಂಧಿಸಲಾಗಿದೆ.
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ