ಭಗವಾನ ಶ್ರೀಕೃಷ್ಣನ ದೇವಸ್ಥಾನ ಮಥುರಾದಲ್ಲಿ ಕಟ್ಟದೇ ಇನ್ನೇನು ಲಾಹೋರಿನಲ್ಲಿ ಕಟ್ಟುವರೇ ? – ಉತ್ತರಪ್ರದೇಶದ ಹೈನುಗಾರಿಕೆ ಅಭಿವೃದ್ಧಿ ಸಚಿವೆ ಚೌಧರಿ ಲಕ್ಷ್ಮೀನಾರಾಯಣ

ಕೆಲವು ದಿನಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಇತರ ಸಚಿವರು ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯ ಮೇಲೆ ಶ್ರೀಕೃಷ್ಣ ಮಂದಿರ ನಿರ್ಮಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕಾಗಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಚೌಧರಿ ಲಕ್ಷ್ಮೀನಾರಾಯಣ್ ಇವರು ಈ ಮೇಲಿನ ಉತ್ತರ ನೀಡಿದರು.

ಸಂಭಲ(ಉತ್ತರಪ್ರದೇಶ) ಇಲ್ಲಿಯ ಶ್ರೀ ಚಾಮುಂಡಾದೇವಿ ದೇವಸ್ಥಾನದ ಮೂರ್ತಿಯು ದುಷ್ಕರ್ಮಿಗಳಿಂದ ಧ್ವಂಸ

ಗುನ್ನೌರ ಕ್ಷೇತ್ರದ ಶ್ರೀ ಚಾಮುಂಡಾದೇವಿಯ ದೇವಸ್ಥಾನದಲ್ಲಿನ ಮೂರ್ತಿಯನ್ನು ದುಷ್ಕರ್ಮಿಗಳಿಂದ ಧ್ವಂಸ ಮಾಡಿರುವ ಘಟನೆ ಡಿಸೆಂಬರ್ ೫ ರ ರಾತ್ರಿ ನಡೆದಿದೆ. ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಭಾಜಪ ಅಧಿಕಾರದಲ್ಲಿದ್ದಾಗ, ಮೂರು ತಲಾಕ್ ಮೇಲೆ ಕಾನೂನು ತರಬಲ್ಲದು; ಹೀಗಿರುವಾಗ ಮಥುರಾ ಮತ್ತು ಕಾಶಿಗಾಗಿಯೂ ತರಬೇಕು ! – ಡಾ. ಪ್ರವೀಣ್ ತೊಗಾಡಿಯಾ

ಉತ್ತರಪ್ರದೇಶದಲ್ಲಿ ಭಾಜಪ ಅಧಿಕಾರದಲ್ಲಿದೆ. ಮೂರು ತಲಾಕ್‌ಗೆ ಸಂಬಂಧಿಸಿದಂತೆ ದೇಶದಲ್ಲಿ ಕಾನೂನು ಜಾರಿಗೆ ಬಂದಿತ್ತು. ಅದೇ ರೀತಿ ಮಥುರಾ ಮತ್ತು ಕಾಶಿಯ ದೇವಾಲಯಗಳಿಗೂ ಮಾಡಬೇಕು.

’ಹಿಂದೂ ಧರ್ಮವನ್ನು ಸ್ವೀಕರಿಸಿದ ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್’ ನ ಮಾಜಿ ಅಧ್ಯಕ್ಷರಾದ ವಸೀಮ ರಿಝವಿ!

’ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್’ನ ಮಾಜಿ ಅಧ್ಯಕ್ಷರಾದ ವಸೀಮ ರಿಝವಿಯವರು ಇಲ್ಲಿನ ಡಾಸನಾದೇವಿ ದೇವಸ್ಥಾನದಲ್ಲಿ ಜುನಾ ಆಖಾಡದ ಮಹಾಮಂಡಲೇಶ್ವರ ನರಸಿಂಹಾನಂದ ಗಿರಿ ಸರಸ್ವತಿಯವರ ಉಪಸ್ಥಿತಿಯಲ್ಲಿ ಹಿಂದೂ ಧರ್ಮವನ್ನು ಪ್ರವೇಶಿಸಿದರು.

ಶ್ರೀ ರಾಮ ಜನ್ಮಭೂಮಿಯದ ತೀರ್ಪು ನನ್ನದಲ್ಲ ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪು ! – ಮಾಜೀ ನ್ಯಾಯಾಧೀಶರು ರಂಜನ್ ಗೋಗೋಯಿ

ರಂಜನ್ ಗೋಗೋಯಿ ಮುಂದೆ ಮಾತನಾಡುತ್ತಾ, ಈ ತೀರ್ಪು ಧರ್ಮದ ಆಧಾರದಲ್ಲಿ ಇರದೆ ಕಾನೂನಿನ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ನ್ಯಾಯಾಧೀಶರಿಗೆ ಯಾವುದೇ ಧರ್ಮ, ಜಾತಿ ಮತ್ತು ಭಾಷೆ ಇರುವುದಿಲ್ಲ. ಸಂವಿಧಾನವೇ ಅವರ ಧರ್ಮ, ಜಾತಿ ಮತ್ತು ಭಾಷೆಯಾಗಿರುತ್ತದೆ, ಎಂದರು.

‘ನಾವು ೪೦ ಕೋಟಿ ಇದ್ದೇವೆ, ನಮ್ಮನ್ನು ದುರ್ಬಲರೆಂದು ತಿಳಿಯಬೇಡಿ !’ (ಯಂತೆ)

ಮಥುರಾದಲ್ಲಿ ಅಯೋಧ್ಯೆಯಂತಹ ಸ್ಥಿತಿಯನ್ನು ಉದ್ಭವಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದಲ್ಲಿ ೪೦ ಕೋಟಿಗಿಂತಲೂ ಹೆಚ್ಚು ಮುಸಲ್ಮಾನರಿದ್ದಾರೆ. ಅವರನ್ನು ದುರ್ಬಲರೆಂದು ತಿಳಿಯಬೇಡಿ.

ಬ್ರಿಟೀಷರ ಪೌರತ್ವವನ್ನು ಸ್ವೀಕರಿಸಿದ ಸರಕಾರಿ ಮದರಸಾದ ಮೌಲಾನಾನಿಂದ ಅಕ್ರಮವಾಗಿ ವೇತನ ಮತ್ತು ನಂತರ ಪಿಂಚಣಿ ಪಡೆದು ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿಗಳ ವಂಚನೆ !

ಆಝಮಗಡದ ಮದರಸಾವೊಂದರಲ್ಲಿ ಬ್ರಿಟನ್‌ನ ಪೌರತ್ವವನ್ನು ಪಡೆದನಂತರವೂ ಓರ್ವ ಮೌಲಾನಾನು ನೌಕರಿಯಲ್ಲಿ ಖಾಯಂ ಆಗಿದ್ದುಕೊಂಡು ವೇತನ ಪಡೆದುಕೊಂಡನು.

ಭಾರತೀಯ ಸಂಸ್ಕೃತಿಯ ಬಗ್ಗೆ ದ್ವೇಷವಿರುವ ಮುಸಲ್ಮಾನರು ಪಾಕಿಸ್ತಾನಕ್ಕೆ ಹೊರಟು ಹೋಗಲಿ ! – ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ, ಜುನಾ ಆಖಾಡ

ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ ಅವರು `ಹಿಂದೂ ಮತ್ತು ಮುಸಲ್ಮಾನರು’ ಸಹೋದರರು ಎಂದು ಹೇಳಲಾಗುತ್ತದೆ, ಆದರೆ ಅವರ ಸಂಸ್ಕೃತಿಯು ಪರಸ್ಪರ ಹೊಂದಾಣಿಕೆಯಾಗದಿರುವಾಗ ಅವರು ಎಂದಿಗೂ ಸಹೋದರರಾಗಲು ಸಾಧ್ಯವಿಲ್ಲ,’ ಎಂದು ಹೇಳಿದರು.

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬ ಹಿಂದೂ ಪ್ರತಿದಿನ 1 ಗಂಟೆ ಸಮಯ ಮತ್ತು 1 ರೂಪಾಯಿ ನೀಡಬೇಕು ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರಾಚೀನ ಭಾರತವು ವರ್ಣವ್ಯವಸ್ಥೆಯ ಮೂಲಕ ನಡೆಯುತ್ತಿತ್ತು. ಇಂದು ಅದರಲ್ಲಿ ಬದಲಾವಣೆಯಾಗಿದೆ. ಯುವಕರಿಗೆ ಜ್ಞಾನ, ವಿಜ್ಞಾನ ಮತ್ತು ವ್ಯವಹಾರ ಇವುಗಳನ್ನು ಒಂದುಗೂಡಿಸಿ ಹಿಂದೂ ರಾಷ್ಟ್ರದ ವ್ಯವಸ್ಥೆ ನಿರ್ಮಿಸಬೇಕು ಎಂದರು.

ಮಥುರಾದಲ್ಲಿ ಆಡಳಿತದಿಂದ ಕಪ್ರ್ಯೂ (ಸಂಚಾರ ನಿಷೇಧ) ಜಾರಿ

ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ