ತೀರ್ಪನ್ನು ಧರ್ಮದ ಆಧಾರದಲ್ಲಿ ನೀಡದೆ ಅದು ಕಾನೂನಿನ ಆಧಾರ ತೆಗೆದುಕೊಂಡು ನೀಡಲಾಗುತ್ತದೆ.
ವಾರಣಾಸಿ (ಉತ್ತರಪ್ರದೇಶ) – ಶ್ರೀರಾಮ ಜನ್ಮಭೂಮಿ ವಿಷಯದ ತೀರ್ಪು ನನ್ನದಾಗಿರಲಿಲ್ಲ, ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪಾಗಿದೆ ಹೀಗೆಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ರಂಜನ್ ಗೋಗೋಯಿ ಸ್ಪಷ್ಟೀಕರಣ ನೀಡಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ರಂಜನ್ ಗೋಗೋಯಿ ಅವರ ನೇತೃತ್ವದ ಪೀಠವು ಶ್ರೀರಾಮಜನ್ಮಭೂಮಿ ವಿಷಯದ ತೀರ್ಪು ನೀಡಿತ್ತು.
ರಂಜನ್ ಗೋಗೋಯಿ ಮುಂದೆ ಮಾತನಾಡುತ್ತಾ, ಈ ತೀರ್ಪು ಧರ್ಮದ ಆಧಾರದಲ್ಲಿ ಇರದೆ ಕಾನೂನಿನ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ನ್ಯಾಯಾಧೀಶರಿಗೆ ಯಾವುದೇ ಧರ್ಮ, ಜಾತಿ ಮತ್ತು ಭಾಷೆ ಇರುವುದಿಲ್ಲ. ಸಂವಿಧಾನವೇ ಅವರ ಧರ್ಮ, ಜಾತಿ ಮತ್ತು ಭಾಷೆಯಾಗಿರುತ್ತದೆ, ಎಂದರು.