ಭಾರತೀಯ ಸಂಸ್ಕೃತಿಯ ಬಗ್ಗೆ ದ್ವೇಷವಿರುವ ಮುಸಲ್ಮಾನರು ಪಾಕಿಸ್ತಾನಕ್ಕೆ ಹೊರಟು ಹೋಗಲಿ ! – ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ, ಜುನಾ ಆಖಾಡ

ಮುಸಲ್ಮಾನರ ಮತದಾನದ ಹಕ್ಕನ್ನು ಹಿಂಪಡೆಯಲು ಮನವಿ

(ಎಡಭಾಗದಲ್ಲಿ) ಮಹಾಮಂಡಲೇಶ್ವರ ಯತಿಂದ್ರಾನಂದ ಗಿರಿ

ಸಂಭಲ (ಉತ್ತರಪ್ರದೇಶ) – ಜುನಾ ಆಖಾಡದ ಮಹಾಮಂಡಲೇಶ್ವರ ಯತಿಂದ್ರಾನಂದ ಗಿರಿಯವರು `ಭಾರತದಲ್ಲಿ ವಾಸಿಸುವ ಮುಸಲ್ಮಾನರಲ್ಲಿ ಭಾರತೀಯ ಸಂಸ್ಕೃತಿ ಮತ್ತು ಭಾರತ ಸರಕಾರದ ಬಗ್ಗೆ ದ್ವೇಷವಿದೆ. ಅವರು ಇಲ್ಲಿನ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಾರೆ ಮತ್ತು ಭಾರತೀಯ ಸಂಸ್ಕೃತಿ ಹಾಗೂ ಸರಕಾರಕ್ಕೆ ಛೀಮಾರಿ ಹಾಕುತ್ತಾರೆ. ಅವರು ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಲು ಸಿದ್ಧರಿರದಿದ್ದರೆ ಅವರಿಗೆ ಭಾರತೀಯ ನಾಗರಿಕರೆಂದು ವಾಸಿಸುವ ಅಧಿಕಾರವಿಲ್ಲ. ಆದುದರಿಂದ ಅವರಿಗೆ ನೀಡಲಾದ ಮತದಾನದ ಅಧಿಕಾರವನ್ನು ಹಿಂಪಡೆಯಬೇಕು ಮತ್ತು ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸಬೇಕು. ಅವರಿಗೆ ಭಾರತದಲ್ಲಿ ಇರಲಿಕ್ಕಿದ್ದರೆ ಅವರು ಶರಣಾರ್ಥಿ ಎಂದು ಉಳಿಯಬೇಕಾಗಬಹುದು’ ಎಂದು ಹೇಳಿದ್ದಾರೆ. ಅವರು ಭಾಜಪದ ನೇತಾರ ಕಪಿಲ ಸಿಂಘಲರವರ ಮನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅವರು `ಭಾರತದ ವಿಭಜನೆಯಾಯಿತು, ಆಗ ಮುಸಲ್ಮಾನರಿಗೆ ಪಾಕಿಸ್ತಾನವನ್ನು ನೀಡಲಾಯಿತು, ಆದುದರಿಂದ ಮುಸಲ್ಮಾನರು ಭಾರತದಲ್ಲಿ ವಾಸಿಸುವ ವಿಷಯದಲ್ಲಿ ಯಾವುದೇ ಔಚಿತ್ಯವಿಲ್ಲ. ಅವರು ಇಲ್ಲಿಂದ ಹೊರಟು ಹೋಗಬೇಕು’ ಎಂದು ಹೇಳಿದರು.

ಯತಿಂದ್ರಾನಂದ ಗಿರಿಯವರು ಮುಂದುವರಿದು, ಭಾರತದ ವಿಭಜನೆಯನ್ನು ಭೌಗೋಳಿಕ ಅಥವಾ ಇತಿಹಾಸದ ಆಧಾರದಲ್ಲಿ ಅಲ್ಲ, ಬದಲಾಗಿ ಧರ್ಮದ ಆಧಾರದಲ್ಲಿ ಮಾಡಲಾಗಿದೆ. `ಹಿಂದೂ ಮತ್ತು ಮುಸಲ್ಮಾನರು’ ಸಹೋದರರು ಎಂದು ಹೇಳಲಾಗುತ್ತದೆ, ಆದರೆ ಅವರ ಸಂಸ್ಕೃತಿಯು ಪರಸ್ಪರ ಹೊಂದಾಣಿಕೆಯಾಗದಿರುವಾಗ ಅವರು ಎಂದಿಗೂ ಸಹೋದರರಾಗಲು ಸಾಧ್ಯವಿಲ್ಲ, ಎಂದರು.