ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬ ಹಿಂದೂ ಪ್ರತಿದಿನ 1 ಗಂಟೆ ಸಮಯ ಮತ್ತು 1 ರೂಪಾಯಿ ನೀಡಬೇಕು ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಮುರಾದಾಬಾದ (ಉತ್ತರಪ್ರದೇಶ) – ಭಾರತವು ಹಿಂದೂ ರಾಷ್ಟ್ರವಾಗಲು ಪ್ರತಿಯೊಬ್ಬ ಹಿಂದೂ ಪ್ರತಿದಿನ ಒಂದು ಗಂಟೆಯ ಸಮಯ ಮತ್ತು ಒಂದು ರೂಪಾಯಿ ನೀಡಬೇಕು. ಇದನ್ನು ಮಠ ಮತ್ತು ದೇವಸ್ಥಾನಗಳನ್ನು ಸ್ವಾವಲಂಬಿಯನ್ನಾಗಿಸಲು ಉಪಯೋಗಿಸಲಾಗುವುದು, ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಒಂದು ಕಾರ್ಯಕ್ರಮದಲ್ಲಿ ಕರೆ ನೀಡಿದರು. `ಶೇ. 80 ರಷ್ಟು ಹಿಂದೂಗಳು ಸಂಘಟಿತರಾಗಿದ್ದು ಉಳಿದಿರುವ ಶೇ. 20 ರಷ್ಟು ಹಿಂದೂಗಳನ್ನು ಸಂಘಟಿಸಬೇಕಾಗಿದೆ’, ಎಂದು ಅವರು ಆ ಸಮಯದಲ್ಲಿ ಹೇಳಿದರು.

ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರಾಚೀನ ಭಾರತವು ವರ್ಣವ್ಯವಸ್ಥೆಯ ಮೂಲಕ ನಡೆಯುತ್ತಿತ್ತು. ಇಂದು ಅದರಲ್ಲಿ ಬದಲಾವಣೆಯಾಗಿದೆ. ಯುವಕರಿಗೆ ಜ್ಞಾನ, ವಿಜ್ಞಾನ ಮತ್ತು ವ್ಯವಹಾರ ಇವುಗಳನ್ನು ಒಂದುಗೂಡಿಸಿ ಹಿಂದೂ ರಾಷ್ಟ್ರದ ವ್ಯವಸ್ಥೆ ನಿರ್ಮಿಸಬೇಕು. ದೇಶದಲ್ಲಿ 10-10 ಕುಟುಂಬಗಳು ಒಗ್ಗೂಡಿ ಧರ್ಮ ಮತ್ತು ಅಧ್ಯಾತ್ಮದ ಬಗ್ಗೆ ಚರ್ಚಿಸತೊಡಗಿದರೆ, ದೇಶವು ಹಿಂದೂ ರಾಷ್ಟ್ರದ ದಿಕ್ಕಿನತ್ತ ಮುನ್ನಡೆಯುವುದು, ಎಂದರು.