ಭಾಜಪ ಅಧಿಕಾರದಲ್ಲಿದ್ದಾಗ, ಮೂರು ತಲಾಕ್ ಮೇಲೆ ಕಾನೂನು ತರಬಲ್ಲದು; ಹೀಗಿರುವಾಗ ಮಥುರಾ ಮತ್ತು ಕಾಶಿಗಾಗಿಯೂ ತರಬೇಕು ! – ಡಾ. ಪ್ರವೀಣ್ ತೊಗಾಡಿಯಾ

ಜೌನಪುರ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿ ಭಾಜಪ ಅಧಿಕಾರದಲ್ಲಿದೆ. ಮೂರು ತಲಾಕ್‌ಗೆ ಸಂಬಂಧಿಸಿದಂತೆ ದೇಶದಲ್ಲಿ ಕಾನೂನು ಜಾರಿಗೆ ಬಂದಿತ್ತು. ಅದೇ ರೀತಿ ಮಥುರಾ ಮತ್ತು ಕಾಶಿಯ ದೇವಾಲಯಗಳಿಗೂ ಮಾಡಬೇಕು. ದೇಶವನ್ನು ಒಡೆಯುವ ಮತ್ತು ದೇವಸ್ಥಾನಗಳನ್ನು ಕೆಡಹುವ ಜಿಹಾದಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅವರನ್ನು ನಿರ್ನಾಮ ಮಾಡಬೇಕು. ಹೀಗೆ ಮಾಡಿದರೆ ಮುಂಬರುವ ಉತ್ತರಪ್ರದೇಶದ ಚುನಾವಣೆಯಲ್ಲಿ ಭಾಜಪಕ್ಕೆ ಲಾಭವಾಗಲಿದೆ, ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ಅಧ್ಯಕ್ಷ ಡಾ. ಪ್ರವೀಣ ತೊಗಾಡಿಯಾ ಹೇಳಿದರು. ಇಲ್ಲಿನ ಶಾರದಾ ಶಕ್ತಿ ಪೀಠದ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ಡಾ. ತೊಗಾಡಿಯಾ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಹಿಂದೂಗಳ ಮಹಾ ಹೋರಾಟದ ನಂತರ ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿತಿಯಾಗುತ್ತಿದೆ. ಇದು ತುಂಬಾ ಸಂತೋಷದ ವಿಷಯವಾಗಿದೆ. ಇದನ್ನು ನೋಡಿದಾಗ ತೃಪ್ತಿಯಾಗುತ್ತದೆ.

೨. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹೇಗೆ ಅಭಿಯಾನ ಆರಂಭಿಸಿದೆವೋ ಅದೇ ರೀತಿ ಈಗ ಬಡತನ ಮುಕ್ತ ಭಾರತಕ್ಕಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಅಗತ್ಯವಿದೆ. ಶ್ರೀರಾಮ ಮಂದಿರ ಆಂದೋಲನ ಶುರುವಾದಾಗ ಒಂದಷ್ಟು ವಿಷಯಗಳನ್ನು ನಾನು ಮುಂದೆ ಇಟ್ಟಿದ್ದೆ. ಪ್ರತಿಯೊಬ್ಬ ಹಿಂದೂವಿಗೆ ಅನ್ನ, ಆರೋಗ್ಯ ಮತ್ತು ಉತ್ತಮ ಶಿಕ್ಷಣ, ಯುವಕರಿಗೆ ಉದ್ಯೋಗ, ರೈತರಿಗೆ ತಮ್ಮ ಉತ್ಪನ್ನಗಳು ಹಾಗೂ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು ಎಂದು ಪ್ರಸ್ತಾಪ ಮಂಡಿಸಲಾಗಿತ್ತು ಎಂದು ಹೇಳಿದರು.