|
ಸಂತ ಕಬೀರನಗರ (ಉತ್ತರಪ್ರದೇಶ) – ಆಝಮಗಡದ ಮದರಸಾವೊಂದರಲ್ಲಿ ಬ್ರಿಟನ್‌ನ ಪೌರತ್ವವನ್ನು ಪಡೆದನಂತರವೂ ಓರ್ವ ಮೌಲಾನಾನು ನೌಕರಿಯಲ್ಲಿ ಖಾಯಂ ಆಗಿದ್ದುಕೊಂಡು ವೇತನ ಪಡೆದುಕೊಂಡನು. ಅಷ್ಟೇ ಅಲ್ಲದೆ ಸೇವಾನಿವೃತ್ತಿಯ ಬಳಿಕ ಬ್ರಿಟನನಲ್ಲಿ ನೆಲೆಸಿದ ನಂತರ ಕೂಡ ಆತ ಪ್ರತೀ ತಿಂಗಳು ೪೦ ಸಾವಿರ ರೂಪಾಯಿ ನಿವೃತ್ತಿ ಪಿಂಚಣಿ ಎಂದು ತೆಗೆದುಕೊಂಡನು. ಈ ಘಟನೆ ಬೆಳಕಿಗೆ ಬಂದ ನಂತರ ಕೇಂದ್ರೀಯ ತನಿಖಾ ದಳವು ಉತ್ತರಪ್ರದೇಶ ಪೊಲೀಸ್ ಮಹಾಸಂಚಾಲಕರಿಗೆ ಪತ್ರ ಬರೆದು ಆರೋಪಿಯ ವಿರುದ್ಧ ಕಾರ್ಯಾಚರಣೆ ನಡೆಸಲು ಹೇಳಿದ್ದಾರೆ.
मौलाना ब्रिटिश नागरिकता के बाद भी मदरसे से लेता रहा सैलरी और बाद में ₹40,000 पेंशन: मनी लॉन्ड्रिंग सहित अवैध विदेशी फंडिंग का मामला#UttarPradeshhttps://t.co/WMdnZGXvgm
— ऑपइंडिया (@OpIndia_in) November 24, 2021
ಸಂತ ಕಬೀರನಗರ ಜಿಲ್ಲೆಯ ಖಲೀಲಾಬಾದ ಕ್ಷೇತ್ರದಲ್ಲಿನ ಸಾಹಸರಾವ ಮಾಫೀ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯೇ ಅಬ್ದುಲ್ ಕರೀಮ ಎಂಬ ವ್ಯಕ್ತಿಯು, ಮೌಲಾನಾ ಶಮಶುಲ ಹೊದಾನು ಬ್ರಿಟೀಷ ಪೌರತ್ವವನ್ನು ಪಡೆದುಕೊಂಡ ಬಳಿಕವೂ ಸರಕಾರಿ ಮದರಸಾದ ಮೌಲಾನಾ ಎಂದು ವೇತನ ಪಡೆದುಕೊಳ್ಳುತ್ತದ್ದನು ಮತ್ತು ಈಗ ಸೇವಾನಿವೃತ್ತಿ ಪಡೆದುಕೊಂಡ ಬಳಿಕ ನಿವೃತ್ತಿ ವೇತನ ಪಡೆದುಕೊಳ್ಳುತ್ತಿದ್ದಾನೆ, ಎಂದು ದೂರು ನೀಡಿದ್ದನು. (ದೂರು ನೀಡದೆ ಇದ್ದಿದ್ದರೆ ಈ ವಂಚನೆ ಬೆಳಕಿಗೆ ಬರುತ್ತಿರಲಿಲ್ಲ. ಇದು ಆಡಳಿತಕ್ಕೆ ಲಜ್ಜಾಸ್ಪದ ! – ಸಂಪಾದಕರು) ಕರೀಮ್‌ಗೆ ಶಮಶುಲ ಹೊದಾನ ಮೇಲೆ ಅನುಮಾನವಿತ್ತು. ಆದ್ದರಿಂದ ಅವರು ಮಾಹಿತಿ ಅಧಿಕಾರಿಯ ಅಡಿಯಲ್ಲಿ ಈ ಮಾಹಿತಿ ಪಡೆದುಕೊಂಡರು. ಶಮಶುಲನು ೨೦೧೩ ರಲ್ಲಿ ಬ್ರಿಟೀಷ ಪೌರತ್ವವನ್ನು ಸ್ವೀಕರಿಸಿದ್ದ. ಅನಂತರ ೪ ವರ್ಷಗಳವರೆಗೂ ಮದರಸಾದಲ್ಲಿ ಕಲಿಸುತ್ತಿದ್ದನು. ೨೦೧೭ ರಲ್ಲಿ ಸೇವಾನಿವೃತ್ತನಾದನು. ಅನಂತರವೂ ಆತ ನಿವೃತ್ತಿ ವೇತನ ತೆಗೆದುಕೊಳ್ಳುತ್ತಿದ್ದ. ಸಂವಿಧಾನದ ಕಲಂ ೬೬ ರಂತೆ ಆ ರೀತಿ ಮಾಡುವುದು ಅಕ್ರಮವಾಗಿದೆ. ಸಿಕ್ಕಿದ ಮಾಹಿತಿಗೆ ಅನುಸಾರವಾಗಿ ಬ್ರಿಟನ್‌ನ ಪೌರತ್ವ ಪಡೆದುಕೊಂಡಿದ್ದ ಶಮಶುಲ ಹೊದಾನು ಸರಕಾರಿ ನೌಕರಿ ಮತ್ತು ಪಿಂಚಣಿಯ ಸ್ವರೂಪದಲ್ಲಿ ಇಲ್ಲಿಯವರೆಗೂ ೧ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಕಬಳಿಸಿದ್ದಾನೆ. ಪಿಂಚಣಿಯೆಂದು ಆತನಿಗೆ ಪ್ರತೀ ತಿಂಗಳು ೪೦ ಸಾವಿರ ರೂಪಾಯಿಗಳು ಸಿಗುತ್ತಿತ್ತು.