ಸಿಬ್ಬಂದಿಗಳು ಮನೆಯಿಂದ ಕೆಲಸ ಮಾಡುವುದರಿಂದ ವೈಯಕ್ತಿಕ ಮತ್ತು ಸಂಸ್ಥೆಯ ಬೆಳವಣಿಗೆಯು ಕುಂಠಿತವಾಗುತ್ತದೆ !

ಕೋರೋನಾ ಮಹಾಮಾರಿಯ ಕಾಲದಲ್ಲಿ ಅನೇಕ ಸಂಸ್ಥೆಗಳು ತಮ್ಮ ನೌಕಾರರಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಒದಗಿಸಿದ್ದವು. ಅನೇಕ ಕಂಪನಿಗಳಲ್ಲಿ ಈ ಸೌಲಭ್ಯವು ಇಂದಿಗೂ ಮುಂದುವರೆದಿದೆ.

ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ನಾವಾ ಶೇವಾ ಬಂದರಿನಲ್ಲಿ 40 ಮೆಟ್ರಿಕ್ ಟನ್ ಚೀನಾ ನಿರ್ಮಿತ ಪಟಾಕಿ ವಶ !

ನವಿ ಮುಂಬಯಿನ ನವಾ ಶೇವಾ ಬಂದರಿನಲ್ಲಿ ಕಸ್ಟಮ್ಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 40 ಮೆಟ್ರಿಕ್ ಟನ್ ಚೀನಾ ನಿರ್ಮಿತ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿಯಲ್ಲಿ ಶೇ. 81 ರಷ್ಟು ಜನರು ಮದ್ಯಪಾನ ಮಾಡಿ ವಾಹನ ಚಲಾವಣೆ !

‘ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್’ (ಕ್ಯಾಡ) ಹೆಸರಿನ ಸಂಸ್ಥೆಯು ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆಯನ್ನು ನಡೆಸಿತು. ಇದರಲ್ಲಿ ಭಾಗವಹಿಸಿದ್ದ 30 ಸಾವಿರ ದೆಹಲಿಯವರಲ್ಲಿ ಶೇಕಡಾ 81.2 ರಷ್ಟು ಜನರು ಮದ್ಯ ಸೇವಿಸಿ ವಾಹನ ಚಲಾಯಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಲಂಡನ್‌ನಲ್ಲಿ ಭಾರತೀಯರನ್ನು ಸುಲಿಗೆ ಮಾಡುವ ಘಟನೆಗಳಲ್ಲಿ ಭಾರಿ ಹೆಚ್ಚಳ !

ಬ್ರಿಟನ್ನಿನ ಪೊಲೀಸರು ಮತ್ತು ಸರಕಾರವು ಭಾರತೀಯರ ಭದ್ರತೆಯ ಸಂದರ್ಭದಲ್ಲಿ ನಿಷ್ಕ್ರಿಯವಾಗಿವೆ, ಎಂಬುದು ಈ ಹಿಂದೆಯೇ ಖಲಿಸ್ತಾನಿಗಳ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ದಾಳಿಯಿಂದ ಬಯಲಾಗಿದೆ!

ಪ್ರಯಾಗರಾಜ, ವಾರಣಾಸಿ ಮತ್ತು ಅಯೋಧ್ಯೆಗೆ ಒಟ್ಟು ೧ ಕೋಟಿ ಜನರಿಂದ ಭೇಟಿ !

ಫೆಬ್ರವರಿ ೯ ರ ಮೌನಿ ಅಮವಾಸ್ಯೆಯಂದು ಪ್ರಯಾಗರಾಜ, ವಾರಣಾಸಿ ಮತ್ತು ಅಯೋಧ್ಯೆಯಲ್ಲಿ ಒಟ್ಟು ೧ ಕೋಟಿಗೂ ಹೆಚ್ಚು ಭಕ್ತರು ಸೇರಿದ್ದರು. ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಾಘಮೇಳದ ಸಂದರ್ಭದಲ್ಲಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು.

ಇಬ್ಬರು ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಛಗೊಳಿಸಿದ ವಿಡಿಯೋ ವೈರಲ್ಆದ ಬಳಿಕ ಪ್ರಾಂಶುಪಾಲರ ಅಮಾನತು !

ರಾಜ್ಯದ ಚಿಕ್ಕಬಳ್ಳಾಪುರದ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವರ್ಷ ಒಬ್ಬ ಪ್ರಮುಖ ಸಂತ ಮತ್ತು ಇಬ್ಬರು ಪ್ರಧಾನ ಮಂತ್ರಿಗಳು ಮರಣ ಹೊಂದುತ್ತಾರೆ! – ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಭವಿಷ್ಯವಾಣಿ!

ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈರುಳ್ಳಿ ಕೆ.ಜಿ.ಗೆ 250 ರೂಪಾಯಿ !

ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಬೆಲೆಯೇರಿಕೆ ಗಗನಕ್ಕೇರಿದೆ. ಲಾಹೋರ್ ನಲ್ಲಿ ಒಂದು ಡಜನ್ ಮೊಟ್ಟೆಯ ಬೆಲೆ 400 ಪಾಕಿಸ್ತಾನಿ ರೂಪಾಯಿಗಳು ಮತ್ತು ಈರುಳ್ಳಿ ಕೆ.ಜಿ. 250 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.

ಉತ್ತರಪ್ರದೇಶದಲ್ಲಿ ನಗರಪಾಲಿಕೆಯಿಂದ ಗಾಜಿಯಾಬಾದ್ ಹೆಸರನ್ನು ಬದಲಾಯಿಸುವ ಪ್ರಸ್ತಾಪ !

ಸ್ವಾತಂತ್ಯ್ರ ಬಂದು ೭೫ ವರ್ಷಗಳು ಕಳೆದರೂ ಆಕ್ರಮಣಕಾರರ ಹೆಸರುಗಳು ಖಾಯಂ ಇರುವುದು, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಗೇಡು !