ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದಿಂದ ಉತ್ತರ ಕೇಳಿದೆ !
ನವ ದೆಹಲಿ – ಬೆಂಗಳೂರಿನ ಗೋರಿಪಾಳ್ಯವನ್ನು ‘ಪಾಕಿಸ್ತಾನ’ ಎಂದು ಹೇಳಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯವು ಉತ್ತರ ಕೇಳಿದೆ. ಸರ್ವೋಚ್ಚ ನ್ಯಾಯಾಲಯವು ಸ್ವತಃ ಈ ಟಿಪ್ಪಣಿಯ ಕುರಿತು ಗಮನಹರಿಸಿ ಉತ್ತರ ಕೇಳಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ‘ರಿಜಿಸ್ಟರ್ ಜನರಲ್’ ಇಂದ ಈ ಸಂದರ್ಭದಲ್ಲಿ ವರದಿ ಕೇಳಿದೆ.
೧. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಇವರ ೨ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಒಂದು ವಿಡಿಯೋದಲ್ಲಿ ಅವರು ಬೆಂಗಳೂರಿನ ಗೋರಿಪಾಳ್ಯವನ್ನು ‘ಪಾಕಿಸ್ತಾನ’ ಎಂದು ಹೇಳಿರುವುದು, ಮತ್ತು ಇನ್ನೊಂದು ವಿಡಿಯೋದಲ್ಲಿ ಅವರು ಮಹಿಳಾ ನ್ಯಾಯವಾದಿಗಳ ಕುರಿತು ಅಸಂವೇದನಶೀಲ ಟಿಪ್ಪಣಿ ಮಾಡಿರುವುದು ಕಂಡು ಬಂದಿದೆ.
೨. ನ್ಯಾಯಾಧೀಶ ಚಂದ್ರಚೂಡ ಇವರು ಈ ಪ್ರಕರಣದ ಕುರಿತು ಗಮನಹರಿಸಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಇವರಿಗೆ, ನಾವು ಕೆಲವು ಮೂಲಭೂತ ಮಾರ್ಗದರ್ಶಕ ಅಂಶಗಳು ಪ್ರಸಾರ ಗೊಳಿಸಬಹುದು. ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ನಮ್ಮ ಮೇಲೆ (ನ್ಯಾಯಾಲಯದ ಮೇಲೆ) ಸೂಕ್ಷ್ಮವಾದ ಗಮನ ಇರಿಸಲಾಗುತ್ತದೆ ಮತ್ತು ನಾವು ಅದರ ಪ್ರಕಾರವೇ ವರ್ತಿಸಬೇಕಾಗುತ್ತದೆ ಎಂದು ಹೇಳಿದರು.
ನ್ಯಾಯಮೂರ್ತಿ ವೇದವ್ಯಾಸಚಾರ್ಯ ಶ್ರೀಶಾನಂದ ಇವರು ಏನು ಹೇಳಿದ್ದರು ?
ನ್ಯಾಯಮೂರ್ತಿ ವೇದವ್ಯಾಶಾಚಾರ್ಯ ಶ್ರೀಶಾನಂದ ವಿಚಾರಣೆಯ ಸಮಯದಲ್ಲಿ, ಮೈಸೂರ್ ರೋಡಿನಲ್ಲಿನ ಸೇತುವೆ ಕಡೆ ಹೋಗಿ ನೋಡಿ, ಪ್ರತಿಯೊಂದು ರಿಕ್ಷಾದಲ್ಲಿ ೧೦ ಜನರು ಕುಳಿತಿರುತ್ತಾರೆ. ಇಲ್ಲಿ ಕಾನೂನು ಜಾರಿ ಆಗುವುದಿಲ್ಲವೇ ? ಕಾರಣ ಮೈಸೂರ್ ರೋಡ ಮೇಲಿನ ಸೇತುವೆ ಗೌರಿ ಪಾಳ್ಯದಿಂದ ಎಡಗಡೆ ಮಾರುಕಟ್ಟೆಗೆ ಹೋಗುತ್ತದೆ. ಇದು ಪಾಕಿಸ್ತಾನದಲ್ಲಿದೆ, ಅದು ಭಾರತದಲ್ಲಿಲ್ಲ. ಇದು ವಾಸ್ತವವಾಗಿದೆ. ಅಲ್ಲಿ ಎಷ್ಟೇ ಕಠೋರ ಪೊಲೀಸ ಅಧಿಕಾರಿಗಳ ನೇಮಕ ಮಾಡಿದರು, ಅವರನ್ನೇ ಹೊಡೆಯಲಾಗುತ್ತದೆ, (ಎಲ್ಲಿ ಪೊಲೀಸರ ಪರಿಸ್ಥಿತಿ ಹೇಗೆ ಇದ್ದರೆ, ಅಲ್ಲಿ ಸಾಮಾನ್ಯ ಹಿಂದುಗಳ ಸ್ಥಿತಿ ಏನಾಗಬೇಡ ?, ಇದರ ಯೋಚನೆ ಮಾಡದೇ ಇದ್ದರೆ ಒಳಿತು ! – ಸಂಪಾದಕರು)
ಸಂಪಾದಕೀಯ ನಿಲುವುಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಹೀಗೆ ಏಕ ಅನಬೇಕಾಯಿತು ? ಇದರ ಕುರಿತು ದೇಶಾದ್ಯಂತ ಚರ್ಚೆ ನಡೆಯಬೇಕು. ದೇಶದಲ್ಲಿನ ಜನರ ಮನಸ್ಥಿತಿ ಕೂಡ ಹೀಗೆ ಕಂಡು ಬರುತ್ತಿದೆ. ಇದಕ್ಕೆ ಯಾರು ಜವಾಬ್ದಾರರು ಮತ್ತು ಏಕೆ ? ಇದು ಕೂಡ ಬೆಳಕಿಗೆ ಬರಬೇಕು ! |