(ಮಾಬ್ ಲೀಚಿಂಗ್ ಎಂದರೆ ಸಮೂಹದಿಂದ ನಡೆಯುವ ಹತ್ಯೆ)
ಪಾಟಲಿಪುತ್ರ – ಬೇರೆ ಬೇರೆ ಧರ್ಮದಲ್ಲಿನ ಜನರಿಗೆ ಶಾಂತಿಯಿಂದ ಸಹಬಾಳ್ವೆಯಿಂದ ಇರುವುದಿದ್ದರೆ, ಮನುಷ್ಯ ಅಥವಾ ಹಸು ಇವುಗಳಲ್ಲಿ ಯಾರ ಮೇಲೆ ಕೂಡ ‘ಮಾಬ್ ಲೀಚಿಂಗ್’ ಆಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪದಾಧಿಕಾರಿ ಇಂದ್ರೇಶಕುಮಾರ ಇವರು ಹೇಳಿದರು. ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಜಾತಿ ಜನಗಣತಿಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸಂಘ ಅದರ ಪರವಾಗಿ ಇದೆ ಎಂದು ಅವರು ಪತ್ರಕರ್ತರ ಜೊತೆ ಮಾತನಾಡುವಾಗ ಹೇಳಿದರು. ಪ.ಪೂ. ಸರಸಂಘಚಾಲಕರ ಅಭಿಪ್ರಾಯ, ಇದು ಎಲ್ಲಾ ಸಂಘದ ಸ್ವಯಂಸೇವಕರ ಅಭಿಪ್ರಾಯವಾಗಿದೆ ಎಂದು ಅವರು ನಮೂದಿಸಿದರು.
ಇಂದ್ರೇಶಕುಮಾರ ಇವರು ಮಾತು ಮುಂದುವರಿಸಿ, ”ಜಾತಿ ಇದು ವಾಸ್ತವವಾಗಿದೆ, ಅದನ್ನು ನಾವು ನಿರಾಕರಿಸಲಾಗುವುದಿಲ್ಲ. ಆದ್ದರಿಂದ ಜಾತಿಯ ಈ ವಿಷ ಹೆಚ್ಚೆಚ್ಚು ದೂರ ಇಡುವ ಪ್ರಯತ್ನ ಮಾಡಬೇಕು. ಅನೇಕ ಧರ್ಮಗಳಿವೆ ಮತ್ತು ಇರಬಹುದು; ಆದರೆ ಧಾರ್ಮಿಕ ಕಟ್ಟರತೆ ಮತ್ತು ಅದರಿಂದ ನಡೆಯುವ ಹಿಂಸಾಚಾರದಿಂದ ನಾವು ಜಾಗೃತವಾಗಿರಬೇಕು. ಜಗತ್ತಿನಲ್ಲಿನ ಅನೇಕ ಪ್ರದೇಶದಲ್ಲಿನ ಜನರು ಮಾಂಸ ಸೇವಿಸುತ್ತಾರೆ; ಆದರೆ ಗೋಮಾಂಸದ ಬಗ್ಗೆ ಜನರು ಸೂಕ್ಷ್ಮವಾಗಿದ್ದಾರೆ. ಇದನ್ನು ನಾವು ತಿಳಿದುಕೊಳ್ಳಬೇಕು. ವಿವಿಧತೆಯಲ್ಲಿ ಏಕತೆಯನ್ನು ನಾವು ಆಚರಿಸ ಬೇಕಿದೆ.” ಎಂದು ಹೇಳಿದರು.