|
ಮುಂಬಯಿ – ಭಾಜಪದ ಸಂಸದೆ ಮತ್ತು ನಟಿ ಕಂಗನ ರಾಣಾವತ್ ಇವರು ನಿರ್ಮಿಸಿರುವ ‘ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ನಿರಾಕರಿಸಿರುವುದರಿಂದ ಚಲನಚಿತ್ರ ಪರೀಕ್ಷಣಾ ಮಂಡಳಿಗೆ (ಸೆನ್ಸಾರ್ ಬೋರ್ಡಿಗೆ) ಮುಂಬಯಿ ಉಚ್ಛ ನ್ಯಾಯಾಲಯವು ಛೀಮಾರಿ ಹಾಕಿದೆ. ‘ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡುವ ಕುರಿತು ಸಪ್ಟೆಂಬರ್ ೨೫ ವರೆಗೆ ನಿರ್ಣಯ ತೆಗೆದುಕೊಳ್ಳಬೇಕೆಂದು ಚಲನಚಿತ್ರ ಪರೀಕ್ಷಣಾ ಮಂಡಳಿಗೆ ನ್ಯಾಯಾಲಯವು ಆದೇಶ ನೀಡಿದೆ.
೧. ‘ಎಮರ್ಜೆನ್ಸಿ’ ಚಲನಚಿತ್ರ ಪ್ರದರ್ಶನಕ್ಕೆ ಪ್ರಮಾಣ ಪತ್ರ ನೀಡದಿದ್ದರಿಂದ ಸಂಸದೆ ಕಂಗನಾ ರಾಣಾವತ ಇವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಸಪ್ಟೆಂಬರ್ ೧೯ ರಂದು ನ್ಯಾಯಮೂರ್ತಿ ಬರ್ಗೀಸ್ ಕುಲಾಬಾವಾಲಾ ಮತ್ತು ನ್ಯಾಯಮೂರ್ತಿ ಫಿರದೋಶ ಪೂನಿವಾಲ ಇವರ ವಿಭಾಗೀಯ ಪೀಠದೆದುರು ವಿಚಾರಣೆ ನಡೆಯಿತು.
೨. ಈ ಸಮಯದಲ್ಲಿ ಚಲನಚಿತ್ರದಲ್ಲಿ ತೋರಿಸಲಾಗಿರುವ ಪ್ರತಿಯೊಂದು ವಿಷಯದ ಮೇಲೆ ಕುರುಡ ವಿಶ್ವಾಸ ಇಡುವಷ್ಟು ದೇಶದಲ್ಲಿನ ನಾಗರೀಕರು ಮೂರ್ಖರು ಅನಿಸುತ್ತಾರೆಯೇ ?’, ಸೃಜನಶೀಲತೆ, ಕಾಲ್ಪನಿಕ ಸ್ವಾತಂತ್ರ್ಯದ ಬಗ್ಗೆ ಏನು ?’, ಎಂದು ನ್ಯಾಯಾಲಯವು ಚಲನಚಿತ್ರ ಪರೀಕ್ಷಣಾ ಮಂಡಳಿಗೆ ಪ್ರಶ್ನಿಸಿದೆ.
೩. ಚಲನಚಿತ್ರ ಪರೀಕ್ಷಣಾ ಮಂಡಳಿಯ ನ್ಯಾಯವಾದಿ ಅಭಿನವ ಚಂದ್ರಚೂಡ ಇವರು, ”ಚಲನಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಪ್ರಚೋದನೆ ನೀಡುವ ಕೆಲವು ದೃಶ್ಯಗಳು ಮತ್ತು ಸಂವಾದ ಇದೆ. ಆದ್ದರಿಂದ ಸಮಾಜದಲ್ಲಿ ಗೊಂದಲ ಮತ್ತು ಅರಾಜಕತೆ ನಿರ್ಮಾಣವಾಗಬಹುದು. ಆದ್ದರಿಂದ ಚಲನಚಿತ್ರ ಪುನರ್ವಿಚಾರ ಸಮಿತಿಯ ಬಳಿ ಕಳುಹಿಸಲಾಗಿದೆ”, ಎಂದು ಹೇಳಿದರು.
೪. ಈ ಬಗ್ಗೆ ಚಲನಚಿತ್ರದ ಸಹ ನಿರ್ಮಾಪಕರು ‘ಝಿ ಎಂಟರ್ಟೈನ್ಮೆಂಟ್’ ನ ಪರವಾಗಿ ನ್ಯಾಯವಾದಿ ವೆಂಕಟೇಶ ಧೋಂಡ ಇವರು ಹರಿಯಾಣದಲ್ಲಿನ ವಿಧಾನ ಸಭೆಯ ಚುನಾವಣೆಯಿಂದ ಈ ಚಲನಚಿತ್ರ ಅಕ್ಟೋಬರ್ ಮೊದಲೇ ಪ್ರದರ್ಶನವಾಗದಂತೆ ನೋಡಲಾಗುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಚಲನಚಿತ್ರಕ್ಕೆ ಅನುಮತಿ ನಿರಾಕರಿಸುವುದು, ಇದು ಮಂಡಲದ ಕೆಲಸವಲ್ಲ. ರಾಜ್ಯ ಸರಕಾರ ಮತ್ತು ಪೊಲೀಸರದ್ದಾಗಿದೆ ಎಂದು ನ್ಯಾಯಾಲಯವು ಚಲನಚಿತ್ರ ಪರೀಕ್ಷಣಾ ಮಂಡಳಿಯ ಕಿವಿ ಹಿಂಡಿದೆ.
೫. ‘ಎಮರ್ಜೆನ್ಸಿ’ ಈ ಚಲನಚಿತ್ರ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಇವರು ದೇಶದಲ್ಲಿ ‘ತುರ್ತು ಪರಿಸ್ಥಿತಿ’ ಘೋಷಿಸಿದ ನಂತರದ ಘಟನೆಗಳ ಆಧಾರಿಸಿದೆ. ಶಿರೋಮಣಿ ಅಕಾಲಿ ದಳ ಸಹಿತ ಸಿಖ್ ಸಂಘಟನೆಗಳಿಂದ ಕೂಡ ಈ ಚಲನಚಿತ್ರದ ಮೇಲೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಸಿಖ್ ಜನಾಂಗದ ಆಕ್ಷೇಪ ಕುರಿತು ಗಮನ ಹರಿಸಲು ಆದೇಶ ನೀಡಿದೆ. ಈ ಕಾರಣಗಳಿಂದ ಚಲನಚಿತ್ರ ಪ್ರದರ್ಶನ ತಡವಾಗುತ್ತಿದೆ. ಚಲನಚಿತ್ರ ಸಪ್ಟೆಂಬರ್ ೬ ರಂದು ಪ್ರದರ್ಶನವಾಗಬೇಕಿತ್ತು.