ಮಕ್ಕಳ ತಟ್ಟೆಯಲ್ಲಿ ಬಡಿಸಿದ್ದ ಮೊಟ್ಟೆ ತೆಗೆಯುತ್ತಿದ್ದ ಇಬ್ಬರು ಅಂಗನವಾಡಿ ಸೇವಕಿಯರು ಅಮಾನತು !

ಅಂಗನವಾಡಿಯ ಮಕ್ಕಳುನ್ನು ಸಾಲಿನಲ್ಲಿ ಕೂಡಿಸಿ ತಟ್ಟೆಯಲ್ಲಿ ಮೊದಲು ಮೊಟ್ಟೆಗಳು ಬಡಿಸುತ್ತಾರೆ. ಬಳಿಕ ಮಕ್ಕಳಿಂದ ಪ್ರಾರ್ಥನೆ ಮಾಡಿಸಿ ನಂತರ ಮಕ್ಕಳು ತಟ್ಟೆಯಲ್ಲಿನ ಮೊಟ್ಟೆ ತಿನ್ನುವಷ್ಟರಲ್ಲಿ ಮೊಟ್ಟೆ ತೆಗೆಯುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ.

ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿದವರಿಗೆ ಸ್ಥಳಾಂತರಿಸಿ ಅಥವಾ ಬಾಡಿಗೆದಾರರನ್ನಾಗಿ ಮಾಡಿ ! – ಮದ್ರಾಸ್ ಉಚ್ಚ ನ್ಯಾಯಾಲಯ

ಧಾರ್ಮಿಕ ದತ್ತಿ ವಿಭಾಗದ ಆಯುಕ್ತರ ಸೂಚನೆಯ ಹೊರತಾಗಿಯೂ ಅತಿಕ್ರಮಣದಾರರು ಅಲ್ಲಿಂದ ತೆರವು ಮಾಡದಿರಲು ನಿರ್ಧರಿಸಿದರು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.

‘ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನಾ’ ಸ್ಥಗಿತಗೊಳಿಸುವ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ !

ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನೆಯು(ಮುಖ್ಯಮಂತ್ರಿ – ನನ್ನ ಅಕ್ಕರೆಯ ಸಹೋದರಿ ಯೋಜನೆ) ಸರಕಾರದ ಕಾರ್ಯತಂತ್ರದ ನಿರ್ಧಾರವಾಗಿದೆ. ಆದ್ದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಮುಂಬಯಿ ಉಚ್ಚ ನ್ಯಾಯಾಲಯ ಹೇಳಿದೆ.

‘ಲಿವ್-ಇನ್ ರಿಲೇಶನ್ ಶಿಪ್’ನಲ್ಲಿರುವವರಿಗೆ ರಕ್ಷಣೆ ನಿಡುವುದು; ತಪ್ಪನ್ನು ಪ್ರೋತ್ಸಾಹಿಸಿದಂತೆ ! – ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ವಿವಾಹೇತರ ಸಂಗಾತಿಯೊಂದಿಗೆ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸುವವರಿಗೆ ರಕ್ಷಣೆ ನೀಡುವುದು ತಪ್ಪುಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

5 ನಿಮಿಷದ ಅಜಾನ್ ನಿಂದ ತೊಂದರೆಯಾಗುತ್ತದೆ ಆದರೆ ಒಂದು ತಿಂಗಳು ಕಾವಡ ಯಾತ್ರೆಗಾಗಿ ರಸ್ತೆ ಬಂದ್ ಮಾಡಿದಾಗ ತೊಂದರೆಯಾಗುವುದಿಲ್ಲವೇ ? (ಅಂತೆ) – ಮೌಲಾನಾ ತೌಕೀರ ರಝಾ

ಕಾವಡ ಯಾತ್ರೆಯಿಂದ ಮಾರ್ಗ ಮುಚ್ಚಿರುವುದಿಲ್ಲ. ಅನೇಕ ಬಾರಿ ವಾಹನಗಳು ಡಿಕ್ಕಿ ಹೊಡೆದು ಕಾವಡ ಯಾತ್ರಿರಿಗೆ ಅಪಘಾತವಾಗಿರುವ ಘಟನೆಗಳು ನಡೆದಿವೆ. ಮೌಲಾನಾ ರಝಾ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ.

Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು

ಶೈಕ್ಷಣಿಕ ದಾಖಲಾತಿಯಲ್ಲಿ ಮತಾಂತರದ ವ್ಯಕ್ತಿಯ ಕೋರಿಕೆಯನ್ನು ಕಾನೂನು ನಿಬಂಧನೆಗಳ ಕೊರತೆಯ ಆಧಾರದ ಮೇಲೆ ತಿರಸ್ಕರಿಸಲಾಗುವುದಿಲ್ಲ.

Christopher Luxon : ಕಳೆದ 70 ವರ್ಷಗಳಲ್ಲಿ ನ್ಯೂಜಿಲೆಂಡ್‌ನಲ್ಲಿ 2 ಲಕ್ಷ ಮಕ್ಕಳು, ಯುವಕರು ಮತ್ತು ದುರ್ಬಲ ವಯಸ್ಕರರ ಮೇಲೆ ಅತ್ಯಾಚಾರ !

ನ್ಯೂಜಿಲೆಂಡನ ಇತಿಹಾಸದಲ್ಲಿ ಇದೊಂದು ಕರಾಳ ಮತ್ತು ದುಃಖದ ದಿನವಾಗಿದೆ ಎಂದು ಪ್ರಧಾನಿ ಲಕ್ಸನ್ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇನ್ನು ಮುಂದೆ ಮಾಂಸ ಮಾರುವ ಅಂಗಡಿಯ ಮುಂದೆ `ಹಲಾಲ್ ಅಥವಾ ಝಟಕಾ’ ಎಂದು ಬರೆಯಲೇ ಬೇಕು ! – ಜೈಪುರ ಮಹಾನಗರಪಾಲಿಕೆ

ನಗರದಲ್ಲಿ ಮಾಂಸ ಮಾರಾಟದ ಅಂಗಡಿ ತೆರೆಯುವ ಮುನ್ನ ಮಹಾನಗರಪಾಲಿಕೆಯಿಂದ ಪರವಾನಗಿ ಪಡೆಯಬೇಕಾಗಿದ್ದು, ಅಂತಹ ಅಂಗಡಿಕಾರರಿಗೆ ವಾಣಿಜ್ಯ ಸ್ಥಳದಲ್ಲಿಯೇ ಮಾಂಸದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು.

Muslim Marriage Law : ಅಸ್ಸಾಂನಲ್ಲಿ ಶೀಘ್ರದಲ್ಲೇ ಮುಸಲ್ಮಾನ ವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ! – ಮುಖ್ಯಮಂತ್ರಿ ಸರಮಾ

ಈ ರೀತಿ ಪ್ರತಿ ರಾಜ್ಯದಲ್ಲೂ ಧಾರ್ಮಿಕ ತಾರತಮ್ಯ ಮಾಡುವ ಬದಲು ಕೇಂದ್ರ ಸರ್ಕಾರವು ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಬೇಕು !

UK Leeds Riots : ಬ್ರಿಟನ್‌ನ ಲೀಡ್ಸ್ ನಗರದಲ್ಲಿ ವಲಸಿಗರಿಂದ ಭಾರೀ ಹಿಂಸಾಚಾರ !

ಮತಾಂಧರ ಹಿಂಸಾಚಾರದ ಬಗ್ಗೆ ಭಾರತಕ್ಕೆ ಸಲಹೆ ನೀಡುವ ಪಾಶ್ಚಿಮಾತ್ಯ ದೇಶಗಳು ಈಗ ತಾವೇ ಅದನ್ನು ಅನುಭವಿಸುತ್ತಿರುವುದರಿಂದ ಅವರಿಗೆ ಭಾರತದ ದುಃಖ ಗಮನಕ್ಕೆ ಬಂದಿರಬಹುದು ಎಂದು ಅಪೇಕ್ಷಿಸಬಹುದು.