ಚಂದೌಲಿ (ಉತ್ತರಪ್ರದೇಶ) – ಯಾವುದೇ ಸಂತರು, ಮಹಾತ್ಮರು ಮತ್ತು ಯೋಗಿ ಎಂದಿಗೂ ಯಾವುದೇ ಶಕ್ತಿಯ, ಅಧಿಕಾರದ ಗುಲಾಮರಾಗುವುದಿಲ್ಲ. ತದ್ವಿರುದ್ಧ ಅವರು ಸಮಾಜಕ್ಕೆ ಅವರ ಮಾರ್ಗದಲ್ಲಿ ನಡೆಯುವ ಪ್ರೇರಣೆ ನೀಡುತ್ತಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹೇಳಿಕೆ ನೀಡಿದರು. ಅವರು ಅಘೋರಾಚಾರ್ಯ ಬಾಬಾ ಕೀನಾರಾಮ ಇವರ ೪೨೫ ನೆಯ ಜಯಂತಿ ಉತ್ಸವದಲ್ಲಿ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು ಮುಂದುವರೆಸುತ್ತಾ, ಬಾಬ ಕೀನಾರಾಮ್ ಇವರು ಅವರ ಕರ್ತೃತ್ವದ ಉಪಯೋಗವನ್ನು ದೇಶ ಮತ್ತು ಜನರ ಕಲ್ಯಾಣಕ್ಕಾಗಿ ಮಾಡಿದರು. ಆ ಸಮಯದಲ್ಲಿ ಸಮಾಜದ ವಿಕೃತಿ ನೋಡಿ ಅವರು ಸಮಾಜಕ್ಕೆ ಜೋಡಿಸುವ ಕಾರ್ಯ ಮಾಡಿದರು. ಅವರು ಬುಡಕಟ್ಟು ಜನಾಂಗ, ದಲಿತರು, ಅರಣ್ಯ ವಾಸಿಗಳು ಇವರಲ್ಲಿ ಭೇದ ಭಾವವಿರಹಿತ ಸುಂದರ ಸಮಾಜದ ಸ್ಥಾಪನೆಯ ಜ್ಯೋತಿ ಬೆಳಗಿದರು. ಅಘೋರಾಚಾರ್ಯ, ಯೋಗಿ ಮತ್ತು ಸಂತರಿಂದಲೇ ಇದು ಸಾಧ್ಯವಾಗಿದೆ. ಉನ್ನತ ಕುಟುಂಬದಲ್ಲಿ ಜನಿಸಿದರು ಬಾಬಾ ಇವರು ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನಾಂಗ ಮತ್ತು ಇತರ ಜನರ ಜೀವನ ಸುಧಾರಿಸುವುದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿದರು. ಸಮಯ ಸಮಯದಲ್ಲಿ ಸರಕಾರಕ್ಕೆ ತಪರಾಕಿ ನೀಡುವ ಕೆಲಸ ಕೂಡ ಅವರು ಮಾಡಿದರು. ಚಂದೌಲಿ ಇಲ್ಲಿ ವೈದ್ಯಕೀಯ ಕಾಲೇಜ್ ಕಟ್ಟುವಾಗ ‘ಬಾಬಾ ಇವರ ಹೆಸರಿಗೆ ಏನಾದರೂ ಮಾಡಬೇಕೆಂದು’ ಸಂಸದರು ಮತ್ತು ಶಾಸಕರು ತಮ್ಮ ನಿಲುವನ್ನು ಮಂಡಿಸಿದ್ದರು, ಆಗ ವೈದ್ಯಕೀಯ ಕಾಲೇಜುಗಿಂತಲೂ ಒಳ್ಳೆಯದು ಏನು ಇರಲು ಸಾಧ್ಯ?’, ಎಂದು ನಾನು ಹೇಳಿದ್ದೆ. ಪೂಜ್ಯ ಬಾಬಾ ಇವರ ಹೆಸರಿನಿಂದ ಕಟ್ಟಲಾಗುವ ವೈದ್ಯಕೀಯ ಕಾಲೇಜು ಈಗ ಜನರಿಗೆ ಉತ್ತಮ ಆರೋಗ್ಯದ ಮಾಧ್ಯಮವಾಗಲಿದೆ, ಇದು ನಮ್ಮ ಸೌಭಾಗ್ಯವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇದರ ಅರ್ಥ ರಾಜಕಾರಣಿಗಳು ಅಧಿಕಾರದ ಗುಲಾಮರಾಗಿರುತ್ತಾರೆ ಮತ್ತು ಈ ಗುಲಾಮಗಿರಿ ಮಾಡುವುದಕ್ಕಾಗಿ ಅವರು ಜನರನ್ನು ತಮ್ಮ ಗುಲಾಮರನ್ನಾಗಿ ಮಾಡುತ್ತಾರೆ ! ಇಂತಹ ರಾಜಕಾರಣದಿಂದ ದೇಶವನ್ನು ಮುಕ್ತಗೊಳಿಸಲು ಧರ್ಮಾಚರಣೆಯ ಆಡಳಿತಗಾರರು ತರುವುದಕ್ಕಾಗಿ ಹಿಂದೂ ರಾಷ್ಟ್ರವೇ ಬೇಕು ! |