ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಏಕೆ ಇಲ್ಲ ? – ಪಂಜಾಬ್ ಹರಿಯಾಣ ಉಚ್ಚ ನ್ಯಾಯಾಲಯ

ಚಂದಿಗಡ – ಶಾಸಕರು, ಸಂಸದರು ಅಥವಾ ಸಚಿವರಾಗಲು ಕನಿಷ್ಠ ಅರ್ಹತೆ ಅನಿವಾರ್ಯ ಮಾಡದಿರುವುದರಿಂದ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಇವರು ವಿಷಾದ ವ್ಯಕ್ತಪಡಿಸಿದ್ದರು. ಸಂವಿಧಾನ ಸ್ವೀಕರಿಸಿ ೭೫ ವರ್ಷ ಕಳೆದಿದೆ, ಆದರೂ ಇಲ್ಲಿಯವರೆಗೆ ಅದನ್ನು ಯಾರು ಗಮನಹರಿಸಲಿಲ್ಲ. ಇಂದಿಗೂ ಕ್ಯಾಬಿನೆಟ್ ಸಚಿವರಾಗುವುದಕ್ಕಾಗಿ ಯಾವುದೇ ಶೈಕ್ಷಣಿಕ ಅರ್ಹತೆಯ ಆವಶ್ಯಕತೆ ಇಲ್ಲ. ನಮ್ಮ ದೇಶದಲ್ಲಿ ಯಾವ ವ್ಯಕ್ತಿ ಕೂಡ ಸಂಸದ ಅಥವಾ ಶಾಸಕ ಆಗಬಹುದು, ಎಂದು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ ಇದರ ಕುರಿತು ವಿಷಾದ ವ್ಯಕ್ತಪಡಿಸಿತು.

೧. ಭಾಜಪದ ನಾಯಕ ಮತ್ತು ಮಾಜಿ ವಿಧಾನಸಭೆಯ ಸದಸ್ಯ ರಾವ ನರಭೀರ ಸಿಂಹ ಇವರು ಅಭ್ಯರ್ಥಿ ಅರ್ಜಿಯಲ್ಲಿ ಅವರ ಶೈಕ್ಷಣಿಕ ಅರ್ಹತೆಯ ಕುರಿತು ತಪ್ಪಾದ ಮಾಹಿತಿ ನೀಡಿರುವ ಆರೋಪ ಮಾಡಲಾಗಿತ್ತು. ಅದರಿಂದ ಫೌಜದಾರಿ ದೂರು ತಿರಸ್ಕರಿಸುತ್ತಾ ನ್ಯಾಯಾಲಯ ಈ ಟಿಪ್ಪಣಿ ಮಾಡಿದೆ.

೨. ನ್ಯಾಯಮೂರ್ತಿ ಸಿಂಧು ಇವರು ಮಾತನಾಡಿ, ”೨೦೦೫ ಮತ್ತು ೨೦೧೪ ರಲ್ಲಿ ಅಭ್ಯರ್ಥಿಯ ಅರ್ಜಿ ತುಂಬಿಸುವಾಗ ಸಿಂಹ ಇವರ ಬಳಿ ಪದವಿ ಪ್ರಮಾಣ ಪತ್ರ ಇತ್ತು. ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಶಾಸಕ ಅಥವಾ ಸಂಸದ ಎಂದು ಚುನಾವಣೆಗೆ ಸ್ಪರ್ಧಿಸಲು ಯಾವುದೇ ಶೈಕ್ಷಣಿಕ ಅರ್ಹತೆಯ ಅವಶ್ಯಕತೆ ಇರಲಿಲ್ಲ, ಇದನ್ನು ಮತ್ತೊಮ್ಮೆ ಹೇಳುವ ಆವಶ್ಯಕತೆ ಇಲ್ಲ ಎಂದು ಹೇಳಿದರು.

ಏನಿದು ಪ್ರಕರಣ ?

ಹರಿಂದರ ಧಿಂಗ್ರಾ ಇವರು ೨೦೦೫ ರಲ್ಲಿ ಭಾಜಪದ ಅಂದಿನ ಶಾಸಕ ನರಬೀರ ಸಿಂಹ ಇವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸಿಂಹ ಇವರು ಚುನಾವಣೆಯ ಪ್ರತಿಜ್ಞಾಪತ್ರದಲ್ಲಿ ನಮೂದಿಸಿರುವ ಪದವಿ ವಿದ್ಯಾಪೀಠ ಅನುದಾನ ಆಯೋಗವು ಮಾನ್ಯತೆ ನೀಡಿರುವ ವಿದ್ಯಾಪೀಠದಿಂದ ನೀಡಲಾಗಿಲ್ಲ ಎಂದು ಆರೋಪಿಸಿದ್ದರು. ‘ಸಿಂಹ ಇವರ ಬಳಿ ಪದವಿ ಪ್ರಮಾಣ ಪತ್ರ ಇದೆ ಮತ್ತು ವಿದ್ಯಾಪೀಠ ಅನುದಾನ ಆಯೋಗದ ಮಾನ್ಯತೆ ಅವರ ನಿಯಂತ್ರಣದಲ್ಲಿ ಇಲ್ಲ’, ಎಂದು ನಿರೀಕ್ಷಣೆ ನಮೂದಿಸುತ್ತಾ ಪ್ರಾರ್ಥಮಿಕ ಹಂತದಲ್ಲಿ ಅರ್ಜಿ ತಿರಸ್ಕರಿಸಿತ್ತು. ಧಿಂಗ್ರಾ ಇವರು ಉಚ್ಚ ನ್ಯಾಯಾಲಯದಲ್ಲಿ ಮರು ವಿಚಾರಣೆಗಾಗಿ ಅರ್ಜಿ ದಾಖಲಿಸಿದ್ದರು. ನ್ಯಾಯಮೂರ್ತಿ ಮಹಾಬೀರ ಸಿಂಹ ಸಿಂಧು ಇವರು ಜಿಲ್ಲಾ ನ್ಯಾಯಾಲಯದ ತೀರ್ಪು ಯೋಗ್ಯ ಎಂದು ಹೇಳಿದರು.