ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಬಳಿ ದೇಶದಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತ ಹೆಚ್ಚು ಭೂಮಿ !

ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಓಡಿಸಾ ಮತ್ತು ಇತರ ೬ ರಾಜ್ಯಗಳಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತಲೂ ಹೆಚ್ಚು ಭೂಮಿ ಇದೆ, ಎಂದು ಓಡಿಸಾದ ಕಾನೂನುಸಚಿವ ಜಗನ್ನಾಥ ಸರಾಕಾ ಇವರು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವನ್ನು ನೀಡುವಾಗ ಮಾಹಿತಿ ನೀಡಿದರು.

ಕೇಂದ್ರ ಸರಕಾರ ನಗರಗಳಲ್ಲಿ ಮನೆಗಾಗಿಯ ಗೃಹ ಸಾಲಕ್ಕೆ ಅನುದಾನ ನೀಡುವ ಯೋಜನೆ ತರಲಿದೆ.

ಕೇಂದ್ರ ಸರಕಾರ ಶೀಘ್ರದಲ್ಲೇ ಗೃಹ ಸಾಲಗಳಿಗೆ ಅನುದಾನ ನೀಡುವ 60 ಸಾವಿರ ಕೋಟಿ ರೂಪಾಯಿಯ ಯೋಜನೆ ತರಲಿದೆ. 20 ವರ್ಷಗಳ ಅವಧಿಗೆ 50 ಲಕ್ಷ ರೂಪಾಯಿವರೆಗಿನ ಸಾಲ ಪಡೆಯುವ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಭಾರತದಲ್ಲಿನ ದಕ್ಷಿಣಕೊರಿಯಾದ ರಾಯಭಾರಿಯು ಹೊಸ ವಾಹನ ಖರೀದಿಸಿದ ನಂತರ ಹಿಂದೂ ಪದ್ಧತಿಯಂತೆ ಧಾರ್ಮಿಕ ಪೂಜೆ !

ಸನಾತನ ಧರ್ಮವನ್ನು ಕೊನೆಗಾಣಿಸುವ ಮಾತನಾಡುವವರಿಗೆ ಇದು ಕಪಾಳಮೋಕ್ಷ ! ಭಾರತದ ರಕ್ಷಣಾ ಸಚಿವ ರಾಜನಾಥಸಿಂಗ್ ಇವರು ರಫೇಲ್ ವಿಮಾನಕ್ಕೆ ಪೂಜೆ ಸಲ್ಲಿಸಿದ ನಂತರ ಟೀಕಿಸಿದವರು ಈಗ ಬಾಯಿ ಬಿಡುವರೇ ?

ಕಾನ್ಪುರದ ಸರಕಾರಿ ಕಚೇರಿಯಲ್ಲಿನ ಫೈಲ್ಸ್ ಗಳನ್ನು ಸ್ವಚ್ಛತಾ ಸಿಬ್ಬಂದಿಗಳು ರದ್ದಿಗೆ ಮಾರಿದರು !

ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೋಹನ್ ಮತ್ತು ರಮೇಶ ಈ ಸ್ವಚ್ಛತಾ ಸಿಬ್ಬಂದಿಗಳು ಕಳೆದ ೩ ತಿಂಗಳಿಂದ ಇಲಾಖೆಯ ದಾಖಲೆಯ ಫೈಲ್ಸ್ ಗಳನ್ನು ರದ್ದಿಯ ಅಂಗಡಿಗೆ ಹೋಗಿ ಮಾರಿ ಸಿಕ್ಕ ಹಣದಿಂದ ಮದ್ಯ ಸೇವಿಸುತ್ತಿದ್ದರು, ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಸರಕಾರಿ ಶಾಲೆಯಲ್ಲಿ ಶ್ರೀ ಗಣೇಶನ ಪೂಜೆ ಮಾಡಿದ ವಿದ್ಯಾರ್ಥಿನಿಯ ಕೈ ಮುರಿದ ಶಿಕ್ಷಕಿ !

ಕೆ.ಜಿ.ಎಫ್. ತಾಲೂಕಿನಲ್ಲಿನ ಅಲ್ಲಿಕಲ್ಲಿ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯು ತರಗತಿಯಲ್ಲಿ ಶ್ರೀ ಗಣೇಶನ ಪೂಜೆ ಮಾಡಿದ್ದರಿಂದ ಮುಖ್ಯ ಶಿಕ್ಷಕಿ ಹೇಮಲತಾ ಇವರು ವಿದ್ಯಾರ್ಥಿನಿಯ ಕೈಯನ್ನೇ ಮುರಿದು ಹಾಕಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ವಿಶ್ವ ವೈದ್ಯಕೀಯ ಮಹಾಸಂಘದಿಂದ ೧೦ ವರ್ಷಗಳ ಮಾನ್ಯತೆ !

ವಿಶ್ವ ವೈದ್ಯಕೀಯ ಶಿಕ್ಷಣ ಮಹಾಸಂಘವು ಭಾರತದ “ನ್ಯಾಶನಲ್ ಮೆಡಿಕಲ ಕಮಿಶನ್”ಗೆ ೧೦ ವರ್ಷಗಳ ಕಾಲ ಅನುಮೋದಿಸಿದೆ. ಇದರಲ್ಲಿ ಭಾರತದ ೭೦೬ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದ್ದಾರೆ.

ಕೆನಡಾದ ನಾಗರಿಕರಿಗಾಗಿ ವೀಸಾ ನಿಲ್ಲಿಸಿದ ಭಾರತ !

ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ನಂತರ ಕೆನಡಾ ಮತ್ತು ಭಾರತದಲ್ಲಿ ನಡುವೆ ನಡೆಯುತ್ತಿರುವ ವಿವಾದದಿಂದ ಈಗ ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ.

ಖಲಿಸ್ತಾನವನ್ನು ಬೆಂಬಲಿಸುವ ಗಾಯಕ ಶುಭನಿತ ಸಿಂಗ್ ಇವರ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ‘ಬೋಟ್’ ಸಂಸ್ಥೆಯು ಹಿಂಪಡೆದಿದೆ !

‘ಬೋಟ್’ ಕಂಪನಿಗೆ ಅಭಿನಂದನೆಗಳು ! ಈಗ ಖಲಿಸ್ತಾನಿಗಳ ಮೇಲೆ ದೇಶದಲ್ಲೆಡೆಯಿಂದ ಬಹುಷ್ಕರ ಆರಂಭವಾದನಂತರ ಇದು ಎಲ್ಲರ ಗಮನಕ್ಕೆ ಬರುವುದು !

ಪ್ರಧಾನಿ ಮೋದಿಯವರಿಂದ ದೇಶದ ಜನರಿಗೆ ಗಣೇಶೋತ್ಸವದ ಶುಭಾಶಯ !

‘ದೇಶದ ಸಮಸ್ತ ನಾಗರಿಕರಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳು.”ಗಣಪತಿ ಬಪ್ಪಾ ಮೋರಯಾ!”, ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿ ಪ್ರಧಾನಿ ಮೋದಿಯವರು ಗಣೇಶ ಭಕ್ತರಿಗೆ ಗಣೇಶೋತ್ಸವದ ಶುಭಾಷಯ ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, “ಈ ಮನಸ್ಥಿತಿಯಿಂದ ಹೊರ ಬರಬೇಕಾಗಿದೆ ! – ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ

ನನ್ನ ಅಭಿಪ್ರಾಯದಲ್ಲಿ ನಮಗೆ ‘ಹಿಂದಿನ ಕಾಲದ ಘಟನೆಗಳಿಂದ ನಿರ್ಮಾಣವಾಗಿರುವ ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, ಅವು ಅಭಿವೃದ್ದಿಶೀಲ ರಾಷ್ಟ್ರಗಳ ವಿರುದ್ಧವಾಗಿವೆ” ಎಂಬ ಮನಸ್ಥಿತಿಯಿಂದ ಹೊರಬರಬೇಕು ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್,ಜೈಶಂಕರ ಇವರು ಹೇಳಿದರು.