ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ವಿಶ್ವ ವೈದ್ಯಕೀಯ ಮಹಾಸಂಘದಿಂದ ೧೦ ವರ್ಷಗಳ ಮಾನ್ಯತೆ !

ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಈಗ ವಿದೇಶದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದು !

ನವ ದೆಹಲಿ – ವಿಶ್ವ ವೈದ್ಯಕೀಯ ಶಿಕ್ಷಣ ಮಹಾಸಂಘವು ಭಾರತದ “ನ್ಯಾಶನಲ್ ಮೆಡಿಕಲ ಕಮಿಶನ್”ಗೆ ೧೦ ವರ್ಷಗಳ ಕಾಲ ಅನುಮೋದಿಸಿದೆ. ಇದರಲ್ಲಿ ಭಾರತದ ೭೦೬ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದ್ದಾರೆ. ಇದರಿಂದಾಗಿ ಈಗ ಭಾರತೀಯ ವಿದ್ಯಾರ್ಥಿಗಳು ಮುಂದಿನ ೧೦ ವರ್ಷಗಳ ಕಾಲ ಅಮೇರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಂತಹ ದೇಶಗಳಿಗೆ ಹೋಗಿ ರೋಗಿಗಳ ಚಿಕಿತ್ಸೆ ಮಾಡಬಹುದು ಇಲ್ಲಿಯವರೆಗೆ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಭಾರತದಲ್ಲಿ ಮಾತ್ರ ವೈದ್ಯಕೀಯ ಚಿಕಿತ್ಸೆ ಮಾಡುತ್ತಿದ್ದರು.

ಭಾರತಿಯ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಶಿಕ್ಷಣ ಮತ್ತು ಯುನೈಟೆಡ್ ಸ್ಟೆಟಸ್ ವೈದ್ಯಕೀಯ ಲೈಸೆನ್ಸ್ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಬಹುದು. ಅದೇ ರೀತಿ ವಿದೇಶಿ ವಿದ್ಯಾರ್ಥಿಗಳೂ ಭಾರತಕ್ಕೆ ಬಂದು ಎಮ್.ಬಿ.ಇಎಸ್.ನ ಅಭ್ಯಾಸ ಮಾಡಬಹುದಾಗಿದೆ. ಇಲ್ಲಿಂದ ಶಿಕ್ಷಣ ಪಡೆದನಂತರ ವಿವಿಧ ದೇಶಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ.