ಕೇಂದ್ರ ಸರಕಾರ ನಗರಗಳಲ್ಲಿ ಮನೆಗಾಗಿಯ ಗೃಹ ಸಾಲಕ್ಕೆ ಅನುದಾನ ನೀಡುವ ಯೋಜನೆ ತರಲಿದೆ.

ನವದೆಹಲಿ – ಕೇಂದ್ರ ಸರಕಾರ ಶೀಘ್ರದಲ್ಲೇ ಗೃಹ ಸಾಲಗಳಿಗೆ ಅನುದಾನ ನೀಡುವ 60 ಸಾವಿರ ಕೋಟಿ ರೂಪಾಯಿಯ ಯೋಜನೆ ತರಲಿದೆ. 20 ವರ್ಷಗಳ ಅವಧಿಗೆ 50 ಲಕ್ಷ ರೂಪಾಯಿವರೆಗಿನ ಸಾಲ ಪಡೆಯುವ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಸರಕಾರದಿಂದ ನೀಡಲಾಗುವ ಅನುದಾನ ನೇರವಾಗಿ ಲಾಭಪಡೆಯುವ ಖಾತೆಗೆ ಸೇರುತ್ತದೆ. ಯೋಜನೆಯನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮುಂದೆ ಅನುಮೋದನೆಗಾಗಿ ಮಂಡಿಸಲಾಗುವುದು. ಹೊಸ ಯೋಜನೆಯಿಂದ ನಗರ ಪ್ರದೇಶದ ಸುಮಾರು 25 ಲಕ್ಷ ಜನರಿಗೆ ಪ್ರಯೋಜನವಾಗಲಿದೆ.