ಕಾನ್ಪುರದ ಸರಕಾರಿ ಕಚೇರಿಯಲ್ಲಿನ ಫೈಲ್ಸ್ ಗಳನ್ನು ಸ್ವಚ್ಛತಾ ಸಿಬ್ಬಂದಿಗಳು ರದ್ದಿಗೆ ಮಾರಿದರು !

ಸಕ್ಕ ಹಣದಿಂದ ಮದ್ಯ ಸೇವನೆ !

ಕಾನ್ಪುರ (ಉತ್ತರಪ್ರದೇಶ) – ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೋಹನ್ ಮತ್ತು ರಮೇಶ ಈ ಸ್ವಚ್ಛತಾ ಸಿಬ್ಬಂದಿಗಳು ಕಳೆದ ೩ ತಿಂಗಳಿಂದ ಇಲಾಖೆಯ ದಾಖಲೆಯ ಫೈಲ್ಸ್ ಗಳನ್ನು ರದ್ದಿಯ ಅಂಗಡಿಗೆ ಹೋಗಿ ಮಾರಿ ಸಿಕ್ಕ ಹಣದಿಂದ ಮದ್ಯ ಸೇವಿಸುತ್ತಿದ್ದರು, ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಅವರು ಕಳೆದ ೬ ವರ್ಷಗಳ ನೊಂದಣಿ ಇರವ ಕಡತ ಮಾರಾಟ ಮಾಡಿರುವುದು ಬಯಲಾಗಿದೆ. ಈ ಇಬ್ಬರ ವಿರುದ್ಧ ಇದೀಗ ಕ್ರಮ ಕೈಗೊಳ್ಳಲಾಗುವುದು.

ನೊಂದಣಿಯ ಫೈಲ್ಸ್ ಪರಿಶೀಲನೆ ನಡೆಯುತ್ತಿರುವಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವಾಗಿ ಇಬ್ಬರು ಸಿಬ್ಬಂದಿಗಳ ವಿಚಾರಣೆ ಮಾಡಿದನಂತರ ಅವರು ತಪ್ಪು ಒಪ್ಪಿಕೊಂಡರು. ಆ ನಂತರ ಯಾವ ಸ್ಥಳದಲ್ಲಿ ಆ ಕಡತವನ್ನು ಮಾರಿದರೋ ಅಲ್ಲಿ ಹೋಗಿ ಕೆಲವು ಕಡತವನ್ನು ಹಿಂಪಡೆಯಲಾಯಿತು; ಆದರೆ ಅವು ಇದೇ ವರ್ಷದ್ದಾಗಿದ್ದು ಹಿಂದಿನ ಕೆಲವು ವರ್ಷಗಳ ಕಡತ ಸಿಗಲಿಲ್ಲ.

ಸಂಪಾದಕೀಯ ನಿಲುವು

ಸ್ವಚ್ಛತಾ ಸಿಬ್ಬಂದಿಗಳು ಈ ರೀತಿ ಕೃತ್ಯಗಳನ್ನು ಮಾಡುತ್ತಿರುವಾಗ ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ನಿದ್ದೆ ಮಾಡಿದ್ದರೇ ?