ಕೆನಡಾದ ನಾಗರಿಕರಿಗಾಗಿ ವೀಸಾ ನಿಲ್ಲಿಸಿದ ಭಾರತ !

ಕೆನಡಾದ ಭಾರತ ವಿರೋಧಿ ನೀತಿಗಳಿಂದಾಗಿ ಭಾರತದ ಅಕ್ರಮಣಕಾರಿ ನಿಲುವು !

(ವೀಸಾ ಅಂದರೆ ವಿದೇಶಿ ನಾಗರಿಕರಿಗೆ ದೇಶದಲ್ಲಿ ಕೆಲವು ಕಾಲಾವಧಿಗಾಗಿ ವಾಸಿಸಲು ನೀಡುವ ಅನುಮತಿ)

ಓಟಾವಾ (ಕೆನಡಾ) – ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ನಂತರ ಕೆನಡಾ ಮತ್ತು ಭಾರತದಲ್ಲಿ ನಡುವೆ ನಡೆಯುತ್ತಿರುವ ವಿವಾದದಿಂದ ಈಗ ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ. ‘ಮುಂದಿನ ಸೂಚನೆ ಸಿಗುವವರೆಗೆ ಈ ಸೇವೆ ಸ್ಥಗಿತಗೊಳಿಸಲಾಗಿದೆ’, ಎಂದು ಕೆನಡಾದಲ್ಲಿನ ವೀಸಾ ಕೇಂದ್ರದ ವೆಬ್ ಸೈಟ್ ನಲ್ಲಿ ನಮೂದಿಸಲಾಗಿದೆ. ಇದರಿಂದ ಕೆನಡಾದಿಂದ ಭಾರತಕ್ಕೆ ಬರುವ ಭಾರತೀಯ ಮತ್ತು ಕೆನಡಾದ ನಾಗರಿಕರಿಗೆ ಭಾರತಕ್ಕೆ ಬರಲು ಸಾಧ್ಯವಿಲ್ಲ.

‘ನಮ್ಮ ದೇಶ ಸಂಪೂರ್ಣವಾಗಿ ಸುರಕ್ಷಿತವಂತೆ !’ – ಕೆನಡಾದ ಸಚಿವ ಲೇಬನೆಕ್

ಈ ಹಿಂದೆ ಕೆನಡಾವು ತನ್ನ ನಾಗರಿಕರಿಗೆ ಜಮ್ಮು-ಕಾಶ್ಮೀರ್, ಅಸ್ಸಾಂ, ಮಣಿಪುರ ಮುಂತಾದ ಪ್ರದೇಶಗಳಿಗೆ ಹೋಗದಂತೆ ಸಲಹೆ ನೀಡಿತ್ತು. ಇದರ ಬಗ್ಗೆ ಭಾರತ ಕೂಡ ಇಂತಹ ಸಲಹೆ ಪ್ರಸಾರಗೊಳಿಸಿ ಕೆನಡಾದಲ್ಲಿನ ಭಾರತೀಯರಿಗೆ ಜಾಗರೂಕವಾಗಿರಲು ಹೇಳಿದೆ. ಇದರ ನಂತರ ಕೆನಡಾದಿಂದ ತಡರಾತ್ರಿ ಭಾರತದ ಸಲಹೆ ತಿರಸ್ಕರಿಸಿತು. ಕೆನಡಾದ ಸಾರ್ವಜನಿಕ ಸುರಕ್ಷಾ ಸಚಿವ ಡ್ಯಾಮಿನಿಕ ಲೆಬ್ಲಿನ್ ಇವರು ಪ್ರಸಾರ ಮಾಧ್ಯಮಗಳಿಗೆ, ಅವರ ದೇಶ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದರು. (ಕೆನಡಾ ಸುರಕ್ಷಿತವಾಗಿದ್ದರೆ, ಭಾರತದ ರಾಯಭಾರಿ ಕಚೇರಿಯ ಮೇಲೆ ಮತ್ತು ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ನಡೆಯುತ್ತಿರಲಿಲ್ಲ. ಹಾಗೂ ಈಗ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಿಂದ ಹಿಂದುಗಳಿಗೆ ಕೆನಡಾದಿಂದ ಹೊರ ಹೋಗಲು ಬೆದರಿಕೆ ನೀಡುತ್ತಿರಲಿಲ್ಲ ! – ಸಂಪಾದಕರು)

ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಬೆದರಿಕೆಯ ಬಗ್ಗೆ ಹಿಂದೂ ಸಂಘಟನೆಗಳಿಂದ ಟ್ರುಡೋ ಸರಕಾರಕ್ಕೆ ಪತ್ರ !

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನು ಕೆನಡಾದಲ್ಲಿನ ಹಿಂದೂಗಳಿಗೆ ದೇಶ ತೊರೆಯುವಂತೆ ಬೆದರಿಕೆ ನೀಡಿದ್ದನು. ಇದರಿಂದ ಕೆನಡಾದಲ್ಲಿನ ‘ಹಿಂದೂ ಫೋರಂ ಕೆನಡಾ’ ಈ ಹಿಂದೂ ಸಂಘಟನೆಯಿಂದ ಜಸ್ಟಿನ್ ಟ್ರುಡೋ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಸಾರ್ವಜನಿಕ ಸುರಕ್ಷಾ ಸಚಿವ ಡ್ಯಾಮಿನಿಕ್ ಲೈಬ್ನೆನ್ ಇವರಿಗೆ ಬರೆದಿರುವ ಪತ್ರದಲ್ಲಿ, ಪನ್ನು ಇವನು ತನ್ನ ಮತ್ತು ಅವನ ಖಲಿಸ್ತಾನಿ ಸಹಚರರ ಅಭಿಪ್ರಾಯ ಸ್ಪಷ್ಟಪಡಿಸಿದ್ದಾನೆ. ಅವರಿಗೆ ಅವರ ವಿಚಾರಧಾರೆಗೆ ಒಪ್ಪಿಗೆ ಇಲ್ಲದಿರುವ ಜನರನ್ನು ಗುರಿ ಮಾಡುವುದಿದೆ. ಕೆನಡಾದ ಸರಕಾರವು ಇದನ್ನು ಗಂಭೀರವಾಗಿ ಯೋಚಿಸಬೇಕು. ಪನ್ನು ಇವನ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸ್ವೀಕರಿಸಲಾಗುವುದಿಲ್ಲ ?, ಈ ರೀತಿ ಪತ್ರದ ಮೂಲಕ ಪ್ರಶ್ನಿಸಲಾಗಿದೆ.