ಪ್ರಧಾನಿ ಮೋದಿಯವರಿಂದ ದೇಶದ ಜನರಿಗೆ ಗಣೇಶೋತ್ಸವದ ಶುಭಾಶಯ !

ನವ ದೆಹಲಿ – ‘ದೇಶದ ಸಮಸ್ತ ನಾಗರಿಕರಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳು.”ಗಣಪತಿ ಬಪ್ಪಾ ಮೋರಯಾ!”, ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿ ಪ್ರಧಾನಿ ಮೋದಿಯವರು ಗಣೇಶ ಭಕ್ತರಿಗೆ ಗಣೇಶೋತ್ಸವದ ಶುಭಾಷಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಟ್ವೀಟ್ ಜೊತೆಗೆ ಪುಣೆಯ ಶ್ರೀಮಂತ ದಗಡೂಶೇಠ ಗಣಪತಿ ದೇವಸ್ಥಾನದ ಅವರ ಹಳೆಯ ಚಿತ್ರವನ್ನು ಪೋಸ್ಟ ಮಾಡಿದ್ದಾರೆ. ಮರಾಠಿ ಜೊತೆಗೆ ಪ್ರಧಾನಿ ಮೋದಿಯವರು ಮತ್ತೊಂದನ್ನು ಟ್ವೀಟ್ ಮಾಡಿ ದೇಶದ ಎಲ್ಲಾ ನಾಗರೀಕರಿಗೆ ಹಿಂದಿಯಲ್ಲಿ ಶುಭಾಶಯ ಕೋರಿದ್ದಾರೆ.

ಅವರು, ದೇಶಾದ್ಯಂತ ನನ್ನ ಕುಟಂಬಕ್ಕೆ ಗಣೇಶೋತ್ಸವದ ಶುಭಾಶಯಗಳು. ವಿಘ್ನಹರ್ತ ವಿನಾಯಕನ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸೌಭಾಗ್ಯ, ಯಶಸ್ಸು ಮತ್ತು ಸಂಪತ್ತನ್ನು ಕೊಡಲಿ. ಗಣಪತಿ ಬಪ್ಪ ಮೋರಯಾ! ಎಂದು ಬರೆದಿದ್ದಾರೆ.