ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಬಳಿ ದೇಶದಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತ ಹೆಚ್ಚು ಭೂಮಿ !

ಭುವನೇಶ್ವರ (ಓಡಿಸಾ) – ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಓಡಿಸಾ ಮತ್ತು ಇತರ ೬ ರಾಜ್ಯಗಳಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತಲೂ ಹೆಚ್ಚು ಭೂಮಿ ಇದೆ, ಎಂದು ಓಡಿಸಾದ ಕಾನೂನುಸಚಿವ ಜಗನ್ನಾಥ ಸರಾಕಾ ಇವರು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವನ್ನು ನೀಡುವಾಗ ಮಾಹಿತಿ ನೀಡಿದರು. ಇವುಗಳಲ್ಲಿ ಓಡಿಸಾದ ೩೦ ರಲ್ಲಿ ೨೪ ಜಿಲ್ಲೆಗಳಲ್ಲಿ ೬೦ ಸಾವಿರ ೪೨೬ ಎಕರ ಭೂಮಿಯಿದೆ ಮತ್ತು ಇತರ ೬ ರಾಜ್ಯಗಳಲ್ಲಿ ೩೯೫ ಎಕರೆ ಭೂಮಿ ಇದೆ. ಜಗನ್ನಾಥ ದೇವಸ್ಥಾನದ ಆಡಳಿತದ ಕಡೆಗೆ ರಾಜ್ಯದಲ್ಲಿನ ಭೂಮಿಯ ದಾಖಲಾತಿಯಿದೆ. ಈ ಭೂಮಿಯ ಒತ್ತುವರಿ ತೆರವಿಗೆ ೯೭೪ ದೂರುಗಳು ದಾಖಲಾಗಿವೆ.