ಖಲಿಸ್ತಾನವನ್ನು ಬೆಂಬಲಿಸುವ ಗಾಯಕ ಶುಭನಿತ ಸಿಂಗ್ ಇವರ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ‘ಬೋಟ್’ ಸಂಸ್ಥೆಯು ಹಿಂಪಡೆದಿದೆ !

ನವದೆಹಲಿ – ಕೆನಡಾದ ಪಂಜಾಬಿ ಗಾಯಕ ಶುಭನೀತ ಸಿಂಗ್ ಅವರು ಖಲಿಸ್ತಾನವನ್ನು ಬೆಂಬಲಿಸಿದ ಪೋಸ್ಟ ಅನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಸಾರ ಮಾಡಿದ ನಂತರ ಎಲ್ಲಾಕಡೆಯಿಂದ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಈ ಪೋಸ್ಟ್ ನಲ್ಲಿ ಅವನು ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ಅನ್ನು ಹೊರತುಪಡಿಸಿ ಭಾರತದ ನಕ್ಷೆಯನ್ನು ತೋರಿಸಿದ್ದಾರೆ. ಪ್ರಸಿದ್ದ ಕಂಪನಿ ‘ಬೂಟ್’ ಭಾರತದಲ್ಲಿ ಮುಂಬರುವ ಕಾರ್ಯಕ್ರಮಕ್ಕಾಗಿ ಕೊಟ್ಟಿರುವ ಪ್ರಾಯೋಜಕತ್ವವನ್ನು (ಸ್ಪಾಂಸರ್ಷಿಪ್) ಹಿಂಪಡೆದಿದೆ.’ಬೋಟ್’ ಟ್ವೀಟ್ ಮಾಡುತ್ತಾ, ಏನೇ ಆಗಲಿ ನಾವು ಮೊದಲು ಭಾರತೀಯ ಕಂಪನಿ ಆಗಿದ್ದೇವೆ ಮತ್ತು ಭಾರತದ ವಿರುದ್ಧ ನಾವು ಏನನ್ನು ಬೆಂಬಲಿಸುವುದಿಲ್ಲ’, ಎಂದು ಹೇಳಿದೆ. ಮತ್ತೊಂದಡೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯವರು ಈ ಘಟನೆಯ ನಂತರ ಇನ್ಸ್ಟಾಗ್ರಾಮ್ ನಲ್ಲಿ ಶುಭನಿತ ಸಿಂಗ್ ಅವರನ್ನು ‘ಅನ್ ಫಾಲೋ’ ಮಾಡಿದ್ದಾರೆ. (ಬೆಂಬಲದ ಪಟ್ಟಿಯಿಂದ ಹೊರಗೆ ಬರುವುದು)

ಸಂಪಾದಕೀಯ ನಿಲುವು

‘ಬೋಟ್’ ಕಂಪನಿಗೆ ಅಭಿನಂದನೆಗಳು ! ಈಗ ಖಲಿಸ್ತಾನಿಗಳ ಮೇಲೆ ದೇಶದಲ್ಲೆಡೆಯಿಂದ ಬಹುಷ್ಕರ ಆರಂಭವಾದನಂತರ ಇದು ಎಲ್ಲರ ಗಮನಕ್ಕೆ ಬರುವುದು !