ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕರ್ನಾಟಕ ಮುಖ್ಯಮಂತ್ರಿಯಿಂದ ಆದೇಶ !

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಲೇಖಕ ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಆದೇಶಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕಾಗಿ ಹಂಪಿಯ ಪುರಾತನ ವಿರೂಪಾಕ್ಷ ದೇವಾಲಯದ ಕಂಬಗಳಿಗೆ ಮೊಳೆ !

ಇಲ್ಲಿನ ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವಸ್ಥಾನದ ಕಂಬವೊಂದಕ್ಕೆ ಮೊಳೆ ಹೊಡೆಯಲಾಗಿತ್ತು.

ದೇವರ ಮೇಲೆ ನನ್ನ ವಿಶ್ವಾಸವಿದೆ; ಆದರೆ ಮೂಢನಂಬಿಕೆಯ ಮೇಲೆ ಅಲ್ಲ ! – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜಕ್ಕಾಗಿ ಒಳ್ಳೆಯದು ಇದ್ದರೆ ಶ್ರದ್ಧೆ ಇಡೋಣ, ಕೆಟ್ಟದ್ದಾಗಿದ್ದರೆ ವಿಶ್ವಾಸ ಇಡುವುದು ಬೇಡ ಎಂದು ಹೇಳಿದರು.

Vijayadashmi : ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ರಾಜ್ಯ ಸರಕಾರದಿಂದ ಹೊಸ ಆದೇಶ

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಸರಕಾರ ಆದೇಶ ಹೊರಡಿಸಿದೆ.

‘ಅವಧಿ ಪೂರ್ಣಗೊಳ್ಳುವ ಮೊದಲು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂಪಾಯಿಗಳವರೆಗೆ ಅನುದಾನ ನೀಡಲಾಗುವುದು !'(ಅಂತೆ) – ಮುಖ್ಯಮಂತ್ರಿ ಸಿದ್ದರಾಮಯ್ಯ

ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಅನುದಾನವನ್ನು 400 ಕೋಟಿಯಿಂದ 3 ಸಾವಿರ ಕೋಟಿಗೆ ಹೆಚ್ಚಿಸಿದ್ದೇನೆ. ಮುಂದಿನ ವರ್ಷವೂ ಅನುದಾನ ಹೆಚ್ಚಿಸುತ್ತೇನೆ. ನನ್ನ ಅಧಿಕಾರಾವಧಿ ಮುಗಿಯುವವರೆಗೆ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ತಿಲಕ ಹಚ್ಚಿಕೊಳ್ಳಲು ನಕಾರ !

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ಹಣೆಯ ಮೇಲೆ ತಿಲಕ ಹಚ್ಚಿಕೊಳ್ಳಲು ನಿರಾಕರಿಸಿರುವ ಒಂದು ವಿಡಿಯೋವನ್ನು ಭಾಜಪದ ವಕ್ತಾರ ಶಹಜಾದ್ ಪೂನಾವಾಲಾ ಇವರು ಟ್ವಿಟ್ ಮಾಡಿದ್ದಾರೆ.

‘ದೇಶದಲ್ಲಿ ‘ಮನುಸ್ಮೃತಿ’ ಯನ್ನು ಜಾರಿಗೆ ತಂದರೆ ಶೇ.90 ರಷ್ಟು ಜನರು ಗುಲಾಮರಾಗುವರು ! – ಮುಖ್ಯಮಂತ್ರಿ ಸಿದ್ದರಾಮಯ್ಯ

‘ಮನುಸ್ಮೃತಿ’ಯನ್ನು ಜಾರಿಗೆ ತಂದರೆ ದೇಶದಲ್ಲಿನ ಶೇ.95 ರಷ್ಟು ಜನರು ಗುಲಾಮರಾಗಿ ಬದುಕುವರು. ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿಗೆ ಕರೆ ನೀಡಿದರು.

ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನನ್ನು ರದ್ದುಪಡಿಸಬಾರದು !

ಹಿಂದಿನ ಭಾಜಪ ಆಡಳಿತ ಸರಕಾರವು ರಾಜ್ಯದಲ್ಲಿ ಮತಾಂತರ ನಿಷೇಧ ಹಾಗೆಯೇ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಿತ್ತು. ಅದನ್ನು ಸದ್ಯದ ಕಾಂಗ್ರೆಸ್ ಸರಕಾರವು ರದ್ದುಗೊಳಿಸಬಾರದು ಹಾಗೆಯೇ ಅದರ ತೀವ್ರತೆನ್ನೂ ಕಡಿಮೆ ಮಾಡಬಾರದು ಎಂಬ ಮನವಿಯನ್ನು ಇಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಮಾಡಲಾಯಿತು.

ಹಿಂದೂದ್ವೇಷದ ಪುನರಾವರ್ತನೆ !

ಸಿದ್ಧರಾಮಯ್ಯನವರು ಈ ಮೊದಲೂ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಮತಾಂಧರಿಂದ ಅನೇಕ ಹಿಂದೂಗಳ ಮತ್ತು ಹಿಂದುತ್ವನಿಷ್ಠರ ಕೊಲೆಯಾಗಿತ್ತು.

‘ಪೊಲೀಸ್ ಇಲಾಖೆಯನ್ನು ಕೇಸರಿಕರಣಗೊಳಿಸಲು ಬಿಡುವುದಿಲ್ಲ(ಅಂತೆ) !’ – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಪೊಲೀಸ್ ಪಡೆ ಕೇಸರಿಕರಣವಾಗುವುದಿಲ್ಲ; ಆದರೆ ಅದು ಹಸಿರುಕರಣವಾಗುವುದು ಖಚಿತ !