ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ತಿಲಕ ಹಚ್ಚಿಕೊಳ್ಳಲು ನಕಾರ !

ಮಮತಾ ಬ್ಯಾನರ್ಜಿ ನಂತರ ‘ಇಂಡಿಯಾ’ ಮೈತ್ರಿಕೂಟದ ನಾಯಕರ ಹಿಂದುದ್ವೇಷ ಮುಂದುವರಿಕೆ !

ಬೆಂಗಳೂರು – ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ಹಣೆಯ ಮೇಲೆ ತಿಲಕ ಹಚ್ಚಿಕೊಳ್ಳಲು ನಿರಾಕರಿಸಿರುವ ಒಂದು ವಿಡಿಯೋವನ್ನು ಭಾಜಪದ ವಕ್ತಾರ ಶಹಜಾದ್ ಪೂನಾವಾಲಾ ಇವರು ಟ್ವಿಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಮುಂಬಯಿಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಬಂಗಾಲದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಇವರು ಸಹ ಸ್ವಾಗತದ ಸಮಯದಲ್ಲಿ ತಿಲಕ ಹಚ್ಚಿಕೊಳ್ಳಲು ನಿರಾಕರಿಸಿದ್ದರು.

(ಸೌಜನ್ಯ – News18 Kannada)

೧. ಭಾಗ್ಯನಗರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಕಾರ್ಯಕಾರಿ ಸಮಿತಿಯ ಸಭೆಗೆ ಇಲ್ಲಿನ ಒಂದು ಸಭಾಂಗಣದಲ್ಲಿ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರನ್ನು ಪ್ರವೇಶದ್ವಾರದಲ್ಲಿ ಸ್ವಾಗತಿಸಿದಾಗ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಆರತಿಯ ತಟ್ಟೆಯನ್ನು ಹಿಡಿದು ನಿಂತ ಓರ್ವ ಮಹಿಳೆಯು ಸಿದ್ಧರಾಮಯ್ಯ ಇವರಿಗೆ ತಿಲಕ ಹಚ್ಚಲು ಪ್ರಯತ್ನಿಸಿದಳು. ಆ ಸಮಯದಲ್ಲಿ ಅವರು ಕೈ ತೋರಿಸಿ ತಿಲಕ ಹಚ್ಚಿಕೊಳ್ಳಲು ಹಾಗೆಯೇ ಆರತಿಯನ್ನು ಬೆಳಗಿಸಿಕೊಳ್ಳಲೂ ನಿರಾಕರಿಸಿದರು. ಆ ಸಮಯದಲ್ಲಿ ಅವರ ಜೊತೆಗೆ ಕಾಂಗ್ರೆಸ್‌ನ ನಾಯಕ ದಿಗ್ವಿಜಯ ಸಿಂಹ ಇವರೂ ಉಪಸ್ಥಿತರಿದ್ದರು.

೨. ಈ ಕುರಿತು ಭಾಜಪದ ವಕ್ತಾರ ಶಹಜಾದ್ ಪೂನಾವಾಲಾ ಇವರು, ಮಮತಾ ಬ್ಯಾನರ್ಜಿಯ ನಂತರ ಈಗ ಸಿದ್ಧರಾಮಯ್ಯ ಇವರು ತಿಲಕ ಹಚ್ಚಿಕೊಳ್ಳಲು ನಿರಾಕರಿಸಿದ್ದಾರೆ. ದುಂಡನೇ ಟೊಪ್ಪಿಗೆಯನ್ನು ಧರಿಸುವುದು ಯೋಗ್ಯ ಆದರೆ ತಿಲಕ ಹಚ್ಚಿಕೊಳ್ಳುವುದು ಯೋಗ್ಯವಲ್ಲ ? ಎಂದು ಹೇಳಿದರು. ಈ ಮೈತ್ರಿಕೂಟವು ಮುಂಬಯಿಯ ಸಭೆಯಲ್ಲಿಯೇ ಹಿಂದು ಮತ್ತು ಸನಾತನ ಧರ್ಮವನ್ನು ಗುರಿಯಾಗಿಸುವ ನಿರ್ಣಯ ತೆಗೆದುಕೊಂಡಿತ್ತು. ದ್ರಮುಕನ ಉದಯನಿಧಿ ಸ್ಟ್ಯಲಿನ್, ಎ. ರಾಜಾ ಇವರ ವರೆಗೆ ಮತ್ತು ರಾಷ್ಟ್ರೀಯ ಜನತಾ ದಳದಿಂದ ಸಮಾಜವಾದಿ ಪಕ್ಷಗಳವರೆಗೆ ‘ಹಿಂದೂಗಳ ಶ್ರದ್ಧೆಗಳ ಮೇಲೆ ದಾಳಿ ಮಾಡಿ, ಮತಗಳನ್ನು ಗೆಲ್ಲುವುದು’ ಇದೇ ರೀತಿಯ ನೀತಿಯನ್ನು ಆಯೋಜಿಸಲಾಗಿದೆ.