‘ದೇಶದಲ್ಲಿ ‘ಮನುಸ್ಮೃತಿ’ ಯನ್ನು ಜಾರಿಗೆ ತಂದರೆ ಶೇ.90 ರಷ್ಟು ಜನರು ಗುಲಾಮರಾಗುವರು ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು – ‘ಮನುಸ್ಮೃತಿ’ಯನ್ನು ಜಾರಿಗೆ ತಂದರೆ ದೇಶದಲ್ಲಿನ ಶೇ.95 ರಷ್ಟು ಜನರು ಗುಲಾಮರಾಗಿ ಬದುಕುವರು. ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿಗೆ ಕರೆ ನೀಡಿದರು. ಅವರು ಸಪ್ಟೆಂಬರ ೧೫ ರಂದು ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ’ ನಿಮಿತ್ತ ಸಂವಿಧಾನದ ಪ್ರಸ್ತಾವನೆಯ ಸಾಮೂಹಿಕ ವಾಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕರ್ನಾಟಕ ಸರಕಾರವು ಎಲ್ಲಾ ಶಾಲೆಗಳಲ್ಲಿ ಪ್ರಸ್ತಾವನೆಯನ್ನು ಓದಲು ಅನಿವಾರ್ಯಗೊಳಿಸಿದೆ.

ಸಿದ್ಧರಾಮಯ್ಯಾ ಇವರು ವಿದ್ಯಾರ್ಥಿಗಳಿಗೆ, ವಿರೋಧಿ ಶಕ್ತಿಗಳು ಅದರ ತತ್ವಗಳನ್ನು ನಷ್ಟಗೊಳಿಸುವ ಯಾವುದೇ ಪ್ರಯತ್ನವನ್ನು ಯಶಸ್ವಿಯಾಗಿಸಲು ಕೊಡಬೇಡಿ. ಪ್ರಜಾಪ್ರಭುತ್ವ ಉಳಿದರೆ, ನಾವು ಉಳಿಯುವೆವು. ಸಂವಿಧಾನ ಉಳಿದರೆ, ಪ್ರಜಾಪ್ರಭುತ್ವ ಉಳಿಯುವದು. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಇವುಗಳನ್ನು ರಕ್ಷಿಸುವದು ಇದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸಂವಿಧಾನದ ಎಲ್ಲಕ್ಕಿಂತ ದೊಡ್ಡ ಗುರಿ ಇನ್ನೂವರೆಗೆ ಸಾಧ್ಯವಾಗಿರುವುದಿಲ್ಲ. ಎಲ್ಲಿಯ ತನಕ ನಾವು ಸಂವಿಧಾನದ ತತ್ವಗಳನ್ನು ತಿಳಿದುಕೊಳ್ಳಲು ಮತ್ತು ಅದರಂತೆ ಬದುಕುವುದರಲ್ಲಿ ಯಶಸ್ಸು ಹೊಂದುವುದಿಲ್ಲ, ಅಲ್ಲಿಯವರೆಗೆ ಈ ದೇಶದಲ್ಲಿ ಸಮಾನತೆಯನ್ನು ಆಧರಿಸಿದ ಸಮಾಜವನ್ನು ಅಭಿವೃದ್ಧಿ ಪಡಿಸುವುದು ತುಂಬಾ ಕಠಿಣವಾಗಬಹುದು.