ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಇವರಿಗೆ ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಮೇ ೨೦ ರಂದು ಅವರ ಪ್ರಮಾಣವಚನದ ಸಮಾರಂಭವು ನೆರವೇರಿದೆ. ಮೊದಲ ಎರಡೂವರೆ ವರ್ಷ ಸಿದ್ಧರಾಮಯ್ಯ ಮತ್ತು ಮುಂದಿನ ಎರಡೂವರೆ ವರ್ಷ ಡಿ.ಕೆ. ಶಿವಕುಮಾರ ಇವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವರು. ರಾಜ್ಯದ ಜನತೆಯು ಭಾಜಪವನ್ನು ಸೋಲಿಸಿ ಕಾಂಗ್ರೆಸ್‌ಅನ್ನು ತಲೆಯ ಮೇಲೆ ಹೊತ್ತುಕೊಂಡಿದೆ. ಸಿದ್ಧರಾಮಯ್ಯನವರ ಹಿಂದೂದ್ವೇಷಿ ಹಿನ್ನೆಲೆ ಎಲ್ಲರಿಗೂ ಗೊತ್ತೇ ಇದೆ. ಆದುದರಿಂದ ಕಾಂಗ್ರೆಸ್‌ನ ವೈಭವ ಹಿಂದೂಗಳಿಗೆ ತಲೆ ನೋವಾಗಬಹುದು, ಇದು ನಿಶ್ಚಿತ ! ಸಿದ್ಧರಾಮಯ್ಯನವರ ಕರ್ನಾಟಕದಲ್ಲಿನ ಆಡಳಿತದ ಮೊದಲ ಎರಡೂವರೆ ವರ್ಷಗಳು ಹೇಗಿರಬಹುದು ?’, ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಬೇಗನೆ ಅದರ ಉತ್ತರವೂ ಸಿಗಲಿದೆ. ನಾಮಪತ್ರ ಸಲ್ಲಿಕೆಯ ಮೊದಲು ಸಿದ್ಧರಾಮಯ್ಯನವರು ಶ್ರೀರಾಮ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ಇದೇ ಮಹಾಶಯರು ‘ದೇವರ ಮೇಲಿನ ವಿಶ್ವಾಸವೆಂದರೆ ಮೂರ್ಖತನ’, ಎಂದಿದ್ದರು. ಒಂದು ಕಡೆಗೆ ಹಿಂದುತ್ವವನ್ನು ವಿರೋಧಿಸುವುದು ಮತ್ತು ಇನ್ನೊಂದೆಡೆ ಸ್ವತಃ ರಾಮ ಮಂದಿರಕ್ಕೆ ಹೋಗುವುದು’ ಇದು ಇಬ್ಬಗೆ ನೀತಿಯಲ್ಲವೇ ? ಅವರ ಈ ಮೋಸಗಾರಿಕೆ ಹಿಂದೂಗಳಿಗೆ ಸ್ಪಷ್ಟವಾಗಿ ಗೊತ್ತಿದೆ. ಅಧಿಕಾರಸುಖದ ದುರಾಸೆಯವರಿಗೆ ಇಂತಹ ಸಮಯದಲ್ಲಿ ಶ್ರೀರಾಮನೇ ರಕ್ಷಿಸುವನು ಎಂದೆನಿಸುತ್ತದೆ. ‘ರಾಮ ಮಂದಿರವನ್ನು ಮಾಧ್ಯಮವನ್ನಾಗಿಸಿ ರಾಜಕೀಯ ಲಾಭ ವನ್ನು ಪಡೆಯುವವರನ್ನು ನಾನು ವಿರೋಧಿಸುತ್ತೇನೆ. ಭಾಜಪ ರಾಜಕೀಯ ಲಾಭಕ್ಕಾಗಿ ರಾಮಮಂದಿರದ ಲಾಭ ಪಡೆಯುತ್ತಿದೆ’, ಎಂದು ಸಿದ್ಧರಾಮಯ್ಯನವರು ಹೇಳಿದ್ದರು. ವಾಸ್ತವದಲ್ಲಿ ತಮ್ಮ ಸ್ವಂತದ ಆಡಳಿತಾವಧಿಯಲ್ಲಿ ಎಷ್ಟೋ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವು ಮುಸಲ್ಮಾನರಿಗೆ ಅನೇಕ ರಿಯಾಯಿತಿಗಳನ್ನು ನೀಡಿತು’ ಅವರ ಸ್ತುತಿ ಮಾಡಿತು, ಹಾಗಾದರೆ ಈ ಮಾಧ್ಯಮದಿಂದ ರಾಜಕೀಯ ಲಾಭವನ್ನು ಪಡೆಯುವ ಕಾಂಗ್ರೆಸ್‌ಅನ್ನು ಸಿದ್ಧರಾಮಯ್ಯನವರು ಏಕೆ ವಿರೋಧಿಸಲಿಲ್ಲ ? ಏಪ್ರಿಲ್ ೨೦೨೩ ರಲ್ಲಿ ಸಿದ್ಧರಾಮಯ್ಯನವರು, ‘ನಾನು ಪುನಃ ಮುಖ್ಯಮಂತ್ರಿಯಾದರೆ, ಮುಸಲ್ಮಾನರಿಗೆ ಶೇ. ೪ ರಷ್ಟು ಮೀಸಲಾತಿಯನ್ನು ನೀಡುವೆನು’, ಎಂದು ಹೇಳಿದ್ದರು. ಸಿದ್ಧರಾಮಯ್ಯ ತಮ್ಮನ್ನು ಹಿಂದೂ ಎಂದು ಹೇಳಿಕೊಳ್ಳುತ್ತಾರೆ, ಹೀಗಿರುವಾಗ ಅವರಿಗೆ ಹಿಂದೂಗಳಿಗೆ ಮೀಸಲಾತಿಯನ್ನು ನೀಡಬೇಕು’, ಎಂದು ಏಕೆ ಅನಿಸುವುದಿಲ್ಲ ?
ಸ್ವತಃ ಹಿಂದೂವಾಗಿದ್ದರೂ ತಮ್ಮ ಧರ್ಮದ ಬಾಂಧವರ ಬಗ್ಗೆ ಇಂತಹ ತಾರತಮ್ಯವನ್ನು ತೋರಿಸುವ ಸಿದ್ಧರಾಮಯ್ಯ ಧರ್ಮದ್ವೇಷಿಗಳೇ ಆಗಿದ್ದಾರೆ ! ಮುಸಲ್ಮಾನರಿಗಾಗಿ ‘ಸಿದ್ಧರಾಮಯ್ಯ ಎಂದರೆ ಅವರ ತಂದೆ-ತಾಯಿ ಇದ್ದಂತೆ’, ಎಂದು ಹೇಳಿದರೆ ತಪ್ಪಾಗದು. ಇದರಿಂದಲೇ ಕರ್ನಾಟಕದ ಹಿಂದೂಗಳು ತಮ್ಮ ಮುಂದಿನ ಭವಿಷ್ಯವೇನು’ ಎಂದು ಗುರುತಿಸಿ ಜಾಗೃತರಾಗಬೇಕು. ಕಾಂಗ್ರೆಸ್‌ಗೆ ಸೇರಿರುವ ಮತ್ತು ತಮ್ಮನ್ನು ‘ಜಾತ್ಯತೀತ’ ಎಂದು ಹೇಳಿಕೊಳ್ಳುವ ಹಿಂದೂಗಳು ಇದರಿಂದ ಪಾಠ ಕಲಿಯಬೇಕು. ಇಲ್ಲಿಯ ವರೆಗಿನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷ ಜಾತಿಯ ಆಧಾರದಲ್ಲಿ ಮೀಸಲಾತಿಯ ಮೂಲಕ ಸಮಾಜವನ್ನು ಒಡೆದಿದೆ. ಈಗ ಕರ್ನಾಟಕದಲ್ಲಿ ಧರ್ಮಕ್ಕೆ ಸಂಬಂಧಿಸಿದಂತೆ ಇಂತಹ ಘಟನೆಗಳಾಗುವುದು ಖಂಡಿತ.
ಸಿದ್ಧರಾಮಯ್ಯನವರ ಹಿಂದೂದ್ವೇಷ !
ಸಿದ್ಧರಾಮಯ್ಯನವರು ಈ ಮೊದಲೂ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಮತಾಂಧರಿಂದ ಅನೇಕ ಹಿಂದೂಗಳ ಮತ್ತು ಹಿಂದುತ್ವನಿಷ್ಠರ ಕೊಲೆಯಾಗಿತ್ತು. ಈ ಕೊಲೆಗಳ ಹಿಂದೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ದಂತಹ ಸಂಘಟನೆಯ ಕೈವಾಡವಿದೆಯೆಂಬ ಅನುಮಾನವಿದೆ; ಆದರೆ ಆ ನಿಟ್ಟಿನಲ್ಲಿ ತನಿಖೆ ನಡೆದಿಲ್ಲ. ಭಾಜಪದ ಆಗಿನ ಸಂಸದ ಪ್ರಹ್ಲಾದ ಜೋಶಿ ಇವರೂ ಈ ಸತ್ಯವನ್ನು ದೃಢಪಡಿಸಿದ್ದರು. ಆದುದರಿಂದ ಪುನಃ ಇಂತಹ ಹತ್ಯೆಯ ಪ್ರಕರಣಗಳು ಎದುರಾದರೆ ಯಾರಿಗೂ ಅದರಲ್ಲಿ ಹೊಸತೇನು ಅನಿಸಲಾರದು. ಅಂದರೆ ಈ ರೀತಿ ಘಟಿಸಬಾರದು, ಎಂಬುದಕ್ಕಾಗಿ ಹಿಂದೂಗಳು ಮತ್ತು ಹಿಂದುತ್ವನಿಷ್ಠರೂ ಜಾಗರೂಕರಾಗಿರಬೇಕು. ಇದಕ್ಕೂ ಮೊದಲು ಯಾರಾದರೊಬ್ಬ ಜಾತ್ಯತೀತವಾದಿ ಅಥವಾ ಸಾಮ್ಯವಾದಿ ಮುಖಂಡನ ಕೊಲೆಯಾದರೆ ಅದರ ಆರೋಪವನ್ನು ಹಿಂದುತ್ವನಿಷ್ಠರ ಮೇಲೆ ಹೊರಿಸುತ್ತಿದ್ದರು. ಈ ಹಿಂಸಾತ್ಮಕ ಇತಿಹಾಸವು ಪುನರಾವರ್ತನೆಯಾಗಬಾರದು. ಸಿದ್ಧರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಇರುವಾಗ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ೧ ಸಾವಿರದ ೭೦೦ ಕಾರ್ಯಕರ್ತರನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೇ ಅದೇ ರೀತಿ ಘಟಿಸಿದರೆ ಹಿಂದೂಗಳು ಏನು ಮಾಡಬಲ್ಲರು ? ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಯು ಕರ್ನಾಟಕದಲ್ಲಿ ಮತ್ತೆ ಸಕ್ರಿಯವಾಗದಂತೆ ಹಿಂದೂಗಳು ಕ್ರಿಯಾತ್ಮಕ ಹೆಜ್ಜೆಗಳನ್ನಿಡಬೇಕು. ಹಿಂದೂಗಳನ್ನು ರಕ್ಷಿಸುವುದು ಇದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿಯಾಗಿದೆ.
ಸಿದ್ಧರಾಮಯ್ಯ ಇವರು, ತಮ್ಮ ಟಿಪ್ಪು ಸುಲ್ತಾನ್ ಪ್ರೇಮ ಹೊಸದೇನಲ್ಲ ಎಂದು ಹೇಳಿದರು. ಆದುದರಿಂದ ಅವರಿಂದ ಇಲ್ಲಿಯವರೆಗೆ ಅನೇಕ ಸ್ಥಳಗಳಲ್ಲಿ ಕ್ರೂರಕರ್ಮಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಹ ಆಯೋಜಿಸಲಾಗಿತ್ತು. ‘೧ ದಿನದಲ್ಲಿ ೫೦ ಸಾವಿರ ಹಿಂದೂಗಳನ್ನು ಮತಾಂತರಿಸಿದಂತಹ ಟಿಪ್ಪುವಿನ ಜಯಂತಿಯು ಹಿಂದೂಬಹುಸಂಖ್ಯಾತ ಭಾರತದಲ್ಲಿ ಆಚರಿಸಲ್ಪಡುತ್ತದೆ ಎಂಬುದಕ್ಕಿಂತ ಹೆಚ್ಚು ದುಃಖದ ಸಂಗತಿ ಇನ್ಯಾವುದಿದೆ ? ಆಗಲೂ ಟಿಪ್ಪುವಿನ ಜಯಂತಿ ಆಚರಣೆಯ ವಿರುದ್ಧ ಅನೇಕ ಹಿಂದೂಗಳು ರಸ್ತೆಗಿಳಿದು ಪ್ರತಿಭಟನೆಗಳನ್ನು ಮಾಡಿದ್ದರು. ಸಿದ್ಧರಾಮಯ್ಯನವರು ಹಿಂದುತ್ವನಿಷ್ಠರ ವಿರೋಧ ವನ್ನು ದುರ್ಲಕ್ಷಿಸಿ ರಾಜ್ಯದಲ್ಲಿ ಅಂಧಶ್ರದ್ಧಾ ನಿರ್ಮೂಲನಾ ಕಾನೂನನ್ನೂ ಜಾರಿಗೆ ತಂದಿದ್ದರು. ಹಿಂದೂಗಳು ಈಗ ಮತ್ತೆ ರಸ್ತೆಗಿಳಿಯಲು ಸಿದ್ಧರಾಗಬೇಕು; ಏಕೆಂದರೆ ಮುಸಲ್ಮಾನಪ್ರೇಮಿ ಮತ್ತು ಮುಸಲ್ಮಾನರಿಗೆ ಏನು ಬೇಕಾದರೂ ಮಾಡುವ ಸಿದ್ಧತೆಯಿರುವ ವ್ಯಕ್ತಿಯು ಮುಖ್ಯಮಂತ್ರಿ ಪದವಿಯಲ್ಲಿ ಕುಳಿತು ಕೊಂಡಿದ್ದಾರೆ. ‘ಯಾವುದೇ ಇತರ ಧರ್ಮಗಳಿಗಿಂತ ಹಿಂದುತ್ವ ದಲ್ಲಿ ಕೊಲೆ, ಹಿಂಸೆ ಮತ್ತು ಭೇದಭಾವ ಈ ವಿಷಯಗಳಿಗೆ ಬೆಂಬಲ ನೀಡಲಾಗುತ್ತದೆ’, ಎಂಬ ಹಿಂದೂದ್ವೇಷಿ ಹೇಳಿಕೆ ಯನ್ನು ಸಿದ್ಧರಾಮಯ್ಯನವರು ನೀಡಿದ್ದರು. ಇದಕ್ಕೆ ಸಂಬಂಧಿತ ಪುರಾವೆಗಳನ್ನು ಪ್ರಸ್ತುತ ಪಡಿಸಲು ಅವರಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ; ಏಕೆಂದರೆ ಕೊಲೆ, ಹಿಂಸೆ ಮತ್ತು ಭೇದಭಾವ ಈ ವಿಷಯಗಳು ಯಾವ ಧರ್ಮದಲ್ಲಿ ಘಟಿಸುತ್ತವೆ, ಎಂದು ಭಾರತೀಯ ನಾಗರಿಕರಿಗೆ ಗೊತ್ತಿದೆ. ಸಿದ್ಧರಾಮಯ್ಯನವರು ಹಿಜಾಬ್, ಗೋಹತ್ಯೆ ಇವುಗಳನ್ನೂ ಆಗಾಗ ಸರ್ಮರ್ಥಿಸಿದ್ದಾರೆ. ಸ್ವಾತಂತ್ರ್ಯವೀರ ಸಾವರಕರರನ್ನು ಬಹಳ ಕೀಳಾಗಿ ಕಂಡರು. ಅವರನ್ನು ಟೀಕಿಸಿದ್ದಾರೆ. ಆದುದರಿಂದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದ ನಂತರ ಏನು ಕ್ರಮಕೈಗೊಳ್ಳುವರು, ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಹಿಂದೂಗಳ ಅಗ್ನಿಪರೀಕ್ಷೆ !
೨೦೧೮ ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ‘ಸಿದ್ಧರಾಮಯ್ಯನವರು ‘ಹಿಂದೂ ವಿರೋಧಿ’ ಇರುವುದಾಗಿ ಪ್ರಚಾರ ಮಾಡಲಾಗಿತ್ತು; ಆದರೆ ಅದು ಸುಳ್ಳು ಎಂದು ಅವರ ಹೇಳಿಕೆಯಾಗಿತ್ತು. ಸಿದ್ಧರಾಮಯ್ಯನವರ ಆಡಳಿತಾವಧಿಯನ್ನು ನೋಡಿದರೆ ‘ಈ ಪ್ರಚಾರ ನಿಜವೋ ಅಥವಾ ಸುಳ್ಳೋ ?’ ಎಂದು ಜನತೆಯೇ ನಿರ್ಧರಿಸಬೇಕು. ತಮ್ಮನ್ನು ಹಿಂದೂ ಎಂದು ಹೇಳಿಕೊಳ್ಳುವ; ಆದರೆ ಅಧಿಕಾರಕ್ಕಾಗಿ ದೇವರು, ದೇಶ, ಧರ್ಮ ಮತ್ತು ತತ್ತ್ವ ಇವುಗಳಿಗೆ ತಿಲಾಂಜಲಿಯನ್ನು ನೀಡುವ ಸಿದ್ಧರಾಮಯ್ಯನವರ ನಿಜವಾದ (ಹಿಂದೂದ್ವೇಷಿ) ಮುಖವಾಡವನ್ನು ಪ್ರಜ್ಞಾವಂತ ಹಿಂದೂಗಳು ಗುರುತಿಸಿದ್ದಾರೆ ! ಈಗ ಕರ್ನಾಟಕದ ಹಿಂದೂಗಳು ಜಾಗೃತರಾಗಿ ಮುಸಲ್ಮಾನರ ಓಲೈಕೆಗಾಗಿ ಎತ್ತಲಾಗುವ ಪ್ರತಿಯೊಂದು ಕ್ರಮವನ್ನು ಸಂಘಟಿತರಾಗಿ ವಿರೋಧಿಸಬೇಕು. ಮುಸಲ್ಮಾನರು ಮತ್ತು ಭಯೋತ್ಪಾದಕರ ಒಳಿತಿನ (?) ಅಪಾಯಕಾರಿ ಮನೋದ್ದೇಶಗಳನ್ನು ಸಿದ್ಧರಾಮಯ್ಯ ಇವರು ಈ ಮೊದಲು ರಚಿಸಿದ್ದು ಅದನ್ನು ಕಾನೂನುಮಾರ್ಗದಿಂದ ವಿರೋಧಿಸುವ ಕೆಲಸವನ್ನು ಹಿಂದೂಗಳು ಮಾಡಬೇಕಾಗಿದೆ. ಭಾರತದಲ್ಲಿನ ಎಲ್ಲೆಡೆಯ ಹಿಂದೂಗಳು ಕರ್ನಾಟಕದ ಹಿಂದೂಗಳಿಗೆ ಸಹಾಯ ಮಾಡಬೇಕು ಮತ್ತು ಹಿಂದುದ್ವೇಷಕ್ಕೆ ಬಲಿಯಾಗದಂತೆ ಅವರನ್ನು ರಕ್ಷಿಸಬೇಕು.