ವಿಜಯನಗರ – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಹಂಪಿಯಲ್ಲಿ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಆ ಸಮಯದಲ್ಲಿ ಶ್ರೀ ಭುವನೇಶ್ವರಿ ದೇವಿಯ ಪೂಜೆ ಕೂಡ ನಡೆಸಿದರು. ನಂತರ ವಿದ್ಯಾರಣ್ಯ ಭಾರತೀ ಸರಸ್ವತಿ ಸ್ವಾಮೀಜಿ ಇವರು ಸಿದ್ದರಾಮಯ್ಯ ಇವರಿಗೆ ರುದ್ರಾಕ್ಷಿಯ ಮಾಲೆ ಹಾಕಿದರು. ಅದರ ನಂತರ ಪತ್ರಕರ್ತರ ಜೊತೆಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು, ಮೂಢನಂಬಿಕೆಯ ಮೇಲೆ ನನಗೆ ವಿಶ್ವಾಸವಿಲ್ಲ; ಆದರೆ ದೇವರ ಮೇಲೆ ನನಗೆ ವಿಶ್ವಾಸವಿದೆ. ಸಮಾಜಕ್ಕೆ ಒಳ್ಳೆಯದಾಗುವುದು, ಎಂದು ನನಗೆ ವಿಶ್ವಾಸವಿದೆ. ಕೆಟ್ಟದ್ದು ಆಗುವುದರ ಬಗ್ಗೆ ಇಲ್ಲ. ಪ್ರತಿಯೊಬ್ಬರಲ್ಲಿಯು ಹೀಗೆ ಶ್ರದ್ದೆ ಇರುತ್ತದೆ. ಸಮಾಜಕ್ಕಾಗಿ ಒಳ್ಳೆಯದು ಇದ್ದರೆ ಶ್ರದ್ಧೆ ಇಡೋಣ, ಕೆಟ್ಟದ್ದಾಗಿದ್ದರೆ ವಿಶ್ವಾಸ ಇಡುವುದು ಬೇಡ ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ‘ದೇವರ ಮೇಲೆ ನಂಬಿಕೆ ಇದೆ’ ಎಂದು ಹೇಳಿ ಉಪಯೋಗವಿಲ್ಲದೇ ಅದು ಪ್ರತ್ಯಕ್ಷ ಕಾಣಿಸಬೇಕು. ದೇವರ ಮೇಲೆ ಶ್ರದ್ಧೆ ಇರುವ ಹಿಂದೂಗಳಿಗಾಗಿ ಕಾರ್ಯವನ್ನೂ ಮಾಡಬೇಕು, ಅವರ ಅಡಚಣೆ ಬಗೆಹರಿಸಬೇಕು ಮತ್ತು ದೇವರ ಮೇಲಿನ ಶ್ರದ್ಧೆ ಹೆಚ್ಚಾಗಲು ಸಮಾಜಕ್ಕೆ ಸಾಧನೆ ಕಲಿಸುವ ವ್ಯವಸ್ಥೆ ಮಾಡಬೇಕು, ಹೀಗೆ ಮಾಡಿದರೆ ತಥಾಕಥಿತ ಮೌಢ್ಯವೂ ದೂರವಾಗುವುದು – ಸಂಪಾದಕರು |