ಮಹಾತ್ಮಾ ಗಾಂಧಿಯಂತಹ ಮಹಾನ ಹಿಂದೂಗಳನ್ನು ಹತ್ಯೆ ಮಾಡುವವರು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ !

ನಮ್ಮ ಮೇಲೆ ಹಿಂದೂ ವಿರೋಧಿ ಎಂದು ಆರೋಪಿಸುತ್ತಾರೆ; ಆದರೆ ಮಹಾತ್ಮಾ ಗಾಂಧಿಯಂತಹ ಶ್ರೇಷ್ಠ ಹಿಂದೂ ಯಾರೂ ಇಲ್ಲ ಇಂತಹ ಶ್ರೇಷ್ಠ ಹಿಂದೂವನ್ನು ಹತ್ಯೆ ಮಾಡಿದವರು ಹಿಂದೂ ಧರ್ಮದ ವಿಷಯದಲ್ಲಿ ಮಾತನಾಡುತ್ತಾರೆ

ಹಿಂದೂ ಅಥವಾ ಮುಸಲ್ಮಾನರಿಗೆ ಕಾನೂನು ಕೈಗೆತ್ತಿಕೊಳ್ಳುವ ಅನುಮತಿ ಇಲ್ಲ ! – ಮುಖ್ಯಮಂತ್ರಿ ಸಿದ್ಧರಾಮಯ್ಯ

ಯಾರೇ ಹಿಂದೂ ಅಥವಾ ಮುಸ್ಲಿಂ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ಹಿಂಸಾಚಾರದ ೩ ಘಟನೆಗಳ ಕುರಿತ ಪ್ರಶ್ನೆಗೆ ಉತ್ತರಿಸುವಾಗ ಈ ಹೇಳಿಕೆ ನೀಡಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರಕಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಭಕ್ತರಿಗಾಗಿ ಯಾತ್ರಿ ನಿವಾಸ !

ರಾಜ್ಯದ ಕಾಂಗ್ರೆಸ್ ಸರಕಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ದರ್ಶನಕ್ಕಾಗಿ ಹೋಗುವ ರಾಜ್ಯದ ಭಕ್ತರಿಗಾಗಿ ಅಯೋಧ್ಯೆಯಲ್ಲಿ ‘ಕರ್ನಾಟಕ ಯಾತ್ರಿ ನಿವಾಸ’ ನಿರ್ಮಿಸುವುದಾಗಿ ಘೋಷಿಸಿದೆ.

1992 ರ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗವಹಿಸಿದ 300 ಹಿಂದೂಗಳ ವಿರುದ್ಧ ರಾಜ್ಯದ ಕಾಂಗ್ರೆಸ್ ಸರಕಾರದಿಂದ ಕ್ರಮ !

ಜನವರಿ 22 ರಂದು ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ, ರಾಜ್ಯದ ಕಾಂಗ್ರೆಸ್ ಸರಕಾರವು ಶ್ರೀರಾಮ ಜನ್ಮಭೂಮಿ ಆಂದೋಲನದ ವಿಷಯದಲ್ಲಿ ರಾಜ್ಯದಲ್ಲಿ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತಿದೆ.

ಧೈರ್ಯವಿದ್ದರೆ ಹಿಜಾಬ್ ನಿಷೇಧ ಹಿಂಪಡೆಯಿರಿ ! – ಕಲ್ಲಡ್ಕ ಪ್ರಭಾಕರ ಭಟ್

ಕಾಂಗ್ರೆಸ್ ಸರಕಾರ ‘ಹಿಜಾಬ್ ನಿಷೇಧ ಹಿಂಪಡೆಯಲಿದೆ’ ಎಂದು ಹೇಳುತ್ತಿದ್ದಾರೆ. ಸರಕಾರ ಶಾಲಾ ಮಕ್ಕಳಲ್ಲಿ ಪುನಃ ಬಿರುಕಿನ ವಿಷಬೀಜ ಬಿತ್ತಲು ಯತ್ನಿಸುತ್ತಿದೆ.

Karnataka Hijab Ban : ಸಿದ್ದರಾಮಯ್ಯ ಒಂದು ಜಾತಿಯ ಮುಖ್ಯಮಂತ್ರಿ ಅಲ್ಲ, ಇಡೀ ರಾಜ್ಯದ ಮುಖ್ಯಮಂತ್ರಿ ! – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಸಿದ್ದರಾಮಯ್ಯ ಯಾವುದೇ ಜಾತಿ-ಪಂಗಡದ ಮುಖ್ಯಮಂತ್ರಿ ಅಲ್ಲ, ಇಡೀ ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಇವರು ಟೀಕಿಸಿದ್ದಾರೆ.

ಹಿಂದೂ ಸಂಘಟನೆಗಳ ವಿರೋಧದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಯೂಟರ್ನ್ !

ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ನಾವು ಇನ್ನೂ ಹಿಂಪಡೆದಿಲ್ಲ. ಈ ಕುರಿತು ನನಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಆಡಳಿತವು ತನಿಖೆ ನಡೆಸುತ್ತಿದೆ.

ದೆಹಲಿಗೆ ಹೋಗಲು ಖಾಸಗಿ ವಿಮಾನದ ಬಳಕೆ ಮಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸಚಿವ ಜಮೀರ್ ಅಹಮದ್ ಖಾನ್ ಇವರು ಒಂದು ಖಾಸಗಿ ಚಾರ್ಟಡ್ ವಿಮಾನದಿಂದ ನವದೆಹಲಿಗೆ ಹೋಗಿದ್ದರು.

ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಕರೆಯುವುದು ತಪ್ಪಾಗಿದ್ದರೆ, ರಾಜ್ಯವನ್ನು ‘ಕರ್ನಾಟಕ’ ಎಂದು ಕರೆಯುವುದು ತಪ್ಪು ! – ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಮಾರಂಭ ಹತ್ತಿರವಾಗುತ್ತಿರುವಾಗ ಹಿಂದೂ ರಾಷ್ಟ್ರದ ವಿಷಯದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಒಂದು ಸುದ್ಧಿವಾಹಿನಿಯಲ್ಲಿ ಮಾತನಾಡುತ್ತಿದ್ದರು.

‘ಕ್ರೈಸ್ತರ ಅಭಿವೃದ್ಧಿಗೆ ಬಜೆಟ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ಅನುಮತಿಸಬೇಕಂತೆ !’ – ವಿಧಾನ ಪರಿಷತ್ತಿನ ಮಾಜಿ ಶಾಸಕ ಐವನ್ ಡಿಸೋಜಾ

‘ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದಕ್ಕಾಗಿ ಇವ್ಹಾನ್ ಡೊಸೂಜಾ ಇವರು ಮುಖ್ಯಮಂತ್ರಿಗಳಿಗೆ ಆಭಾರ ಸಲ್ಲಿಸಿದರು.