ಪುರಾತತ್ವ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ನೋಟಿಸ್ !
ವಿಜಯನಗರ – ಇಲ್ಲಿನ ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವಸ್ಥಾನದ ಕಂಬವೊಂದಕ್ಕೆ ಮೊಳೆ ಹೊಡೆಯಲಾಗಿತ್ತು. ಈ ದೇವಾಲಯವು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀನದಲ್ಲಿದೆ ಮತ್ತು ಅವರ ಅನುಮತಿಯಿಲ್ಲದೆ ಇಲ್ಲಿ ಏನನ್ನೂ ಬದಲಾಯಿಸಲಾಗುವುದಿಲ್ಲ. ಕಂಬಕ್ಕೆ ರಂಧ್ರಗಳನ್ನು ಹೊಡೆದಿರುವ ಘಟನೆಯ ಕುರಿತು ಪುರಾತತ್ವ ಇಲಾಖೆ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಅದರ ಉತ್ತರವನ್ನು ಕೇಳಿದೆ. ನವೆಂಬರ್ 2 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ.