‘ಪೊಲೀಸ್ ಇಲಾಖೆಯನ್ನು ಕೇಸರಿಕರಣಗೊಳಿಸಲು ಬಿಡುವುದಿಲ್ಲ(ಅಂತೆ) !’ – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಬೆಂಗಳೂರು – ಪೊಲೀಸ್ ಇಲಾಖೆಯನ್ನು ಕೇಸರಿಕರಣಗೊಳಿಸಲು ಹೊರಟಿದ್ದೀರಾ ? ನಮ್ಮ ಸರಕಾರದಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು ಹಿರಿಯ ಪೊಲೀಸ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಉಪಸ್ಥಿತರಿದ್ದರು.

1. ಉಪಮುಖ್ಯಮಂತ್ರಿ ಶಿವಕುಮಾರ ಮಾತನಾಡಿ, ರಾಜ್ಯದ ಪೊಲೀಸ್ ಇಲಾಖೆ ದೇಶಾದ್ಯಂತ ಹೆಸರುವಾಸಿಯಾಗಿದೆ. ನೀವು ಆ ಗೌರವ ಮತ್ತು ಘನತೆಯನ್ನು ನಾಶಪಡಿಸಿದ್ದೀರಿ. ಎಲ್ಲಿ ನೋಡಿದರೂ ಹಣ ಮಾತ್ರ ಕಾಣುತ್ತಿತ್ತು. ನಮ್ಮ ಸರಕಾರದಲ್ಲಿ ಎಲ್ಲವೂ ಸ್ವಚ್ಛವಾಗಿರಬೇಕು. ಈ ಸರಕಾರದಿಂದ ಜನರು ದೊಡ್ಡ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಇದನ್ನು ಪೊಲೀಸ್ ಇಲಾಖೆಯಿಂದಲೇ ಆರಂಭಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.

2. ತಮ್ಮ ಮಾತನ್ನು ಮುಂದುವರೆಸುತ್ತಾ, ನಿಮ್ಮಿಂದ ನಮಗೆ ಹಣದ ಅವಶ್ಯಕತೆ ಇಲ್ಲ. ಜನರಿಗೆ ತೊಂದರೆಯಾಗದಂತೆ ಕೆಲಸ ಮಾಡಿದರೆ ಸಾಕು. ನಿಮ್ಮ ಹಿಂದಿನ ನಡವಳಿಕೆ ನಮ್ಮ ಸರಕಾರಕ್ಕೆ ಒಪ್ಪಿಗೆ ಇಲ್ಲ. ನೀವು ನನ್ನ ಹಾಗೂ ಸಿದ್ದರಾಮಯ್ಯ ಜೊತೆ ಹೇಗೆ ನಡೆದುಕೊಂಡಿದ್ದೀರಿ ಎಂಬುದು ನನಗೆ ಗೊತ್ತು. ಇದೆಲ್ಲಾ ನಮ್ಮ ಸರಕಾರದಲ್ಲಿ ನಡೆಯುವುದಿಲ್ಲ. ನಿಮ್ಮ ನಡವಳಿಕೆಯನ್ನು ನೀವು ಬದಲಾಯಿಸಿಕೊಳ್ಳಬೇಕು, ಇಲ್ಲದಿದ್ದರೆ ನಾವು ನಿಮ್ಮನ್ನು ಬದಲಾಯಿಸುತ್ತೇವೆ. ನಾವು ದ್ವೇಷಿಸುವುದಿಲ್ಲ. ನಾವು ಅದನ್ನು ನಂಬುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ಜನರಿಗೆ ಈ ಸರಕಾರದ ಮೇಲೆ ನಂಬಿಕೆ ಇದೆ. ಈ ಸರಕಾರದಿಂದ ಬದಲಾವಣೆ ಆಗುತ್ತಿದೆ ಎಂಬ ಸಂದೇಶವನ್ನು ನಿಮ್ಮ ಕೆಲಸದ ಮೂಲಕ ಜನರಿಗೆ ನೀಡಿ ಎಂದು ಹೇಳಿದರು.

ಸಂಪಾದಕರ ನಿಲುವು

* ರಾಜ್ಯದಲ್ಲಿ ಪೊಲೀಸ್ ಪಡೆ ಕೇಸರಿಕರಣವಾಗುತ್ತಿದ್ದರೆ ಇಲ್ಲಿನ ಹಿಂದೂಗಳನ್ನು ಕೊಂದ ಮತಾಂಧರಿಗೆ ಶಿಕ್ಷೆಯಾಗುತ್ತಿತ್ತು ಎಂಬುದನ್ನು ಶಿವಕುಮಾರ ಗಮನದಲ್ಲಿಟ್ಟುಕೊಳ್ಳಬೇಕು !

* ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಪೊಲೀಸ್ ಪಡೆ ಕೇಸರಿಕರಣವಾಗುವುದಿಲ್ಲ; ಆದರೆ ಅದು ಹಸಿರುಕರಣವಾಗುವುದು ಖಚಿತ !