ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನನ್ನು ರದ್ದುಪಡಿಸಬಾರದು !

ಬೆಂಗಳೂರಿನಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ೧೪ ಸಂತ-ಮಹಾತ್ಮರಿಂದ ಪ್ರಸ್ತಾಪ ಸಮ್ಮತ

ಬೆಂಗಳೂರು – ಹಿಂದಿನ ಭಾಜಪ ಆಡಳಿತ ಸರಕಾರವು ರಾಜ್ಯದಲ್ಲಿ ಮತಾಂತರ ನಿಷೇಧ ಹಾಗೆಯೇ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಿತ್ತು. ಅದನ್ನು ಸದ್ಯದ ಕಾಂಗ್ರೆಸ್ ಸರಕಾರವು ರದ್ದುಗೊಳಿಸಬಾರದು ಹಾಗೆಯೇ ಅದರ ತೀವ್ರತೆನ್ನೂ ಕಡಿಮೆ ಮಾಡಬಾರದು ಎಂಬ ಮನವಿಯನ್ನು ಇಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ತಿನಿಂದ ಆಯೋಜಿಸಲಾದ ಈ ಸಮ್ಮೇಳನದಲ್ಲಿ ವಿವಿಧ ಮಠಗಳ ೧೪ ಸಂತ-ಮಹಂತರು ಸಹಭಾಗಿದ್ದರು. ಈ ಸಮಯದಲ್ಲಿ ಮೇಲಿನ ಬೇಡಿಕೆಗಳ ಪ್ರಸ್ತಾಪವನ್ನು ಒಮ್ಮತದಿಂದ ಸಮ್ಮತಿಸಲಾಯಿತು.

ನಗರದಲ್ಲಿನ ಮಲ್ಲೇಶ್ವರಂನ ಯದುಗಿರಿ ಯತಿರಾಜ ಮಠದಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ `ಗೋಹತ್ಯೆ’, `ಹಿಂದೂ ಎಂದರೆ ಅವಿಭಜಿತ ಕುಟುಂಬ’, `ಪರಿಸರ’ ಮುಂತಾದ ವಿಷಯಗಳ ಬಗ್ಗೆಯೂ ಚರ್ಚಿಸಿ ಪ್ರಸ್ತಾಪವನ್ನು ಸಮ್ಮತಿಸಲಾಯಿತು. ಪ್ರಸ್ತಾಪದ ಮೇಲೆ ಸಹಿ ಮಾಡಿರುವವರಲ್ಲಿ ಯದುಗಿರಿ ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ರಾಮನುಜ ಜೀಯರ ಸ್ವಾಮೀಜಿ, ರಾಮಕೃಷ್ಣ ಮಿಷನ್ನಿನ ಚಂದ್ರೆಶಾನಂದಜಿ, ಮಹಾಲಿಂಗೇಶ್ವರ ಮಠದ ರವಿಶಂಕರ ಶಿವಾಚಾರ್ಯ ಸ್ವಾಮೀಜಿಯವರೊಂದಿಗೆ ಒಟ್ಟು ೧೪ ಮಹಂತರು ಸಹಭಾಗಿಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಲೇ ತಮ್ಮ ಸರಕಾರ ಮತಾಂತರ ವಿರೋಧಿ ಕಾನೂನು ಹಿಂಪಡೆಯುವುದು ಎಂದು ಹೇಳಿದ್ದರು; ಆದರೆ ಇಲ್ಲಿಯವರೆಗೆ ಗೋಹತ್ಯಾ ನಿಷೇಧ ಕಾನೂನು ರದ್ದುಪಡಿಸುವ ವಿಚಾರ ಅವರಲ್ಲಿ ಇಲ್ಲ. (ಹಿಂದೂಗಳ ಮತದಿಂದ ಆರಿಸಿ ಬಂದಿರುವ ಕೃತಘ್ನ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರ ! – ಸಂಪಾದಕರು)