ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಘೋಷಣೆ!
ಬೆಂಗಳೂರು – ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಅನುದಾನವನ್ನು 400 ಕೋಟಿಯಿಂದ 3 ಸಾವಿರ ಕೋಟಿಗೆ ಹೆಚ್ಚಿಸಿದ್ದೇನೆ. ಮುಂದಿನ ವರ್ಷವೂ ಅನುದಾನ ಹೆಚ್ಚಿಸುತ್ತೇನೆ. ನನ್ನ ಅಧಿಕಾರಾವಧಿ ಮುಗಿಯುವವರೆಗೆ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಿಸಿದ್ದಾರೆ. ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ”ರಾಜ್ಯದಲ್ಲಿ ನಾವು ಎಲ್ಲ ಸಮುದಾಯಗಳ ಉನ್ನತಿಗಾಗಿ ಶ್ರಮಿಸುತ್ತೇವೆ. ಜತೆಗೆ ರಾಜ್ಯದ ಸಂಪತ್ತು ಎಲ್ಲರಿಗೂ ಸಿಗುವಂತಾಗಬೇಕು ಎಂದರು.
ನನ್ನ ಅವಧಿ ಮುಗಿವ ಮುನ್ನ ಮುಸ್ಲಿಂ ಅನುದಾನ 10 ಸಾವಿರ ಕೋಟಿಗೆ ಏರಿಸುತ್ತೇನೆ: ಸಿದ್ಧರಾಮಯ್ಯ
‘ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ಮೀಸಲಿಡುವುದು ನನ್ನ ಕೆಲಸ, ಅದನ್ನು ಮಾಡುತ್ತೇನೆ’#Karnataka #Congress #Siddaramaiah #BearyWelfareAssociation #MuslimCommunity #Bengaluruhttps://t.co/Om4MXkUklW
— Asianet Suvarna News (@AsianetNewsSN) September 30, 2023
‘ಮುಸ್ಲಿಮರಿಗೆ 3 ಸಚಿವ ಸ್ಥಾನ ಕೊಡಿ !’ (ಅಂತೆ) – ಸೈಯದ್ ಮುಹಮ್ಮದ್ ಬ್ಯಾರಿ
ಈ ಸಂದರ್ಭದಲ್ಲಿ ಬ್ಯಾರಿ ಅಸೋಸಿಯೇಶನ್ ಅಧ್ಯಕ್ಷ ಸೈಯದ್ ಮಹಮ್ಮದ್ ಬ್ಯಾರಿ ಮಾತನಾಡಿ, ಸರಕಾರ ರಚನೆಯಲ್ಲಿ ಮುಸ್ಲಿಮರು ದೊಡ್ಡ ಪಾತ್ರ ವಹಿಸಿದ್ದಾರೆ. ಇನ್ನು ಕನಿಷ್ಠ 3 ಸಚಿವ ಸ್ಥಾನಗಳನ್ನು ಮುಸ್ಲಿಮರಿಗೆ ನೀಡಬೇಕು. ನಮ್ಮ ಯು.ಟಿ. ಖಾದರ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಸಂಪಾದಕೀಯ ನಿಲುವುರಾಜ್ಯದಲ್ಲಿ ಎಷ್ಟು ಅಲ್ಪಸಂಖ್ಯಾತರು ತೆರಿಗೆ ಪಾವತಿಸುತ್ತಾರೆ ? ಎಂಬುದನ್ನು ಸಿದ್ದರಾಮಯ್ಯ ಸಾರ್ವಜನಿಕರಿಗೆ ಹೇಳಬಹುದೇ ? |