ಮಣಿಪುರದ ಗಲಭೆ ಪೀಡಿತ ಪ್ರದೇಶಗಳಿಗೆ ಹೋಗುತ್ತಿದ್ದ ರಾಹುಲ್ ಗಾಂಧಿಗೆ ಪೊಲೀಸರಿಂದ ತಡೆ
ಸುಮಾರು ೨ ತಿಂಗಳಿನಿಂದ ಗಲಭೆ ನಡೆಯುತ್ತಿರುವ ಮಣಿಪುರದಲ್ಲಿ ೨ ದಿನಗಳ ಪ್ರವಾಸಕ್ಕೆ ತೆರಳಲಿದ್ದ ರಾಹುಲ್ ಗಾಂಧಿಯವರನ್ನು ಇಂಫಾಲ್ ಬಳಿ ಪೊಲೀಸರು ತಡೆದಿದ್ದಾರೆ. ಇಲ್ಲಿಂದ ೨೦ ಕಿ.ಮೀ ದೂರದಲ್ಲಿರುವ ವಿಷ್ಣುಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿಯವರನ್ನು ಮುಂದೆ ಹೋಗಲು ಬಿಡಲಿಲ್ಲ.